ಸಾಲುಗಳು ಮುಗಿದರಬಹುದು ಆದರೆ, ಅನುಭವಗಳಲ್ಲ ಅನುಭವಗಳಿಗಿಂತ ದೊಡ್ಡ ಪಾಠ ಇನ್ನೊಂದಿಲ್ಲ. ಅನುಭವದ ಮುಂಚೆ ಇರುವ ನಿರೀಕ್ಷೆ ಮತ್ತು ವಿಷಯ ಅನುಭವದ ನಂತರ ಬದಲಾಗಬಹುದು, ಅನುಭವದ ಅನುಭವ ಅನುಭವಿಸಿದವರಿಗೆ ಮಾತ್ರ ಗೊತ್ತು. ಕಂಡಿತವಾಗಿಯೂ ಇವನು ಇನ್ನಷ್ಟು ಬರೆಯುತ್ತಾನೆ ಎಂಬ ನಿಮ್ಮ ಮನಸ್ಸಿನ ಒಂದು ಸಣ್ಣ ನಂಬಿಕೆಯೇ ನನ್ನ ಸಾಹಿತ್ಯ ಬದುಕಿನ ಬಹು ದೊಡ್ಡ ಗೆಲುವು.. - ಮಂಜುನಾಥ್ ಸಿ ಕೆ ದೊಡ್ಡನಿ
| Category: | ಕನ್ನಡ |
| Sub Category: | ಕಥಾ ಸಂಕಲನ |
| Author: | ಮಂಜುನಾಥ್ ಸಿ. ಕೆ. ದೊಡ್ಮನಿ | Manjunath C. K Dodmani |
| Publisher: | ಅಕ್ಷರ ನಾದ ಪಬ್ಲಿಕೇಷನ್ಸ್ | Akshara naada Publications |
| Language: | Kannada |
| Number of pages : | |
| Publication Year: | 2025 |
| Weight | 300 |
| ISBN | |
| Book type | Paperback |
Delivery between 2-6 Days
No returns accepted. Please refer our full policy
Your payments are 100% secure
ಬಾಡಿದ ಹೂ ಬರೆದ ಬಾಡದ ಹೂ
ಹೂವಿನಲ್ಲಿರುವ ಕಂಪಿನಂತೆ ಕಬ್ಬಿನಲ್ಲಿರುವ ಸಿಹಿಯಂತೆ ಚಂದವದಲ್ಲಿರುವ ಶೋಡಸ ಕಳೆಯಂತೆ ಮಂಜುನಾಥ್ ಸಿ ಕೆ ದೊಡ್ಡಮನಿ ಎನ್ನುವ ಕಥಾಪ್ರತಿಭೆ ನೋಡುತ್ತಿದ್ದರೆ ಕಿರಿದರಲ್ಲಿಯೇ ಹಿರಿತನದ ಕೌಶಲ ಎದ್ದು ಕಾಣುತ್ತಿದೆ. ಸುಮಾರು ಎಂಟು ಒಂಬತ್ತು ವರ್ಷಗಳ ಹಿಂದೆ ಹತ್ತನೆಯ ತರಗತಿ ಓದುತ್ತಿದ್ದಾಗ ಶಹಪುರದಲ್ಲಿಯ ಎಸ್ ಎಸ್ ಎಲ್ ಸಿ ಕಾರ್ಯಗಾರದಲ್ಲಿ ಮೊದಲ ಭೇಟಿ ಮಾಡಿದ ಈ ಮಂಜುನಾಥ ಅನ್ನುವ ಶಿಜ್ಯೋತಮ 11 