
Category: | ಕನ್ನಡ |
Sub Category: | ಲೇಖನಗಳು, ಪ್ರಬಂಧಗಳು |
Author: | |
Publisher: | Aakruti Pustaka |
Language: | Kannada |
Number of pages : | |
Publication Year: | 2025 |
Weight | 400 |
ISBN | |
Book type | Paperback |
Delivery between 2-6 Days
No returns accepted. Please refer our full policy
Your payments are 100% secure
ನಮ್ಮ ಶ್ರೀನಿವಾಸ್ ನಟೇಕರ್ ಅನುವಾದಿಸಿರುವ ಈ ಕೃತಿ ಅತ್ಯಮೂಲ್ಯ ಮತ್ತು ನಮ್ಮ ಅರಿವನ್ನು ತಿದ್ದುವಂಥದ್ದು, ಇದರಲ್ಲಿ ಎರಡನೆ ಮಾತಿಲ್ಲ. ಇವರಿಗಿಂತ ಮೊದಲು ಈ ಕೃತಿಯ ಕರ್ತೃ ಹರೀಶ್ ದೇಶಮುಖ್ ಅವರ ಬಗ್ಗೆ ಒಂದೆರಡು ಮಾತು. ಮಹಾರಾಷ್ಟ್ರದ ನಾಗುರ್ ಪ್ರಾಂತದ ವಿದರ್ಭ ತನ್ನ ಸಮಾಜಮುಖಿ ಚಟುವಟಿಕೆ ಮತ್ತು ಬಲಿದಾನಗಳ ನೆಲವೀಡು. ಅವರು ಪ್ರೊ. ಶ್ಯಾಮ್ ಮಾನವ್ ಜೊತೆಗಾರರು. 'ಅಖಿಲ ಭಾರತೀಯ ಅಂಧಶ್ರದ್ಧಾ ನಿರ್ಮೂಲನ ಸಮಿತಿ'ಯ ಪ್ರಧಾನ ಕಾರ್ಯದರ್ಶಿ, ಸಮಕಾಲೀನ ಸಮಾಜದ ಚಿತ್ರಸ್ವಾಸ್ಥ್ಯಕ್ಕೆ ಹಾನಿ ಮಾಡುವ ಮೂಢನಂಬಿಕೆಗಳ ಹಾಗೂ ಸನಾತನ ಅವಿವೇಕಿಗಳ ವಿರುದ್ಧ ಅಹರ್ನಿಶಿ ಹೋರಾಟಗಾರರು. ದಣಿವರಿಯದ ಹೋರಾಟಗಾರ ದಾಬೋಲ್ಕರ್ ಹುತಾತ್ಮರಾದ ಬಳಿಕವೂ ಈ ಹರೀಶ್ ಮತ್ತವರ ಸೇನಾನಿಗಳು ವಿಚಲಿತರಾಗಿಲ್ಲ. ಅವರ ಹಲವು ವೈಚಾರಿಕ ವೈಜ್ಞಾನಿಕ ಕೃತಿಗಳು ಈಗಾಗಲೆ ಪ್ರಕಟವಾಗಿವೆ. ಅವು ಇಂಗ್ಲೀಷ್ ಭಾಷೆ ಮಾತ್ರವಲ್ಲದೆ ವಿವಿಧ ಪ್ರಾದೇಶಿಕ ಭಾಷೆಗಳಲ್ಲಿ ಪ್ರಕಟವಾಗಿ ಅಪಾರ ಜನಪ್ರಿಯತೆ ಗಳಿಸಿವೆ. 'ಸೂಪರ್ಸ್ಟ್ರಿಷನ್ ಮಿಥ್ ಅಂಡ್ ರಿಯಾಲಿಟಿ' ಇದು ವಿಚಾರವಾದಿ ಹರೀಶ್ ಅವರ ಇನ್ನೊಂದು ಮುಖ್ಯ ಕೃತಿ, ಇದರ ಸಹಸ್ರಾರು ಪ್ರತಿಗಳು ಜಗತ್ತಿನಾದ್ಯಂತ ಮನೆಮಾತಾಗಿವೆ. ಈ ನಮ್ಮ ಗೆಳೆಯರಾದ ಶ್ರೀನಿವಾಸ್ ನಟೇಕರ್ ಅವರು ಈ ಮುಖ್ಯ ಕೃತಿಯನ್ನು ಕನ್ನಡ ಭಾಷೆಗೆ ಅನುವಾದಿಸಿ ತಮ್ಮ ಗೌರವ ಹೆಚ್ಚಿಸಿಕೊಂಡಿದ್ದಾರೆ. - ಕು೦ವೀ
0 average based on 0 reviews.