ಪುಚ್ಚೆ

 116

Secure Payments

Your payments are 100% secure

Pan India Shipping

Delivery between 2-8 Days

Return Policy

No returns accepted. Please refer our full policy

Book Details

Weight .4 kg
Author
Page Nos
Publications
(1 customer review)

SYNOPSIS

ABOUT AUTHOR

ಗಿರೀಶ್ ರಾವ್ ಹತ್ವಾರ್.. ಈ ಹೆಸರು ಹೆಚ್ಚಿನ ಜನಕ್ಕೆ ಗೊತ್ತಿಲ್ಲ. ಯಾಕಂದ್ರೆ ಗಿರೀಶ್ ರಾವ್ ಹತ್ವಾರ್ ಸಾಹಿತ್ಯ ಲೋಕದಲ್ಲಿ ಹೆಸರು ಮಾಡಿರೋದು ಜೋಗಿ ಹೆಸರಿನಲ್ಲಿ. ಜೋಗಿ, ಜಾನಕಿ, ಎಚ್.ಗಿರೀಶ್ ರಾವ್, ಸತ್ಯವ್ರತ ಹೀಗೆ ವಿವಿಧ ಅಂಕಿತ ನಾಮಗಳ ಮೂಲಕ ಓದುಗರ ಮನ ಗೆದ್ದವರು ಜೋಗಿ. 1965ರ ನವೆಂಬರ್ 16ರಂದು ಸೂರತ್ಕಲ್ ಸಮೀಪದ ಹೊಸಬೆಟ್ಟು ಗ್ರಾಮದಲ್ಲಿ ಜನಿಸಿದ ಜೋಗಿ ವೃತ್ತಿಯಲ್ಲಿ ಪತ್ರಕರ್ತರು. ಖ್ಯಾತ ವಾರ    Read More...

Opinion of Others

There are no others opinion yet.

Customer Reviews

1 review for ಪುಚ್ಚೆ

  1. Hareesha AS

    ಪುಸ್ತಕ: ಪುಚ್ಚೆ
    ಲೇಖಕರು: ಜೋಗಿ (ಗಿರೀಶ್ ರಾವ್ ಹತ್ವಾರ್)
    ಪ್ರಕಟಿತ ವರ್ಷ: 2020

    ಓದುಗನಾಗಿ ನನಗೊಂದು ಕೆಟ್ಟ ಗೀಳು, ಓದುವ ಕಥೆಯ ಪಾತ್ರಗಳಿಗೆ ಪಾತ್ರಧಾರಿಯಾಗಿ ನಾನು ತಲಕಾಯಪ್ರವೇಶ ಮಾಡಕೂಡದೆಂದು ಎಷ್ಟು ಪ್ರಯತ್ನಿಸಿದರೂ ಅದರಿಂದ ನಾನು ಹೊರ ಬರಲು ಸಾಧ್ಯವಾಗಿಲ್ಲ. ಆದ್ದರಿಂದಲೇ ಕೆಲವು ಪುಸ್ತಕಗಳನ್ನು ಈವರೆಗೂ ಓದಿ ಮುಗಿಸಲಿಲ್ಲ. ಈ ಕಾದಂಬರಿಯನ್ನೂ ನಾಯಕ ಪಾತ್ರದಾರನಾಗಿಯೇ ಓದಿ ಮುಗಿಸಿದೆ, ಜೋಗಿಯವರು ನನ್ನನ್ನೇ ನೋಡಿ ಬರೆದಿರಬಹುದಾ ಎನ್ನುವ ಅನುಮಾನ ಆವರಿಸಿತ್ತೆಂದರೆ ತಪ್ಪಿಲ್ಲ. ಆ ಅನುಮಾನ ಕಾಡಲು ಕಾದಂಬರಿಯಲ್ಲಿ ಬರುವ ಅನೇಕ ಪ್ರಸಂಗಗಳು ಮತ್ತು ಕಥೆಯ ತಿರುಳು ಕಾರಣ.

    “ಪುಚ್ಚೆ”, 100 ಪುಟಗಳ ಸಣ್ಣ ಕಾದಂಬರಿ, 3 ರಿಂದ 4 ಗಂಟೆಗಳಲ್ಲಿ ನಿರಾಸಯವಾಗಿ ಓದಿ ಮುಗಿಸಬಹುದು. ನೀವು ಪುಸ್ತಕ ಓದಬೇಕಿಲ್ಲ, ಅದೇ ನಿಮ್ಮನ್ನು ಓದಿಸಿಕೊಳ್ಳುತ್ತದೆ. ಯಾವುದೇ ರೀತಿಯಲ್ಲಿ ತಲೆಗೆ ಹೆಚ್ಚು ಒತ್ತಡವನ್ನು ಹೇರದೆ, ಕುತೂಹಲತೆಯಿಂದ ಓದುಗನನ್ನು ಕರೆದೊಯ್ಯುತ್ತದೆ. ಕಾದಂಬರಿಯ ನಾಯಕ ಪುರುಷೋತ್ತಮ, ಇವನ ವ್ಯಕ್ತಿತ್ವವೇ ವಿಚಿತ್ರ, ಸದಾ ಸದಾ ಏನಾದರು ಹೊಸತನವನ್ನು ಬಯಸುವವ, ಅದರಿಂದಲೇ ಆರು ತಿಂಗಳಿಗೊಂದು ಕೆಲಸ ಬದಲಿಸುವ ಆಸಾಮಿ. ಕೆಲಸವೊಂದೇ ಅಲ್ಲ, ಮನೆಯನ್ನು, ಪ್ರೇಯಸಿಯನ್ನು, ಕೊನೆಗೆ ವ್ಯಕ್ತಿತ್ವವನ್ನೂ ಸಹ ಬದಲಿಸುವವ, ಮಾಡದ ಕೆಲಸಗಳಿಲ್ಲ, ಪ್ರವೇಶ ಮಾಡದ ಪಾತ್ರಗಳಿಲ್ಲ.