ಕಥೆಗಳನ್ನು ಸೇರಿಸಿ ಬರೆದ ಈ ಕಥ ಸಂಕಲನದಲ್ಲಿ ಒಂದೊಂದು ಕಥಾ ರತ್ನಗಳು ಇವೆ. ಅಂಗ ತಾರತಮ್ಯದ ನಿಷೇಧ ಭಾವವನ್ನು ವ್ಯಕ್ತಪಡಿಸಿದ 'ಪಾಗಿ ಬ್ಯಾನಿ" ಇರುವೆಯಿಂದ ಮೌಲ್ಯ ಕಲಿತ "ನಾನು ಮತ್ತು ಇರುವೆ" ಎಂಬ ಕತೆ ಮನಮಿಡಿಯುವಂತಿದೆ. ಅನುಭವದ ಸಾರವನ್ನು ನಮಾಗಮಗೊಳಿಸಿ ಆಡು ಭಾಷೆಯ ಮೂಲಕ ಕಿರಿಯ ಓದುವರಿಗೂ ಸಹಿತ ಅರ್ಥವಾಗುವ ಭಾಷೆಯನ್ನು ಬಳಸಿ ಬರೆದಿರುವುದು ಶ್ಲಾಘನೀಯ. "ಮೌಡ್ಯದಿಂದಾದ ಕೊಲೆ" ಎಂಬ ಕತೆಯಲ್ಲಿ ಪ್ರಾಣಿ ಪ್ರಿಯತೆ ವ್ಯಕ್ತಪಡಿಸಿದ್ದಾರೆ 'ಡಬ್ಬ ನನ್ನ ಮಗಂದು ಈ ವಯಸ್ಸು" ಕಥೆಯಲ್ಲಿ ಹದಿಹರೆಯದ ವಯಸ್ಸಿನ ಯುವಕರು ಪಂಚಲಿತ ಮನ ಹೀಗೆ ಒಂದೊಂದು ಕಥೆಯನ್ನು ಓದುತ್ತಾ ಹೋದರೆ ಜೀವನದ ಒಂದೊಂದು ಮೌಲ್ಯಗಳು ಅನುಭವಕ್ಕೆ ಬರುತ್ತವೆ. ಇಂತಹ ಮೌಲ್ಯಗಳ ಬುತ್ತಿಯನ್ನು ಹೊತ್ತ ಈ ಕಥಾ ಸಂಕಲನ ಶಿಷ್ಯ
ಮಂಜುನಾಥ್ ಸಿ ಕೆ ದೊಡ್ಡಮನಿ ಬರೆಯುತ್ತಿರುವುದು ನಮಗೆ ಬಹಳ ಖುಷಿ ತಂದಿದೆ. ಹನ್ನೊಂದು ಮುತ್ತಿನಂತ ಕಥೆ ಹೊತ್ತಿರುವ ಈ ಹೊತ್ತಿಗೆ ಈ ಬಾಲ ಕಥಾಕಾರರು ಪರಕಾಯ ಪ್ರವೇಶ ಮಾಡಿರುವುದಂತೂ ಸತ್ಯ.
ಶಿಷ್ಯನ ಈ ಮುಂದಕ್ಕೆ ನೋಡುತ್ತಿದ್ದರೆ ಭವಿಷ್ಯದಲ್ಲಿ ಒಬ್ಬ ಅತ್ಯುತ್ತಮ ಕಥಾಗಾರರಾಗಿ ಹೊರಹೊಮ್ಮುವುದರಲ್ಲಿ ಸಂಶಯವಿಲ್ಲ ಹತ್ತಾರು ನಹತ್ರ ಮನದಲ್ಲಿ ಮನೆ ಮಾಡುವ ನಾಹಿತಿಯಾಗಿ ಮಂಜುನಾಥ್ ಸಿ ಕೆ ದೊಡ್ಡಮನಿ ಹೊರಹೊಮ್ಮಲಿ ಎಂದು ಶುಭ ಹಾರೈಸುತ್ತೇನೆ
ಶ್ರೀ ಬಸಯ್ಯ ಸ್ವಾಮಿ ಕಕ್ಕೇರಾ ಮುಖ್ಯ ಗುರುಗಳು ಸರಕಾರಿ ಪ್ರೌಡಶಾಲೆ ಕಕ್ಕೇರಾ ತಾಲೂಕು ಸುರಪುರ ಜಿಲ್ಲಾ ಯಾದಗಿರಿ
ಮಂಜುನಾಥ್ ಸಿ. ಕೆ. ದೊಡ್ಮನಿ | Manjunath C. K Dodmani |
0 average based on 0 reviews.