Nil
ಅವರು ನಮ್ಮ ಒಗ್ಗಟ್ಟನ್ನು ಮುರಿಯಲು ಸುಲಭ ದಾರಿ ಕಂಡುಕೊಂಡಿದ್ದಾರೆ. ಅದು ಸಿಂಪಲ್ ದಾರಿ. ನಮಗೂ ಗೊತ್ತಿರುವ ದಾರಿ! ಆದರೂ ನಾವು ಎಚ್ಚೆತ್ತುಕೊಂಡಿಲ್ಲ! ಒಮ್ಮೆ ಧರ್ಮ, ಇನ್ನೊಮ್ಮೆ ಜಾತಿ, ಮತ್ತೊಮ್ಮೆ ಲಿಂಗ, ಮಗದೊಮ್ಮೆ ಬಣ್ಣ ಹೀಗೆ ಒಂದಲ್ಲ ಒಂದು ಬಾಂಬುಗಳನ್ನು ನಮ್ಮ ನಡುವೆ ತಂದಿಡುತ್ತಲೇ ಇರುತ್ತಾರೆ. ಆ ಬಾಂಬಿಗೆ ಸಿಡಿಯುವ ಶಕ್ತಿ ಇದೆಯಾ? ಸಿಡಿದರೆ ಎಷ್ಟು ಜನ ಆಹುತಿಯಾಗಬಹುದು? ಆ ಬಾಂಬನ್ನು ನಿಷ್ಕ್ರಿಯಗೊಳಿಸುವ ದಾರಿ ಯಾವುದು? ಎಂಬ ಸಣ್ಣಪುಟ್ಟ ಆಲೋಚನೆಗಳೂ ನಮ್ಮ ಮನಸ್ಸನ್ನು ಕದಡುವುದಿಲ್ಲ. ಹೊರತಾಗಿ ಬಾಂಬಿನ ಬಗ್ಗೆ ಹರಡುವ ಊಹಾಪೋಹಗಳಿಗೆ ಕಿವಿ ಕೊಡುತ್ತೇವೆ. ಕೇಳಿದ್ದೆಲ್ಲಾ ಸತ್ಯ ಅನ್ನುವಹಾಗೆ ಒಂದಷ್ಟು ದಿನ ಹಾರಾಡುತ್ತೇವೆ. ಅಲ್ಲಿಗೆ ಇನ್ನೊಂದು ಹೊಸ ಬಾಂಬು ಬಂದು ಬೀಳುತ್ತದೆ. ನಮ್ಮ ಚಿತ್ತ ಅತ್ತ ಹಾಯುತ್ತದೆ. ಹೀಗೇ ನಮ್ಮನ್ನು ಈ ಬಾಂಬುಗಳು ಸದಾ ಬ್ಯುಸಿಯಾಗಿರುವಂತೆ ಮಾಡುತ್ತವೆ. ನಮ್ಮ ಸಮಯ, ಹಣ, ತಕ್ತಿ, ಸೃಜನಶೀಲತೆ ಎಲ್ಲವೂ ಹಾಳಾಗುವುದು ಹೀಗೇ.. ಹಾಗಾದರೆ ಈ ಎಲ್ಲವನ್ನು ಬಳಸಿಕೊಂಡು ರ‍್ಯಾಂಬೊ ಏನು ಮಾಡುತ್ತಾನೆ? ಅಕ್ರಮಣ ಮಾಡುತ್ತಾನೆ!
nil
ಸೋತವರಿಗೆ, ಗೆಲುವನ್ನು ಎದುರು ನೋಡುವವರಿಗೆ, ಸಮಾನ ಮನಸ್ಕರಿಗೆ ಉಡುಗೊರೆಯಾಗಿ ನೀಡಲು ಈ ಕೃತಿ ಬೆಸ್ಟ್ ಆಯ್ಕೆ. ನಮ್ಮ ಬದುಕು ಹುಟ್ಟಿನಿಂದಲೇ ಶುರುವಾಗಬಹುದು. ಆದರೆ ಸೋಲು-ಗೆಲುವುಗಳು ನಿರ್ಧಾರವಾಗುವುದು ನಮ್ಮ ಆಲೋಚನೆಗಳ ಮೇಲೆಯೇ.. ಆಲೋಚನೆಗಳು ಇಲ್ಲದೆ ಬದುಕಿಲ್ಲ! ಬದುಕಿನ 360 ಕೋನದಲ್ಲೂ ಯೋಚಿಸುವಂತಹ ಶಕ್ತಿಯನ್ನು ನಾವು ಗಳಿಸದಿದ್ದರೆ ಖಂಡಿತ ಸ್ಪರ್ಧೆಯ ಸಾಲಿನಿಂದ ತುಂಬಾ ಹಿಂದೆ ಉಳಿದುಬಿಡುತ್ತೇವೆ. ಇವತ್ತು ಯಾರಿಗೂ ಹಿಂದೆ ಉಳಿಯಲು ಇಷ್ಟವಿಲ್ಲವಾದ್ದರಿಂದ ಆಲೋಚನಾಕ್ರಮದ ಬಗ್ಗೆ ಈ ಕೃತಿ ನಿಮಗೆ, ನಿಮ್ಮ ಗೊಂದಲಗಳಿಗೆ ಉತ್ತರಿಸುತ್ತಲೇ ನಿಮ್ಮ ಯಶಸ್ಸಿನ ದಾರಿಗೆ ನೆರವಾಗಬಲ್ಲದು..