| Category: | ಕನ್ನಡ |
| Sub Category: | ಕಾದಂಬರಿ |
| Author: | ಗಣೇಶ್ ಪ್ರಸಾದ್ ನಾಯಕ್ | Ganesh Prasad Nayak |
| Publisher: | ಸಾಹಿತ್ಯಲೋಕ ಪಬ್ಲಿಕೇಷನ್ಸ್ | Sahityaloka Publication |
| Language: | Kannada |
| Number of pages : | |
| Publication Year: | 2025 |
| Weight | 300 |
| ISBN | |
| Book type | Paperback |
Delivery between 2-6 Days
No returns accepted. Please refer our full policy
Your payments are 100% secure
ಭಾರತದ ಪ್ರಾಚೀನ ಶಾಸ್ತ್ರ ಸಂಸ್ಕೃತಿಯಲ್ಲಿ ತಂತ್ರಶಾಸ್ತ್ರಕ್ಕೆ ಒಂದು ವಿಶಿಷ್ಟ ಸ್ಥಾನವಿದೆ. ನಾಲ್ಕು ವೇದಗಳಲ್ಲಿ ಒಂದಾದ, ಅಥರ್ವಣ ವೇದದ ಅಂಗವಾದ ಈ ಶಾಸ್ತ್ರದಲ್ಲಿ ಆದಿಗುರು ಪರಮೇಶ್ವರನು ಲೋಕ ಕಲ್ಯಾಣಕ್ಕಾಗಿ ತಂತ್ರವಿದ್ಯೆಯನ್ನು ಸೃಷ್ಟಿಸಿ, ಪತ್ನಿ ಪಾರ್ವತಿಗೆ ಉಪದೇಶ ಮಾಡಿದನು ಎನ್ನುವ ನಂಬಿಕೆಯಿದೆ. ಈ ತಂತ್ರ ವಿದ್ಯೆಯ ಪ್ರಪಂಚದಲ್ಲಿ ಎಲ್ಲವೂ
ತಂತ್ರ ಕ್ರಿಯೆ ಎನ್ನುವುದು ಒಂದು ರೀತಿಯ ಯೋಗ ಕ್ರಿಯೆ ಮನುಷ್ಯ ತನ್ನ ಒಳಗಿನ ಶಕ್ತಿಯನ್ನು ಬ್ರಹ್ಮಾಂಡದ ಶಕ್ತಿಯೊಡನೆ ವಿಲೀನಗೊಳಿಸಿ ಸಾಧಿಸುವ ಒಂದು ವಿದ್ಯೆ "ಅದರ ಸಾಧನೆ ಸಾಧ್ಯ, ಆದರೆ ಅಸಾಧ್ಯ" ಇದರ ಅರ್ಥ ಈ ಕಾದಂಬರಿಯಲ್ಲಿ ಅಡಗಿದೆ.
"ಭ್ರಮೆಗಳು ಸೋತರೆ ನೀನು ಗೆಲ್ಲುವೆ" ಇದೇ ತಂತ್ರವಿದ್ಯೆಯ ಮೂಲ ಮಂತ್ರ. ಇಲ್ಲಿ ಕಾಣುವ ವ್ಯಕ್ತಿಗಳಿಗಿಂತಾ ಕಾಣದ ಶಕ್ತಿಗಳೇ ಅಪಾಯಕಾರಿ. ಇಂಥದ್ದೊಂದು ಕ್ಲಿಷ್ಟ ವಿಷಯವನ್ನು ತಮ್ಮ ಕಾದಂಬರಿಯ ಕಥಾವಸ್ತುವನ್ನಾಗಿ ಮಾಡಿಕೊಂಡು, ಲೇಖಕ ಶ್ರೀ ಗಣೇಶ್ ಪ್ರಸಾದ್ ಅವರು ಈ "ತಂತ್ರಾ" ಕಾದಂಬರಿಯನ್ನು ತಮ್ಮ ಮುಂದೆ ತಂದಿದ್ದಾರೆ.