    ಒಂದು ಪಾಕ ತಯಾರಿಕೆಯಲ್ಲಿ ಬಳಸುವ ಪ್ರತಿಯೊಂದು ಪದಾರ್ಥವು ಸೂಕ್ತ ಪ್ರಮಾಣದಲ್ಲಿ ಇದ್ದರೆ ಮಾತ್ರ ಒಂದು ಉತ್ಕೃಷ್ಟವಾದ ರುಚಿಕರವಾದ ಪಾಕ ತಯಾರಿಕೆಯಾಗಲು ಸಾಧ್ಯ. ಅದೇ ರೀತಿ ಈ ಕಾದಂಬರಿಯಲ್ಲಿ ಎಲ್ಲಾ ಅಂಶಗಳೂ ಸಮ/ಸೂಕ್ತ ಪ್ರಮಾಣದಲ್ಲಿವೆ ಎಂದರೆ ತಪ್ಪಾಗಲಾರದು. ಪ್ರೀತಿ, ಪ್ರಣಯ, ರೋಚಕತೆ, ಅಪರಾಧ, ಮೋಹ, ಬೋಧನೆ, ತತ್ವ ಎಲ್ಲವೂ ಇವೆ ಆದರೆ ಯಾವುದೂ ಎದ್ದು ಕಾಣುತ್ತಿಲ್ಲ.

    ಆದರೂ ಲೇಖಕರು ಸಾಕಷ್ಟು ಪ್ರಶ್ನೆಗಳಿಗೆ ಉತ್ತರ ಕೊಡದೇ ಓದುಗರನ್ನು ಮೋಸಗೊಳಿಸಿದ್ದಾರೆ ಅಥವಾ ಓದುಗನ ಊಹೆಗೆ ಬಿಟ್ಟರೂ ಎಂದು ತಿಳಿದುಕೊಂಡರು, ಅಷ್ಟೊಂದು LOOSE ENDS ಬಿಡುವ ಅವಶ್ಯಕತೆ ಇತ್ತೇ?. ಇಲ್ಲಿ ಕೆಲವನ್ನು ಮಾತ್ರ ಹೆಸರಿಸುತ್ತೇನೆ.

    # ಸಾಕಷ್ಟು ಪಾತ್ರಗಳು ಬಂದು ಹೋಗುತ್ತವೆಯಾದರೂ ಯಾವುದಕ್ಕೋ ಒಂದು ಸರಿಯಾದ ವ್ಯಕ್ತಿತ್ವವನ್ನು ನೀಡುವಲ್ಲಿ ಜೋಗಿಯವರು ಎಡವಿದ್ದಾರೆ. ಪುರುಷೋತ್ತಮನಿಂದ-ಪ್ರೇಯಸಿಯರು-ಬಾಬು ವರೆಗೆ.

    # ನಟರಾಜ್, ಭಾವಿ ಅಳಿಯನ ಅಪಘಾತದ ಮೇಲೆ ಏಕೆ ಅಷ್ಟೊಂದು ತೀವ್ರವಾಗಿ ಅನುಮಾನಗೊಂಡ ಅವಶ್ಯಕತೆ ಏನಿತ್ತು?. ಕೇವಲ ಓದುಗನ್ನು ಇಲ್ಲಿ ಏನೋ ಇದೆ ಎಂದು ಓದಿಸಿಕೊಂಡು ಹೋಗುವ ಕುತೂಹಲತೆಯ ಮರೀಚಿಕೆ? ಕೇವಲ ಮರೀಚಿಕೆಯಾದರೆ ಓದುಗನಿಗೆ ಮಾಡಿದ ದೊಡ್ಡ ದ್ರೋಹ.

    #ನಿಜವಾಗಿ ಆಕ್ಸಿಡೆಂಟ್ ಮಾಡಿಸಿದ್ದು ಯಾರು? ಅಥವಾ ಅದು ಕೇವಲ ಕಾಕತಾಳೀಯವೇ? ಉತ್ತರವೇ ಇಲ್ಲ.

