• ಯಾವುದೇ ಕನ್ನಡ ಸ್ತಕಕ್ಕಾಗಿ ಸಂಪರ್ಕಿಸಿ
  • Call Us : +91 7022122121 / +91 8861212172
  • ಯಾವುದೇ ಕನ್ನಡ ಪುಸ್ತಕಕ್ಕಾಗಿ ಸಂಪರ್ಕಿಸಿ    
  • Call Us : +91 7022122121 / +91 8861212172
back

Publishers

Categories

Authors

Languages

Book Type

Clear All
Filter
ಮನೆ ಇ೦ಜಿನಿಯರ್ ಇಬುಕ್ | mane Engineer Ebook

ಮನೆ ಇಂಜಿನಿಯರ್" ಶೀರ್ಷಿಕೆ ಹೊತ್ತ ಈ ಪುಸ್ತಕದಲ್ಲಿ ನಿವೇಶನದಿಂದ ಮೊದಲಾಗಿ ಮನೆಯನ್ನು ಕಟ್ಟಲು ಅಗತ್ಯವಿರುವ ಎಲ್ಲ ತರಹದ ಉಪಯುಕ್ತ ಮಾಹಿತಿಗಳನ್ನು ಅಚ್ಚುಕಟ್ಟಾಗಿ, ಸಾಮಾನ್ಯ ಜನರಿಗೂ ಅರ್ಥವಾಗುವಂತಹ ಸರಳವಾದ ಕನ್ನಡ ಭಾಷೆಯಲ್ಲಿ ರಾಮ್‌ಕದಮ್‌ರವರು ಬರೆದಿದ್ದಾರೆ. ನನ್ನ ಬಹುಕಾಲದ ಪರಿಚಿತರಾದ ಇವರು ಕನ್ನಡ ಸಾರಸ್ವತ ಲೋಕಕ್ಕೆ ಒಂದು ವಿಶೇಷ ಕೊಡುಗೆಯನ್ನು ನೀಡಿದ್ದಾರೆ. ಕೆಲವು ವಿಷಯಗಳು ಸಂಕ್ಷಿಪ್ತವಾಗಿವೆಯಾದರೂ ಅಗತ್ಯವಿರುವಷ್ಟು ವಿವರಣೆಯನ್ನು ಒಳಗೊಳ್ಳುವ ಮೂಲಕ 'ಮನೆ ಇಂಜಿನಿಯರ್' ಪರಿಪೂರ್ಣತೆಯನ್ನು ಪಡೆದು ಕೊಳ್ಳುವುದರಲ್ಲಿ ಸಫಲವಾಗಿದೆ. ವಿಶ್ವದ ಕೆಲವು ದೇಶಗಳಲ್ಲಿ ಬಳಕೆಯಲ್ಲಿರುವ ಆಯ್ದ ಮನೆಗಳ ಮಾದರಿ ನಕಾಶೆಗಳೂ ಇದರಲ್ಲಿವೆ. ವಾಸ್ತುಶಾಸ್ತ್ರದ ಗೊಂದಲಗಳಿಗೆ ಆಧಾರಸಹಿತವಾದ ಸ್ಪಷ್ಟ ವಿವರಣೆಯಿದೆ. ವಿದ್ಯುತ್, ಪ್ಲಂಬಿಂಗ್, ಒಳಾಂಗಣ ವಿನ್ಯಾಸ, ತಾಂತ್ರಿಕ ಸಲಹೆ ಹೀಗೆ ಅನೇಕ ಅಂಶಗಳ ಬಗ್ಗೆ ಪ್ರಸ್ತಾಪಿಸಲಾಗಿದೆ. ಒಟ್ಟಿನಲ್ಲಿ ಮನೆಯನ್ನು ಕಟ್ಟುವವರಿಗೆ ಅಗತ್ಯವಾಗಬಹುದಾದ ಎಲ್ಲ ಮಾಹಿತಿಗಳು ಇಲ್ಲಿ ಸಮಗ್ರವಾಗಿ ಒಂದೇ ಪುಸ್ತಕದಲ್ಲಿ ಲಭ್ಯವಿದೆ. 'ಮನೆ ಕಟ್ಟಿನೋಡು, ಮದುವೆ ಮಾಡಿನೋಡು' ಎಂಬ ಕನ್ನಡದ ಗಾದೆ ಮಾತೊಂದಿದೆ. ಮದುವೆಯೇನೋ ಹಾಗೂ ಹೀಗೂ ಕೆಲವು ಚಿಕ್ಕಪುಟ್ಟ ಕೊರತೆಗಳ ನಡುವೆಯೂ ಮಾಡಿ ಮುಗಿಸಿಬಿಡಬಹುದು. ಆದರೆ ಮನೆಯನ್ನು ಕಟ್ಟುವುದು ಹಾಗಾಗುವುದಿಲ್ಲ. ಅದು ಕಷ್ಟದ ಕೆಲಸ. ಎಲ್ಲವನ್ನೂ ತರ್ಕಬದ್ಧವಾಗಿ ಹೊಂದಿಸಬೇಕಾದ ಅನಿವಾರ್ಯತೆಯಿರುತ್ತದೆ. ಈ ನಿಟ್ಟಿನಲ್ಲ. ಸಿವಿಲ್ ಇಂಜಿನಿಯರಿಂಗ್ ವ್ಯಾಸಂಗ ಮಾಡುವ ವಿದ್ಯಾರ್ಥಿಗಳು, ವೃತ್ತಿಪರರಾದ ವಾಸ್ತುಶಿಲ್ಪಿಗಳು, ಇಂಜಿನಿಯರ್ಗಳು, ಗುತ್ತಿಗೆದಾರರು ಹಾಗೂ ಮನೆಯನ್ನು ಕಟ್ಟುವ ಮಾಲೀಕರು ಹೀಗೆ ಪ್ರತಿಯೊಬ್ಬರಿಗೂ ಈ ಪುಸ್ತಕವು ಅತ್ಯಂತ ಉಪಯುಕ್ತವಾಗಿದೆ. ಇವರಿಗೆ ಶುಭವಾಗಲಿ.

₹495   ₹248