| Category: | ಕನ್ನಡ |
| Sub Category: | ಕಾದಂಬರಿ |
| Author: | ಲಕ್ಷ್ಮಣ ಕೌಂಟೆ | Lakshmana Kaunte |
| Publisher: | Harivu Book |
| Language: | Kannada |
| Number of pages : | |
| Publication Year: | 2026 |
| Weight | 300 |
| ISBN | |
| Book type | Paperback |
Delivery between 2-6 Days
No returns accepted. Please refer our full policy
Your payments are 100% secure
ವಿಶ್ವದ ದಾರ್ಶನಿಕರಲ್ಲಿ ಗೌತಮಬುದ್ಧನ ಶಿಷ್ಯರಷ್ಟು ಧರ್ಮನಿಷ್ಠರು, ಬೌದ್ಧಧರ್ಮದ ನಿಯಮಗಳನ್ನು ಅನುಸರಿಸಿದವರು ದೊರೆಯುವುದು ಅಪರೂಪ. ಬುದ್ಧನ ಪ್ರಭಾವವೇ ಅಷ್ಟು ಪರಿಣಾಮಕಾರಿಯಾದುದು. ಗೌತಮನ ಪ್ರಭಾವ ವಲಯಕ್ಕೆ ಒಳಗಾದವರು ಅವರಿಂದ ಮತ್ತೆ ದೂರ ಸರಿಯುವುದು ಅಸಾಧ್ಯ ಎನ್ನುವುದಕ್ಕೆ ಹಲವು ಉದಾಹರಣೆಗಳು ದೊರೆಯುತ್ತವೆ. ಬೌದ್ಧಧರ್ಮವು ವಾಸ್ತವವಾಗಿ ಕರುಣಾಮಯಿಯಾದುದು, ಮೌಢ್ಯವನ್ನು ನಿರಾಕರಿಸಿ ವೈಜ್ಞಾನಿಕವಾಗಿ ಚಿಂತನೆಗೆ ಹಚ್ಚುವಂತಹದ್ದು. ಮನುಜರೊಳಗಿನ ಆಮಿಷಗಳನ್ನು, ಮೋಸ ವಂಚನೆ, ಕಳ್ಳತನ, ಕೊಲೆಯಂತಹ ಹೇಯಗುಣಗಳನ್ನು ವಿಸರ್ಜಿಸಿ ಮಾನವೀಯ ಮಾರ್ಗದಲ್ಲಿ ನಡೆಯುವಂತಹ ತಿಳುವಳಿಕೆಯನ್ನು ಆ ಧರ್ಮ ಹೇಳಿದೆ. ಅಂಗುಲಿಮಾಲನಂತಹ ಕೊಲೆಗಡುಕನನ್ನು ಪುಣ್ಯಾತ್ಮನನ್ನಾಗಿ ಮಾಡಿದ, ವೇಶ್ಯೆ ಆಮ್ರಪಾಲಿಯನ್ನು ಭಿಕ್ಷುಣಿಯಾಗುವಂತೆ ಪರಿವರ್ತನೆಯ ದಿಶೆ ತೋರಿಸಿದ ಧರ್ಮ ಗೌತಮಬುದ್ಧನದು. ದೊರೆಗಳಾದ ಬಿಂಬಿಸಾರ, ಪ್ರಸೇನಜಿತರಂಥವರಲ್ಲಿನ ದೋಷಗಳನ್ನು ಕಳೆದು ಅವರಲ್ಲಿಯೂ ಮಾನವೀಯ ಅನುಕಂಪವನ್ನು ಬುದ್ಧ ಜಾಗ್ರತಗೊಳಿಸಿದ್ದು ಬಹುದೊಡ್ಡ ಸಂಗತಿಯಾಗಿದೆ. ಬುದ್ಧಧರ್ಮದಡಿಯಲ್ಲಿ ನಡೆಯುವ ಭಿಕ್ಷುಸಂಘಕ್ಕೆ ಸೇರಿ ಬಂದವರು ಕೇವಲ ಸಾಮಾನ್ಯ ವರ್ಗದ ಜನರಲ್ಲ; ದೊರೆಗಳಂತಹವರು ರಾಜ್ಯ ಮೊದಲೆಲ್ಲ ಸರ್ವಸ್ವಗಳನ್ನು ತೊರೆದು ಬಹಳ ದೂರದ ದೇಶದಿಂದ ಅವನನ್ನು ಹುಡುಕಿಕೊಂಡು ಬಂದವರಿದ್ದಾರೆ. ಗಾಂಧಾರ ದೊರೆ ಪುಕ್ಕುಸಾತಿ, ರೋರುವಾ ರಾಜ್ಯದ ಅರಸ ತಿಷ್ಯ ಮೊದಲಾದವರನ್ನು ಇಲ್ಲಿ ಹೆಸರಿಸಬಹುದು.
ಲಕ್ಷ್ಮಣ ಕೌಂಟೆ | Lakshmana Kaunte |
0 average based on 0 reviews.