ಹತ್ತು ಕುಟುಂಬ ಹದಿನೆಂಟು ಗೋತ್ರದ ಗೌಡ ಸಮುದಾಯ ದಕ್ಷಿಣ ಕನ್ನಡದ ಪುತ್ತೂರು, ಸುಳ್ಯ, ಬೆಳ್ತಂಗಡಿ ಮತ್ತು ಬಂಟ್ವಾಳ ತಾಲ್ಲೂಕಿನ ವಿಟ್ಲ, ಪಾಣೆ ಮಂಗಳೂರು ಹಾಗೂ ಕೊಡಗಿನಲ್ಲಿ ಬಹುಸಂಖ್ಯಾತರಾಗಿ, ಸಾಕಷ್ಟು ಭೂ ಹಿಡುವಳಿ ಹೊಂದಿ ಜೀವಿಸುತ್ತಬಂದಿದ್ದಾರೆ.ಇವರು ಮೂಲತಃ ಕೃಷಿಕರು. ಆದರೆ ಈ ಸಮುದಾಯದ ಬೇರುಗಳನ್ನು ಹುಡುಕುತ್ತಾ ಹೋದರೆ ಇವರ ಮೂಲವನ್ನು ಸುಮಾರು ಸಾವಿರದ ಐದುನೂರು ವರ್ಷಗಳಷ್ಟು ಹಿಂದಕ್ಕೆ ತೆಗೆದುಕೊಂಡು ಹೋಗಬಹುದಾಗಿದೆ ಎಂಬುದು ವಿದ್ವಾಂಸರ ಅಭಿಪ್ರಾಯವಾಗಿದೆ. ಇವರ ಮೂಲದ ಬಗ್ಗೆ ಅನೇಕ ಚರ್ಚೆ, ವಾದಗಳಿದ್ದರೂ ಪ್ರಸ್ತುತ ಕೃತಿಯಲ್ಲಿ ಈ ಸಮುದಾಯದ ಮೂಲವನ್ನು ಗಂಗವಂಶದಲ್ಲಿಗುರುತಿಸಲಾಗಿದೆ