'ತರ್ಕಕ್ಕೆ ನಿಲುಕದ ಈ ಲೋಕ ಇಳಿದಷ್ಟೂ ಆಳ, ತಳವಿಲ್ಲದ ಕೊಳ' ಇಂಥದ್ದೊಂದು ಲೋಕದ ಕಥೆಯನ್ನು ಲೇಖಕರು ಕಿರಣ್ ಎನ್ನುವ ಪಾತ್ರದ ಪಯಣದ ಮೂಲಕ ಹೇಳಿದ್ದಾರೆ. ಹೇಗೆ ಒಬ್ಬ ಸಾಧಾರಣ ವ್ಯಕ್ತಿ ತಂತ್ರ ಲೋಕದ ಮಹಾಮಂಡಲೇಶ್ವರನಾಗುವತ್ತ ಪ್ರಯಾಣ ಬೆಳೆಸುತ್ತಾನೆ. ಅವನಿಗಾಗುವ ಅನುಭವಗಳು, ಎದುರಿಸುವ ಸವಾಲುಗಳು, ಅರಿಷಡ್ವರ್ಗ ಗಳನ್ನು ಮೀರಿ ನಿಲ್ಲುವ ಶಕ್ತಿ ಪಡೆಯುವ, ಯಕ್ಷ ಕಿನ್ನರ, ಪ್ರೇತ ಪಿಶಾಚಿಗಳನ್ನು ಮೀರಿಸುವ ಅನೇಕ ದುಷ್ಟ ಶಕ್ತಿಗಳನ್ನು, ಅವುಗಳನ್ನು ತಮ್ಮ ಅಧೀನದಲ್ಲಿರಿಸಿಕೊಂಡು ಪ್ರಪಂಚವನ್ನಾಳುವ ಬಯಕೆ ಹೊಂದಿರುವ ಮಾನವರನ್ನು ಎದುರಿಸಿ ಸಾಧನೆ ಮಾಡುವ ಸಾಧಕನ ಕಥೆ. ಮಾಯಾವಿ ಲೋಕದ ವಿರುದ್ಧ ಮಾನವ ಶಕ್ತಿಯ ಸಮರದ ಕಥೆ ಹೊರಗಿನ ಮಾಯೆಯ ಜೊತೆಗಲ್ಲದೇ ಒಳಗಿನ ಅರಿಷಡ್ವರ್ಗದ ಜೊತೆಯೂ ಹೋರಾಡುವ ಕಥೆ.
ಇದಕ್ಕಾಗಿ ಲೇಖಕರು ಮಾಡಿರುವ ಸಂಶೋಧನೆ ಮೆಚ್ಚಲೇಬೇಕು. ಬಹುಶಃ ರವಿ ಬೆಳೆಗೆರೆಯವರ ಮಾಟಗಾತಿಯ ನಂತರ ಈ ಮಾಯಾಲೋಕದ ಬಗ್ಗೆ ಬರೆದಿರುವ ಒಂದು ಅಥೆಂಟಿಕ್ ಪುಸ್ತಕ ಎಂದರೆ ತಪ್ಪಾಗಲಾಗದು.
ಸುಮಾರು ಮುನ್ನೂರು ಪುಟಗಳಿರುವ ಈ ಪುಸ್ತಕದ ಪ್ರತೀ ಪುಟದಲ್ಲಿ ರೋಚಕತೆ ಯಿಂದ ಓದುಗರನ್ನು ಉಸಿರುಗಟ್ಟಿಸುವ ವೇಗವಿದೆ. ಇದೆಲ್ಲದಕ್ಕಿಂತ ಹೆಚ್ಚಾಗಿ ಆ ಪಾತ್ರವೇ ನಾವಾಗುವಂಥಾ ವರ್ಣನೆ, ವಿವರಣೆ ಮತ್ತು ವ್ಯಾಖ್ಯಾನಗಳಿದೆ ಒಟ್ಟಿನಲ್ಲಿ ಓದುಗರಿಗೆ ಒಂದು ಹೊಸಲೋಕದ ಪರಿಚಯ ಪಯಣ ಮಾಡಿಸುವುದರಲ್ಲಿ ಸಂಶಯವಿಲ್ಲ.
ವಾಸುದೇವ ಮೂರ್ತಿ ಕಾದಂಬರಿಕಾರರು
ಗಣೇಶ್ ಪ್ರಸಾದ್ ನಾಯಕ್ | Ganesh Prasad Nayak |
0 average based on 0 reviews.