nil
NA
ಕಥೆಗಳೆಂದರೇನು? ನನ್ನ ಪ್ರಕಾರ ಅನುಭವದ ಹಗೇವಿನಲ್ಲಿ ಕಾಲ್ಪನಿಕತೆಯ ಲೇಪವನ್ನು ಹೊತ್ತು ಹುಟ್ಟುವ ಬರಹಗಳೇ ಕಥೆಗಳು. ಹಾಗೇ ಹುಟ್ಟಬೇಕು ಕಥೆಗಳು, ಅನುಭವಿಸಿ ಬರೆಯದ ಹೊರತು, ಅಸ್ವಾದಿಸಿಕೊಂಡು ಓದಲಾಗುವುದಿಲ್ಲ. ಈ ಇಡೀ ಪುಸ್ತಕದಲ್ಲಿ ಓದುಗನಿಗೊಂದು ಅಂತಹ ಆಸ್ವಾದ ದೊರೆಯುವುದು ಖಂಡಿತ. ಇಲ್ಲಿ ಕಾಗಕ್ಕ-ಗುಬ್ಬಕ್ಕನ ಕಥೆಗಳಿಲ್ಲ. ಇಲ್ಲಿರುವುದೆಲ್ಲ ನಮ್ಮ-ನಿಮ್ಮ ಕಥೆಗಳೇ. ನಾವುಗಳು ಹಿಂದೆಂದೋ ನೋಡಿದ್ದೋ, ಕೇಳಿದ್ದೋ, ಅನುಭವಿಸಿದ ಅನುಭವಗಳೋ ಕಥೆಗಳಾಗಿ ನಮ್ಮ ಮುಂದೆ ನಿಂತಂತೆ ಭಾಸವಾಗುತ್ತದೆ. ಮಲೆನಾಡ ಸೊಗಡಿರುವ ಕಥೆಗಳು, ಬಯಲು ಸೀಮೆಗೂ ಸಲ್ಲುತ್ತವೆ. ಇಲ್ಲಿರುವ ಹೆಂಗಳೆಯರ ನೋವುಗಳು, ಗಂಡಸರನ್ನೂ ಕಾಡುತ್ತವೆ. ಕೆಲವೊಂದು ಕಥೆಗಳು ತರ್ಕಕ್ಕೆ ದೂಡಿದರೆ, ಇನ್ನಷ್ಟು ಕಥೆಗಳು ಮನಸ್ಸನ್ನು ಆದ್ರ್ರಗೊಳಿಸುತ್ತವೆ. ನನ್ನ ಪ್ರಕಾರ ಈ ಪುಸ್ತಕವನ್ನ ಒಂದೇ ಗುಕ್ಕಿನಲ್ಲಿ ಓದಲಾಗುವುದಿಲ್ಲ. ಅದಕ್ಕೆ ಕಾರಣ ಇಲ್ಲಿ ಪ್ರಸ್ತಾಪವಾಗಿರುವ ವಿಷಯಗಳು. ಒಂದು ಕಥೆಯ ವಿಷಯವನ್ನ ಅರಗಿಸಿಕೊಂಡು ಮುಂದಿನ ವಿಷಯಕ್ಕೆ ತಮ್ಮನ್ನ ತಾವು ತೆರೆದುಕೊಳ್ಳಲು ಖಂಡಿತ ಓದುಗನಿಗೆ ಸಮಯಬೇಕು. ಅಷ್ಟು ಗಾಢವಾಗಿವೆ ವಿಷಯಗಳು. ಉಳಿದಂತೆ, ಓದುಗರಿಗೆ ಶ್ರೀಮತಿ ಶುಭಶ್ರೀ ಭಟ್ ಹೊಸಬರಲ್ಲ. ಅವರಿಗೆ ಭಾಷೆಯ ಮೇಲೆ ಮತ್ತು ಬರಹದ ಮೇಲಿರುವ ಅದ್ಭುತ ಹಿಡಿತದ ಬಗ್ಗೆ ಓದುಗರಿಗೆ ತಿಳಿದೇ ಇದೆ. ಹಾಗಾಗಿ ಅದರ ಬಗ್ಗೆ ಹೆಚ್ಚೇನೂ ಹೇಳದೆ, ಮತ್ತೊಂದು ಭಾವಯಾನಕ್ಕೆ ತಯಾರಾಗಿ ಎಂದಷ್ಟೇ ಹೇಳಬಲ್ಲೆ. ಕಥೆಗಳು ನಿಜಕ್ಕೂ ಅದ್ಭುತವಾಗಿ ಮೂಡಿಬಂದಿವೆ. ಓದಿ ನೋಡಿ ಒಮ್ಮೆ... ಹ್ಯಾಪಿ ರೀಡಿಂಗ್. - ಅರ್ಜುನ್ ದೇವಾಲದಕೆರೆ
#
ಕನ್ನಡದಲ್ಲಿ ತನಗ ಅವತರಿಸಿದ ಗಳಿಗೆ ವಿಶಿಷ್ಟವಾದದ್ದು ಎಂದು ಹೇಳಬೇಕು. ಹಲವರು ಈ ಪ್ರಕಾರದಲ್ಲಿ ಬರೆಯುತ್ತಿದ್ದಾರೆ. ಸಂಕಲನಗಳು ಬಂದಿವೆ. ಕಳೆಯ ನಡುವೆ ಬೆಳೆ ಕಾಣದಾಗುತ್ತಿದೆ ಎಂಬ ಆತಂಕವನ್ನು ಕಳೆಯುವಂತೆ ಭರವಸೆಯ ಬೆಳೆ ತೆಗೆದಿದ್ದಾರೆ ಸುನೀಲ ಹಳೆಯೂರು ಅವರು. ಓದಿದ್ದು ವಾಣಿಜ್ಯ ವೃತ್ತಿಯಲ್ಲಿ ಸಂಸ್ಥೆಯೊಂದರ ಹಿರಿಯ ಮಾರಾಟ ವ್ಯವಸ್ಥಾಪಕ. ಒಲಿದಿದ್ದು ಕಾವ್ಯಕ್ಕೆ: ಕಾವ್ಯದ ಆಂತರ್ಯದ ಪರಿಶೋಧನೆಯಲ್ಲಿ ವಿಶೇಷ ಆಸಕ್ತಿ. ಇದು ಸುನೀಲರ ಅನನ್ಯತೆ. ಕಾವ್ಯವನ್ನು ರಮಣೀಯವಾಗಿಸುವುದು ಅವರಿಗೆ ಮುಖ್ಯವಲ್ಲ.
Showing 331 to 360 of 494 results