
Category: | ಕನ್ನಡ |
Sub Category: | ಆತ್ಮಕಥೆ ಜೀವನ ಚರಿತ್ರೆ |
Author: | Kamala M R |
Publisher: | Amulya pustaka |
Language: | Kannada |
Number of pages : | 230 |
Publication Year: | 2025 |
Weight | 400 |
ISBN | |
Book type | Paperback |
Delivery between 2-6 Days
No returns accepted. Please refer our full policy
Your payments are 100% secure
ಲ್ಯಾಟಿನ್ ಅಮೆರಿಕದ ಭಾಗವಾದ ಚಿಲಿ ದೇಶದ ಇಸಬೆಲ್ ಆಯೆಂದೆ ವಿಶ್ವಮಾನ್ಯ ಲೇಖಕಿ, ಸ್ತ್ರೀವಾದಿ, ಮಹಿಳಾ ಚಳುವಳಿಗಳ ಸಂಘಟಕಿ ಮತ್ತು ತಮ್ಮ ಇಳಿ ವಯಸ್ಸಿನಲ್ಲಿಯೂ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿರುವ ಅಪರೂಪದ ವ್ಯಕ್ತಿ. 'ಒಬ್ಬರ ಜೀವನ ಚರಿತ್ರೆಯನ್ನು ಬರೆಯುವುದೆಂದರೆ ದಿನಾಂಕಗಳ, ಘಟನೆಗಳ ಮತ್ತು ಸಾಧನೆಯ ಪಟ್ಟಿ, ವಾಸ್ತವದಲ್ಲಿ ನನ್ನ ಬದುಕಿನ ಮುಖ್ಯ ಸಂಗತಿಗಳು ನಡೆದದ್ದು ಹೃದಯದ ಗುಟ್ಟಿನ ಕೋಣೆಗಳಲ್ಲಿ. ಅವಕ್ಕೆ ಈ ಜೀವನ ಚರಿತ್ರೆಯಲ್ಲಿ ಸ್ಥಾನವಿಲ್ಲ. ನನ್ನ ಗಮನಾರ್ಹ ಸಾಧನೆಗಳೆಂದರೆ ನನ್ನ ಪುಸ್ತಕಗಳಲ್ಲ, ಕೆಲವರೊಂದಿಗೆ ಹಂಚಿಕೊಂಡಿರುವ ಪ್ರೀತಿ. ಅದರಲ್ಲೂ ಕುಟುಂಬದವರೊಂದಿಗೆ ಮತ್ತು ಉಳಿದವರಿಗೆ ಸಹಾಯ ಮಾಡಿರುವ ರೀತಿಯಲ್ಲಿ ಜಗತ್ತಿನಲ್ಲಿ ಎಷ್ಟೊಂದು ನೋವಿದೆ, ಒಂದಿಷ್ಟನ್ನಾದರೂ ನಿವಾರಿಸಲು ಸಾಧ್ಯವೇ ಎಂದು ಯುವತಿಯಾಗಿದ್ದಾಗ ಆಗಾಗ್ಗೆ ಹತಾಶಳಾಗುತ್ತಿದ್ದೆ. ಈಗ ಹಿಂತಿರುಗಿ ನೋಡಿದರೆ, ಕೆಲವು ದಿನಗಳು ಏನನ್ನೂ ಮಾಡಲಾಗದಿದ್ದರೂ ಆತ್ಮತೃಪ್ತಿ ಇದೆ.' ಇದು ಇಸಬೆಲ್ ಅವರದೇ ಹೇಳಿಕೆ. ಇದಕ್ಕೆ ತಕ್ಕ ಹಾಗೆಯೇ ಅವರ ಬದುಕು ಮತ್ತು ಬರಹ. ಇಸಬೆಲ್ ನಿಜವಾದ ಅರ್ಥದಲ್ಲಿ ಜಾಗತಿಕ ಮಾನ್ಯತೆ ಪಡೆದ ಲೇಖಕಿ. ಅವರ ಇಪ್ಪತ್ತೆಂಟು ಕೃತಿಗಳು ವಿಶ್ವದ ನಲವತ್ತೆರಡು ಭಾಷೆಗಳಿಗೆ ಅನುವಾದಗೊಂಡಿವೆ. ಎಂಬತ್ತು ದಶಲಕ್ಷ ಪ್ರತಿಗಳು ಮಾರಾಟವಾಗಿವೆ. ಹದಿನೈದು ದೇಶಗಳಿಂದ ಅರವತ್ತಕ್ಕೂ ಹೆಚ್ಚು ಪುರಸ್ಕಾರಗಳನ್ನು ಪಡೆದಿದ್ದಾರೆ. ಹದಿನೈದು ಅಂತಾರಾಷ್ಟ್ರೀಯ ಗೌರವ ಡಾಕ್ಟರೇಟ್ಗೆ ಪಾತ್ರರಾಗಿದ್ದಾರೆ. ಇವರ ಸಾಹಿತ್ಯ ಕೃತಿಗಳು ಚಲನಚಿತ್ರಗಳಾಗಿವೆ, ನೃತ್ಯ ರೂಪಕಗಳಾಗಿವೆ, ನಾಟಕಗಳಾಗಿವೆ, ಪ್ರಪಂಚದಾದ್ಯಂತವಿರುವ ಹೆಣ್ಣುಮಕ್ಕಳ ಸಬಲೀಕರಣಕ್ಕಾಗಿ ೧೯೯೫ರಲ್ಲಿ 'ದಿ ಇಸಬೆಲ್ ಅಯೆಂದೆ ಫೌಂಡೇಶನ್' ಸ್ಥಾಪಿಸಿದ್ದಾರೆ. ಇಪ್ಪತ್ತು ವರ್ಷಗಳ ಕಾಲ ಹೆಣ್ಣುಮಕ್ಕಳ ಹಕ್ಕು ಮತ್ತು ಸಬಲೀಕರಣ, ಲ್ಯಾಟಿನ್ ಅಮೆರಿಕ ಮತ್ತು ಪ್ರಪಂಚದ ರಾಜಕೀಯ, ಚಿಲಿ, ಬರವಣಿಗೆ ಮತ್ತು ಸೃಜನಾತ್ಮಕ ಪ್ರಕ್ರಿಯೆ, ಅಧ್ಯಾತ್ಮ, ತಮ್ಮದೇ ಬರವಣಿಗೆ ಇತ್ಯಾದಿಗಳ ಬಗ್ಗೆ ದೇಶ ವಿದೇಶಗಳಲ್ಲಿ ಉಪನ್ಯಾಸ ನೀಡಿದ್ದಾರೆ. - ಎಂ.ಆರ್. ಕಮಲ
Kamala M R |
0 average based on 0 reviews.