nil
ಕಮಲನಯನ ಕಣ್ಣಿಟ್ಟಿದ್ದ ಸಂನ್ಯಾಸಿ ಒಳ್ಳೆಯವನೋ? ಕೆಟ್ಟವನೋ? ಕೆಲವೊಮ್ಮೆ ಒಳ್ಳೆಯವನಾಗಿಯೂ, ಕೆಲವೊಮ್ಮೆ ದುಷ್ಟನಾಗಿಯೂ ಕಾಣುವ ಸಂನ್ಯಾಸಿಯು ಎರಡು ವ್ಯಕ್ತಿತ್ವವುಳ್ಳವನೇ? ಕಮಲನಯನ ಮತ್ತು ಅವನ ಗುಂಪು ಶೋಧಿಸಿದಾಗ ದೊರಕುವ ಆಘಾತಕರ ಸತ್ಯಗಳು. ಬಲೆಯನ್ನು ಇತರರನ್ನು ಹಿಡಿಯಲು ಹರಡಿದರೂ ಅದು ಮೊದಲು ಬಲೆ ಹರಡಿದವನನ್ನೇ ಬಲಿ ತೆಗೆದುಕೊಳ್ಳುವುದೇನು?
ಜೆಯಮೋಹನ್ ಅವರು ಸತ್ಯಕ್ಕೆ ಮುಸುಕೆಳೆಯದೆ, ಅದರ ಉಗ್ರ ಸ್ವರೂಪವನ್ನು ಹಸಿಯಾಗಿಯೇ ನಮ್ಮ ಮುಂದಿಡುತ್ತಾರೆ. ಅವರ ಕೃತಿಗಳನ್ನು ಓದದಿದ್ದರೆ ಸಮಕಾಲೀನ ಭಾರತವನ್ನು ಕುರಿತ ನಮ್ಮ ಅರಿವು ಅಪೂರ್ಣವಾಗಿ ಉಳಿಯುತ್ತದೆ. - ವಿವೇಕ ಶಾನಭಾಗ
ತನ್ನ ಮಾಲೀಕನ ಮಗಳನ್ನು ಪತ್ತೆ (ತುಬ್ಬು) ಹಚ್ಚಲು ಮಾನವ್ ಬೆಂಗಳೂರಿನಿಂದ ಅಮೆರಿಕಾಗೆ ಹೋಗುತ್ತಾನೆ. ಅವಳು ಹೇಗಿರುವಳೆಂದೂ, ಎಲ್ಲಿರುವಳೆಂದೂ ತಿಳಿಯದಿದ್ದ ಅವನು ಅಮೆರಿಕಾದ ಅನೇಕ ಊರುಗಳಿಗೂ, ಕದ್ದು ಮೆಕ್ಸಿಕೋಗೂ, ನಂತರ ಮತ್ತೊಂದುಖಂಡಕ್ಕೂ ಹೋಗುತ್ತಾನೆ. ಅವನ ಪ್ರಯತ್ನದಲ್ಲಿ ಅವನು ಸಾಫಲ್ಯಕಂಡನೇ? ಆಸಕ್ತಿಕರ, ಮಾಹಿತಿಪೂರ್ಣ ಕಾದಂಬರಿ...
"ಬಾಸ್, ಆ ಮುಗ್ಧ ಹುಡುಗಿ ಇಂಪನಾ ಇದ್ದಾಳಲ್ಲಾ ನೋಡೋದಿಕ್ಕೂ ಚೆಲುವೆ. ನಮ್ಮ ಈ ಯೋಜನೆಗೆ ಅವಳೇ ಸರಿಯಾದ ಆಯ್ಕೆ" “ಸರಿ, ಹಾಗಾದ್ರೆ ಇವತ್ತು ಸಂಜೆ ಅವಳನ್ನು ಭೇಟಿಯಾಗು" ಅವನು ಒಪ್ಪಿಯಿಗೆಯಿತ್ತ ಇಂಪನಾ ಕೆಲಸಕ್ಕೆ ಹೊರಡುವ ಆತುರದಲ್ಲಿ ಬೆಳಿಗ್ಗೆ ಒಬ್ಬಳೇ ನಿರ್ಜನ ರಸ್ತೆಯಲ್ಲಿ ಬರುತ್ತಿರುವಾಗ ಗಕ್ಕನೆ ಕಾರೊಂದು ಬಂದು ಅವಳ ಹತ್ತಿರವೇ ನಿಂತಿತು. "ಮೇಡಂ, ಬನ್ನಿ ನಿಮಗೆ ಇನ್ನು ಬಸ್ಸು ಸಿಗೊಲ್ಲ. ನಾನೇ ನಿಮ್ಮನ್ನು ಡ್ರಾಪ್ ಮಾಡ್ತೀನಿ" ಪರಿಚಿತ ಧ್ವನಿ ಕೇಳಿದಂತಾಯಿತು. ಅವಳು ಹಿಂದೆ ಮುಂದೆ ಆಲೋಚಿಸದೆ ತೆರೆದ ಕಾರಿನ ಬಾಗಿಲೊಳಗೆ ತೂರಿಕೊಂಡಳು. ಬಾಗಿಲು ಕಾರು ರೊಯ್ಯನೆ ಮುಂದಕ್ಕೋಡಿತು... ಅವನು ಪಕ್ಕದಲ್ಲಿ ಕುಳಿತವಳತ್ತ ವಿಚಿತ್ರ ನೋಟ ಹರಿಸಿದ ಮುಂದೆ...? ನೀವೇ ಓದಿ ನೋಡಿ... 'ತೂಗುದೀಪ' ವಿಭಿನ್ನ ಕಥಾಹಂದರದ ಕುತೂಹಲಭರಿತ ಪತ್ತೇದಾರಿ ಕಿರು ಕಾದಂಬರಿ.
Showing 301 to 330 of 731 results