ಹೆಣ್ಣು ಮತ್ತು ಮಣ್ಣಿಗೆ ಬಿಡಿಸಲಾರದ ಬಂಧ. ಹಾಗಾಗಿಯೇ ಜಗದ ಹೆಣ್ಣುಗಳ ಕಥೆಯನ್ನು ಹೆಣೆದರೆ ಅದು ಈ ನೆಲದ ಕಥೆಯೂ ಆಗಿರುತ್ತದೆ. ಹೆಣ್ಣ ಕಣ್ಣೋಟದಲ್ಲಿ ದಕ್ಕುವ ಸುತ್ತಲ ಜಗತ್ತಿನ ಚಿತ್ರಣವೇ ಬೇರೆ.
Category: | ವೀರಲೋಕ ಪುಸ್ತಕಗಳು |
Sub Category: | |
Author: | ಸುಧಾ ಆಡಕಳ |
Publisher: | ವೀರಲೋಕ |
Language: | Kannada |
Number of pages : | |
Publication Year: | |
Weight | |
ISBN | 9789394942981 |
Book type | Paperback |
Delivery between 2-8 Days
No returns accepted. Please refer our full policy
Your payments are 100% secure
ಅವಳ ಪುಟ್ಟ, ಪುಟ್ಟ ಆಸೆಗಳು, ಆಳವಾದ ಮನೋಬೇಗುದಿಗಳು, ಚಿವುಟಿದಷ್ಟೂ ಚಿಗುರುವ ಕಸುವು, ಬರಡು ನೆಲದಲ್ಲಿಯೂ ಹೂವರಳಿಸುವ ಕನಸು ಎಲ್ಲವೂ ಇಲ್ಲಿ ಕಥೆಗಳಾಗಿ ಹರಡಿಕೊಂಡಿವೆ. ಬದುಕಿನ ಕುರಿತಾದ ವೈಜ್ಞಾನಿಕ ಬದ್ಧತೆ, ರೂಪಕಗಳ ಮೂಲಕ ಬದುಕನ್ನು ಅರ್ಥೈಸುವ ಕವಿಯ ಆದರ್ಶಗಳೆರಡೂ ಮೇಳೈಸಿ ಸೃಷ್ಠಿಯಾಗುವ ನಾಟಕೀಯ ಸನ್ನಿವೇಶಗಳು ಇಲ್ಲಿನ ಕಥೆಗಳ ವಿಶೇಷತೆಗಳಾಗಿವೆ. ಗ್ರಾಮ್ಯ ಬದುಕಿನ ಸೊಗಡು, ಮನೋಲೋಕಗಳ ತಾಕಲಾಟ ಮತ್ತು ಉತ್ತರಕನ್ನಡ ಭಾಷೆಯ ದೇಸಿತನ ಕಥಾಸಂಕಲನದುದ್ದಕ್ಕೂ ಮೇಳೈಸಿವೆ.
ಕಥೆಗಳ ಓದು ಎಂದರೆ ಕಥೆಗಾರ ಕಂಡರಿಸುವ ಇನ್ನೊಂದು ಲೋಕದ ದರ್ಶನ. ಕಥೆಗಳ ಓದಿನ ಮೂಲಕ ನಮ್ಮ ಜಗತ್ತು ಇನ್ನಷ್ಟು ವಿಸ್ತಾರಗೊಳ್ಳುವುದು.
ಸುಧಾ ಆಡಕಳ |
0 average based on 0 reviews.