ಡಾ. ಟಿಸ್ವಿ ಪರಿಸರವನ್ನು ಕುರಿತು ತಮ್ಮ ಅಧ್ಯಯನಗಳಿಂದಾಗಿ ಕನ್ನಡ ಸಂವೇದನಾಶೀಲ ಮನಸ್ಸುಗಳಿಗೆ ಪರಿಚಿತರು. ಬಹುತೇಕರ ಹಾಗೆ ಪರಿಸರ ಅಧ್ಯಯನವೆಂದರೆ ಜೀವವೈವಿಧ್ಯ ಕುರಿತ ವಿಸ್ಮಯಕಾರಿಯಾದ ಶುಪ್ಕ ಮಾಹಿತಿಗಳನ್ನು ಒದಗಿಸುವುದು ಎನ್ನುವ ಕ್ರಮ ಇವರದ್ದಲ್ಲ, ಬದಲಾಗಿ ಇದು ಸಾಮಾಜಿಕ, ಧಾರ್ಮಿಕ, ಆರ್ಥಿಕ, ನೈತಿಕತೆಗಳ ಸಂಕಥನವೆಂದು ಇವರು ಪರಿಭಾವಿಸುವುದರಿಂದಾಗಿ ಇವರ ಪರಿಸರ ಅಧ್ಯಯನ ಜೀವಪರ ನೆಲೆಗಳ ಹುಡುಕಾಟದ ವೇದಿಕೆಯಾಗಿ ರೂಪಗೊಂಡಿದೆ.
Category: | E-books |
Sub Category: | |
Author: | ಡಾ ಟಿ ಎಸ್ ವಿವೇಕಾನಂದ |
Publisher: | ವೀರಲೋಕ |
Language: | Kannada |
Number of pages : | |
Publication Year: | |
Weight | |
ISBN | |
Book type | E-book |
Delivery between 2-8 Days
No returns accepted. Please refer our full policy
Your payments are 100% secure
ಪಶ್ಚಿಮದ ಚಿಂತನೆಗಳ ಜೊತೆಗೆ ಅವಿನಾಭಾವ ಸಂಬಂಧವನ್ನು ಹೊಂದಿದ, ಹಣದ ಒತ್ತಾಸೆಗಳಿಂದ ಪ್ರೇರಿತವಾದ ಪರಿಸರವಾದ ಮತ್ತು ಧೋರಣೆಗಳು ಜೀವಸಂಕುಲದ ಭವಿಷ್ಯಕ್ಕೆ ಭಾಷ್ಯ ಬರೆಯುತ್ತಿರುವ ತಣ್ಣನೆಯ ಕ್ರೌರ್ಯದ ಭೀಭತ್ಸತೆಯನ್ನು ಇವರು ಪರಿಣಾಮಕಾರಿಯಾಗಿ ಕಟ್ಟಿಕೊಡುತ್ತಾರೆ.
ಅಧ್ಯಯನದ ಶಿಸ್ತೂಂದು ಶೋಕಿಯಾದಾಗ ವೈಜ್ಞಾನಿಕ ಮತ್ತು ವೈಚಾರಿಕ ನೆಲೆಗಳಿಂದ ದೂರ ಸರಿದು ಮೌಡ್ಯದ ಪೋಷಣೆಯ ಕೇಂದ್ರವಾಗಿ ಮಾರುಕಟ್ಟೆ ಸಂಸ್ಕೃತಿಯ ವಿಸ್ತರಣೆಯಾಗುವುದು ಬದುಕಿನ ಮಹಾ ದುರಂತ. ಈ ಪ್ರವೃತ್ತಿ ತನ್ನೆಲ್ಲಾ ಪಾಪಗಳನ್ನು ಶತಮಾನಗಳಿಂದ ಪರಿಸರ ಸ್ನೇಹಿ ಸಂಸ್ಕೃತಿಯನ್ನು ಬದುಕುತ್ತಾ ಬಂದಿರುವ ಶಾಪಗ್ರಸ್ಥ ಸಮುದಾಯಗಳ ತಲೆಗಳಿಗೆ ಕಟ್ಟುವ ಯೋಜಿತ ವ್ಯವಸ್ಥೆಯಲ್ಲಿ ಸಫಲವಾಗುತ್ತಾ ಈ ಸಮುದಾಯಗಳು ವಿನಾಕಾರಣ ಯಾತನಾಮಯ ಬದುಕನ್ನು ನಡೆಸಬೇಕಾದ ಅನಿವಾರ್ಯವಾದ ಅಸಹಾಯಕ ಸ್ಥಿತಿಗೆ ದೂಡಲ್ಪಟ್ಟಿರುವುದನ್ನು ಮಾರ್ಮಿಕವಾಗಿ ನಿರೂಪಿಸಿದ್ದಾರೆ.
ಅರಣ್ಯ ಪರಿಸರ ವಿಧ್ವಂಸದ ನೈಜತೆ ಅರಿಯದ ಲೋಕ ಮಹಾ ಮೈಮರೆವಿನಲ್ಲಿ, ಭ್ರಮೆಯಲ್ಲಿ ಕೊಲೆಗಡುಕರ ಸಂಮೋಹನಕ್ಕೆ ಒಳಗಾಗಿ, ನುಡಿವುದನ್ನು, ನಡೆವುದನ್ನು, ಭಾವಾವೇಶಕ್ಕೆ ಒಳಗಾಗುವುದನ್ನು ದಿಟ್ಟ ತಾಯ್ತನದಿಂದ ಎದುರಾಗುವ ಡಾ. ಟಿಎಸ್ವಿ ಪಟ್ಟಭದ್ರರ ಸಂಮ್ಮೋಹದಿಂದ ಲೋಕವನ್ನು ಬಿಡುಗಡೆಗೊಳಿಸಲು ಪ್ರಯತ್ನಿಸುತ್ತಾರೆ.
ಕೊನೆಗೆ, ವಾಸ್ತವ ಸಂಗತಿಗಳಿಂದ ಎಚ್ಚರಗೊಂಡ ಜನರನ್ನು ಕುರಿತು "ನ್ಯಾಯ ನಿರ್ಣಯವನ್ನು ನಿಮಗೇ ಬಿಟ್ಟುಬಿಡುತ್ತೇನೆ'' ಎನ್ನುವಲ್ಲಿಗೆ ಇವರ ಬರವಣಿಗೆಯಲ್ಲಿರುವ ಪ್ರಜಾಪ್ರಭುತ್ವ ಮತ್ತು ಸಾಮಾಜಿಕ ನ್ಯಾಯದ ಸಂಕೀರ್ಣ ಹೆಣಿಗೆಯ ಕಲಾತ್ಮಕತೆ ಓದುಗನ ಅಂತಃಸಾಕ್ಷಿಯನ್ನು ಕಲಕಿಬಿಡುತ್ತದೆ. ಘೋಷಿತ ಪರಿಸರವಾದದ ಎಲ್ಲೆಕಟ್ಟುಗಳನ್ನು ಒಡೆದು ಸತ್ಯದ ಸಾಕ್ಷಾತ್ಕಾರದೆಡೆಗೆ ನಮ್ಮನ್ನು ಕೊ೦ಡೊಯ್ಯುತ್ತದೆ.
ಡಾ ಟಿ ಎಸ್ ವಿವೇಕಾನಂದ |
0 average based on 0 reviews.