'ನಮ್ಮ ಬದುಕಿನಲ್ಲಿ ನಾಲ್ಕು ಜನರಿಗೆ ಒಳ್ಳೆಯದು ಮಾಡಬೇಕು, ನಮ್ಮ ಬದುಕು ಹಾಗೆಯೇ ರೂಪುಗೊಳ್ಳಬೇಕು' ಎಂದು ಹಿರಿಯರು ಸದಾ ಹೇಳುವ ಮಾತುಗಳು. ಆದರೆ ದೇವಿಕಾ ನಾಲ್ಕು ಜನರಿಗೆ ಒಳ್ಳೆಯದು ಮಾಡಬೇಕು ಎಂಬ ವಿಚಾರವನ್ನು ಘಂಟಾಘೋಷವಾಗಿ ಹೇಳುತ್ತ ಭಾಷಣವನ್ನೇನೂ ಬಿಗಿಯುವುದಿಲ್ಲ. ಬದಲಿಗೆ ಈ ಆಶಯವು ತಮ್ಮ ಅಂತರಂಗದಲ್ಲಿ ಸದಾ ಹಸಿರಾಗಿರುವಂತೆ ನೋಡಿಕೊಂಡವರು. ಈ ಅರಿವು ತೆಳುವಾಗಿ ನನ್ನ ಮನದಲ್ಲಿ ಮೂಡಿದ್ದರೂ, ಅವರ ಲೇಖನಗಳನ್ನು ಓದುತ್ತ ಹೋದಂತೆ ಅವರ ಅಂತರಂಗದ ಆಶಯವನ್ನು ಓದುವ ಅವಕಾಶವೊ೦ದು ನನಗೆ ದೊರೆತಂತಾಯಿತು.
Category: | ಕನ್ನಡ |
Sub Category: | ಲೇಖನಗಳು, ಪ್ರಬಂಧಗಳು |
Author: | ದೇವಿಕಾ ನಾಗೇಶ್ | Devikaa Nagesh |
Publisher: | pustaka mane |
Language: | Kannada |
Number of pages : | |
Publication Year: | 2024 |
Weight | 1/8 demi |
ISBN | |
Book type | Paperback |
Delivery between 2-8 Days
No returns accepted. Please refer our full policy
Your payments are 100% secure
ತಮ್ಮ ಒಡಲಧ್ವನಿಯನ್ನು ಆಲಿಸುವ ಸೂಕ್ಷ್ಮತೆಯನ್ನು ಉಳಿಸಿಕೊಂಡಿರುವ ದೇವಿಕಾ, ಆ ಧ್ವನಿಯ ಆದೇಶದ ಪ್ರಕಾರವೇ ಜೀವನ ನಿರ್ವಹಣೆ ಮಾಡುತ್ತಿದ್ದಾರೆ ಎಂಬುದನ್ನು ಗಮನಿಸಿದ್ದೇನೆ. ಆ ನಿಟ್ಟಿನಲ್ಲಿ ಅವರದ್ದು ಬಹುಮುಖಿ ವ್ಯಕ್ತಿತ್ವ ನಮ್ಮ ನಡುವೆಯೇ ಇರುವ ಹಿರಿಯ ನಾಗರಿಕರಿಗೆ ಆಸರೆಯಾಗಿ ನಿಲ್ಲುವುದು, ಜೀವನದಲ್ಲಿ ಇನ್ನೇನು ಸೋಲುತ್ತಿದ್ದೇವೆ ಎಂದು ಖಿನ್ನರಾಗುತ್ತಿರುವವರಿಗೆ ತುಸುವಾದರೂ ಸಹಾಯ ಮಾಡಬಹುದೇ ಎಂದು ಯೋಚಿಸುವುದು ಮತ್ತು ಜೀವನದ ಕುರಿತು ಯಾವತ್ತೂ ದೂರು ದುಮ್ಮಾನಗಳನ್ನು ಹೇಳಿಕೊಳ್ಳದೇ ನಗುನಗುತ್ತಾ ಬಾಳುವುದು ದೇವಿಕಾ ಅವರಿಗೆ ಒಲಿದು ಬಂದ ವರ. ಅವರ ಮೃದುನಗುವಿನಲ್ಲಿ ಸ್ನೇಹದ ಸಿಹಿಯಿದೆ. ಹೀಗೆ ಒಳಿತಿನ ಹಾದಿಯನ್ನು ಆಯ್ಕೆ ಮಾಡಿಕೊಳ್ಳುವವರು ನಮ್ಮ ನಡುವೆ ಇದ್ದಾರೆ ಎನ್ನುವ ಅರಿವೇ ನಮ್ಮೊಳಗೆ ಎಷ್ಟೊಂದು ವಿಶ್ವಾಸ ಮತ್ತು ಕ್ಷೇಮ ಭಾವನೆಯನ್ನು ಮೂಡಿಸುತ್ತದೆ ಎಂದು ನಾನು ಅನೇಕ ಬಾರಿ ಅಂದುಕೊಂಡಿದ್ದಿದೆ. ಅಂತಹವರ ಸಾಲಿನಲ್ಲಿ ದೇವಿಕಾ ಇದ್ದಾರೆ. ಅವರ ಬರಹಗಳ ಮೂಲ ಸ್ರೋತ ಇರುವುದೇ ಅವರ ಈ ಒಳ್ಳೆಯತನದಲ್ಲಿ.
ದೇವಿಕಾ ನಾಗೇಶ್ | Devikaa Nagesh |
0 average based on 0 reviews.