ನಗರವಾಸಿಗಳು ಸ್ವರ್ಗವೆಂದು ಉದ್ಘರಿಸುವ ಸಕಲೇಶಪುರ ಭಾಗದ ಹಸಿಹಸಿ ಚಿತ್ರಣ, ಅಲ್ಲಿನ ಜನಜೀವನ, ಕೆಲವೇ ವರ್ಷಗಳಲ್ಲಾದ ಭೌಗೋಳಿಕ ಬದಲಾವಣೆಗಳು, ಅಪರೂಪವಾಗುತ್ತಿರುವ ಅಪ್ಪಟ ಮಲೆನಾಡಿನ ಮರಗಳು, ಪ್ರಾಣಿಪಕ್ಷಿಗಳು, ಕ್ರಿಮಿಕೀಟಗಳು, ಮಲೆನಾಡಗಿಡ್ಡ ತಳಿಯ ದನಗಳು ಹೀಗೆ ಸಾಗುವ ಕೃತಿಯಲ್ಲಿ ಅಚ್ಚುಕಟ್ಟಾದ ಕಥಾ ಹಂದರವು ಒಂದು ಸುಂದರ ಪ್ರಾಕೃತಿಕ ಪ್ರವಾಸದಂತೆ ಸಾಗಿದೆ.