| Category: | ಕನ್ನಡ |
| Sub Category: | ಅಂಕಣ ಬರಹಗಳು |
| Author: | Rajendra Chenni |
| Publisher: | Abhiruchi Prakashana |
| Language: | Kannada |
| Number of pages : | |
| Publication Year: | 2025 |
| Weight | 300 |
| ISBN | |
| Book type | Paperback |
Delivery between 2-6 Days
No returns accepted. Please refer our full policy
Your payments are 100% secure
ಪ್ರಕೃತಿಯಲ್ಲಿ ಪುನರ್ಜನ್ಮವು ದೈನಂದಿನ ಕ್ರಿಯೆಯಾಗಿದೆ. ನಮ್ಮ ಅರಿವನ್ನೂ ಮೀರಿ ಪರಿಸರವು ಎಲ್ಲಾ ವಿನಾಶಕಾರಿ ಸ್ಥಿತಿಗಳನ್ನು ಎದುರಿಸಿ ಉಳಿಯಬಲ್ಲದು. ಏಕೆಂದರೆ ಅದು ರಹಸ್ಯಮಯವಾದರೂ ನಿಯಮಬದ್ಧವಾಗಿದೆ. ಆದರೆ ಮನುಷ್ಯ ಜಗತ್ತು? ಮನುಷ್ಯ ನಾಗರಿಕತೆಯೇ ನಿರಂತರ ಎಡವಟ್ಟುಗಳ ಸರಣಿಯಾಗಿದೆ. ತನ್ನ ಮೇಧಾಶಕ್ತಿಯಿಂದ ಪ್ರಕೃತಿ ಪರಿಸರಗಳನ್ನು ಅರಿತುಕೊಂಡು ತನ್ನ ಬದುಕನ್ನು ಸುಗಮಗೊಳಿಸುತ್ತ ಮನುಷ್ಯನು ಅಪಾರ ಶಕ್ತಿಯುಳ್ಳ ಜ್ಞಾನವನ್ನು ಸೃಷ್ಟಿಸಿಕೊಂಡಿದ್ದಾನೆ. ಆದರೆ ಅದರ ಆಧಾರದ ಮೇಲೆ ಮೈತ್ರಿ, ಕರುಣೆ, ಸಮಾನತೆಗಳುಳ್ಳ ಸಮಾಜಗಳನ್ನು ಕಟ್ಟುವುದರಲ್ಲಿ ಸೋತಿದ್ದಾನೆ. ನಿರಂತರವಾಗಿ ವಿಕಾಸಹೊಂದುವ ಸಾಧ್ಯತೆಗಳಿದ್ದರೂ ಹೆಜ್ಜೆ ಹೆಜ್ಜೆಗೂ ಪ್ರಪಾತಕ್ಕೆ ಜಾರಿ ಬೀಳುತ್ತಿದ್ದಾನೆ. ಜಾತಿ, ವರ್ಗ, ಗಂಡಾಳ್ವಿಕೆ ಇವುಗಳನ್ನು ಸಮಾಜದ ರಚನೆಗಳಲ್ಲಿಯೇ ತಂದು ಕೂರಿಸಿ ಕ್ರೌರ್ಯ ಹಾಗೂ ಬವಣೆಗಳನ್ನು ಹುಟ್ಟುಹಾಕಿದ್ದಾನೆ. ಪ್ರಕೃತಿಯಲ್ಲಿದ್ದಂತೆ ಅವನಿಗೆ ಸಹಜವಾದ ಪುನರ್ಜನ್ಮವಿಲ್ಲ. ಅದು ಸಾಧ್ಯವಾಗುವುದು ತಿಳುವಳಿಕೆಯಿಂದ. ವಿಶ್ವದ ಸಕಲ ಜೀವಿಗಳೊಂದಿಗೆ ನಮಗಿರುವ ಅವಿನಾ ಸಂಬಂಧವನ್ನು ಅರಿತು ಅನುಭವಿಸುವುದರಿಂದ. ಇದೇ ಪ್ರಮಾಣದಲ್ಲಿ ಸಾಮೂಹಿಕ ಆತ್ಮಹತ್ಯೆಯ, ಸ್ವವಿನಾಶದ ಸಾಧ್ಯತೆಗಳೂ ಇವೆ. ಹೀಗಾಗಿ ಇದು ಆಯ್ಕೆ ಮತ್ತು ಸಂಕಲ್ಪದ ಪ್ರಶ್ನೆಯಾಗಿದೆ.
Rajendra Chenni |
0 average based on 0 reviews.