| Category: | ಕನ್ನಡ |
| Sub Category: | ಪ್ರವಾಸ ಕಥನ |
| Author: | ಎಂ ಆರ್ ಕಮಲ & ಆಕರ್ಷ ಕಮಲ | M R Kamala & Akarsha Kamala |
| Publisher: | ಸಸಿ ಪ್ರಕಾಶನ | sasi prakashana |
| Language: | Kannada |
| Number of pages : | |
| Publication Year: | 2026 |
| Weight | 200 |
| ISBN | 9788199 872905 |
| Book type | Paperback |
Delivery between 2-6 Days
No returns accepted. Please refer our full policy
Your payments are 100% secure
ಮ್ಯೂನಿಕ್ನಿಂದ 'ಡಕಾವ್'ಗೆ ಭಾರವಾದ ಮನಸ್ಸಿನಿಂದಲೇ ಹೊರಟೆವು. ಮೊಮ್ಮಗನನ್ನು ಅಲ್ಲಿಗೆ ಕರೆದೊಯ್ಯಬಾರದೆಂದು ಮೊದಲೇ ತೀರ್ಮಾನಿಸಿದ್ದೆವು. ಅಲ್ಲಿಂದ ಕೇವಲ ಅರ್ಧ ತಾಸಿನ ಪ್ರಯಾಣವಾದರೂ ಅಕ್ಕನ ಮಗಳು ಡಕಾವ್ಗೆ ಕಾಲಿಟ್ಟಿರಲಿಲ್ಲ. 'ಅಲ್ಲಿಗ್ಯಾಕೆ ಹೋಗ್ತಿಯ? ಎಂದು ಹಿಂದಿನ ದಿನ ಫೋನ್ ಮಾಡಿದ್ದ ಅಕ್ಕ ಬೈದಿದ್ದಳು. ಸಣ್ಣ ಪುಟ್ಟ ವಿಷಯಕ್ಕೂ ನೋಯುವ ನನ್ನ ಸ್ವಭಾವದ ಅರಿವು ಅವಳಿಗಿತ್ತು. ಇಷ್ಟು ಹೇಳಿದ ಮೇಲೆ ನಾನು ಹೋಗಿದ್ದು 'ಡಕಾವ್ ಯಾತನಾ ಶಿಬಿರ'ಕ್ಕೆ (ಕಾನ್ಸಂಟ್ರೇಶನ್ ಕ್ಯಾಂಪ್) ಎಂಬುದು ನಿಮ್ಮ ಅರಿವಿಗಾಗಲೇ ಬಂದಿರಬಹುದು. ಚರಿತ್ರೆಯನ್ನು ಓದಿಕೊಂಡವರಿಗೆ ಶಿಬಿರಕ್ಕೆ ಕಾಲಿಡುವುದು ಯಾತನಾಮಯವೇ. ಎಲ್ಲಿ ಹೆಜ್ಜೆಯಿಟ್ಟರೂ ನೆತ್ತರಿನ ಕಲೆ ಪಾದಕ್ಕೆ ಅಂಟಿಕೊಂಡೀತೆಂಬ ಭೀತಿ ಮೂಡುವುದು ಸುಳ್ಳಲ್ಲ.
- ಎಂ ಆರ್ ಕಮಲ
ಓಡುತ್ತಿದ್ದ ಮಗ ಅವನನ್ನು ನೋಡಿ ಹಾಗೆಯೇ ನಿಂತುಬಿಟ್ಟ. ಬೆಚ್ಚಗಿನ ಕಲ್ಲಿನ ಹಾದಿಯಲ್ಲಿ ನಿಂತು ತಲೆ ಬಾಗಿಸಿ ನೋಡುತ್ತಿದ್ದ. ಜನರಲ್ಲಿ ಬುದ್ಧ ಸೃಷ್ಟಿಸುವ ಈ ನಿಶ್ಚಲತೆಗೆ ಒಂದು ನಿರ್ದಿಷ್ಟ ಗುಣವಿದೆ. ವಿಸ್ಮಯವಂತೂ ಅಲ್ಲ. ನಿಮ್ಮ ಇರುವಿಕೆಯನ್ನು ಇಡಿಯಾಗಿ ಗಮನಿಸಿ ನಿಮ್ಮದೇ ದನಿಯನ್ನು ಅನುಸರಿಸಿ. ನಿಮ್ಮ ಹೆಸರನ್ನೇ ಕೂಗಿ ನಿಲ್ಲಿಸಿಬಿಡುವಂತಹ ವಿಚಿತ್ರ. ಬುದ್ಧ ಯಾವುದೇ ಲೌಕಿಕ ಸಾಂತ್ವನವನ್ನು ನೀಡುವುದಿಲ್ಲ. ಆದರೆ ಎಲ್ಲದಕ್ಕೂ ಸಾಕ್ಷಿಯಾಗುವ ಕಷ್ಟದ ಕೆಲಸ ಅವನದು. ನೀವು ಹೊತ್ತುಕೊಂಡು ತಿರುಗುತ್ತಿರುವ ಭಾರವನ್ನೆಲ್ಲವನ್ನು ನಾನು ನೋಡುತ್ತಿದ್ದೇನೆ ಎಂಬ ಸಾಂತ್ವನದ, ಶಾಂತ ದನಿ.
- ಆಕರ್ಷ ರಮೇಶ್ ಕಮಲ
ಎಂ ಆರ್ ಕಮಲ & ಆಕರ್ಷ ಕಮಲ | M R Kamala & Akarsha Kamala |
0 average based on 0 reviews.