    # ಆಕ್ಸಿಡೆಂಟ್ ವಿಷಯದ ಬಗ್ಗೆ ಪೊಲೀಸ್ ಬಂದು ವಿಚಾರಿಸಿದ ವಿಚಾರಕ್ಕೆ ಕುಮುದ, ಪುರುಗೆ ಕರೆ ಮಾಡಿ ನೀನು ಹುಷಾರಾಗಿರು ಅಂತ ಹೇಳುವ ಅವಶ್ಯಕತೆ ಏನಿತ್ತು?. ಮತ್ತೆ ಮರೀಚಿಕೆ…

    #ಪುರುಷೋತ್ತಮ ಅಷ್ಟೊಂದು ಪ್ಲರ್ಟರ್ ( Psycho ಎಂದರೂ ತಪ್ಪಿಲ್ಲ!) ಆಗಿದ್ದ ಎನ್ನುವುದು ಗೊತ್ತಿದ್ದೂ ಸಹ ಸುರೇಶ್ ಬಾಬು ತನ್ನ ಮಗಳನ್ನು ಮದುವೆ ಮಾಡಿಕೊಡಲು ಒಪ್ಪಲು ಸಾಧ್ಯವೇ?. ಅವನಲ್ಲಿ ಅಂತಹ ಒಳ್ಳೆಯ ಗುಣಗಳನ್ನು ಏನು ಕಂಡನೋ ನಾ ಕಾಣೆ! ಜೋಗಿಯವರೇ ಯೋಚಿಸಿ ಆ ಸನ್ನಿವೇಶದಲ್ಲಿ, ನೀವೇ ಇದ್ದಿದ್ದರೆ!

    #ಯಾರನ್ನು ಪ್ರೀತಿಸಿಲ್ಲ, ತನ್ನನ್ನು ಯಾರು ಪ್ರೀತಿಸಿಲ್ಲ ಎನ್ನುವ ಪುರುವಿನ ನಿಜವಾದ ವ್ಯಕ್ತಿತ್ವ ಮೊದಲಿಂದ ಕೊನೆಯವರೆಗೆ ಬದಲಾಗುತ್ತಾ ಹೋಗುತ್ತದೆ, ಎಲ್ಲ ಕಡೆ ತನಗೆ ಬೇಕಂತೆ ಪಾತ್ರವನ್ನು ತಿರುಚಿದ್ದಾರೆ, ಕುಣಿಸಿದ್ದಾರೆ. ಅದು ಸರಿಯೇ?.

    #ಕೊನೆಗೆ ಎಲ್ಲಿಂದಲೋ ಬರುವ ಬೆಕ್ಕು, ಅದರ ಸಾವು, ಮತ್ತೆ ಪುನರ್ಜನ್ಮ!

    ಮತ್ತೊಮ್ಮೆ ಓದಿದರೆ ಬಹುಶಃ ಹತ್ತಾರು ನ್ಯೂನತೆಗಳು ಎದ್ದು ಕಾಣಬಹುದು. ಆದರೂ ಪುಸ್ತಕ ಓದುತ್ತಿದ್ದರೆ ಒಳ್ಳೆ ಮಜ ಕೊಡುತ್ತದೆ. ಇನ್ನೊಂದು ವಿಶೇಷವೇನೆಂದರೆ ಈ ಒಂದೇ ಪುಸ್ತಕವನ್ನು ಒಂದೇ ದಿನ ಮನೆಯಲ್ಲಿ ಮೂರು ಜನ ಓದಿ ಮುಗಿಸಿದ್ದೆವು, ಅಕ್ಕ, ನಾನು ಮತ್ತು ಗುರುಗಳು … ಎಲ್ಲರ ಅಭಿಪ್ರಾಯವೂ ಇದೆ…

    ಒಂದು ತಮಾಷೆಯ ಪ್ರಸಂಗ ಇಲ್ಲಿ ತಿಳಿಸಲು ಬಯಸುತ್ತೇನೆ. ಜೋಗಿ, ಪುರುಷೋತ್ತಮನ ಮೂಲಕ ಪಾಯಸಕ್ಕೆ ಬೆಳ್ಳುಳ್ಳಿ ಹಾಕಿ ತಿನ್ನುವ ಪ್ರಯೋಗವನ್ನು ಮಾಡಿಸಿದ್ದಾರೆ. ಇಂತಹವುದ್ದೇ ಪ್ರಯೋಗಗಳನ್ನು ನಿಜ ಜೀವನದಲ್ಲಿ ಕಂಡಿದ್ದೇನೆ: ಕಾಫಿಗೆ, Sprite ಗೆ ಮೆಣಸಿನ ಪುಡಿ ಹಾಕಿ ಕುಡಿಯುವ ಮಹಾನುಭಾವರು. ಟೀ ಮತ್ತು ಕಾಫಿ ಮಿಶ್ರಣ ಮಾಡಿ ಕುಡಿಯುವ ವಿಚಿತ್ರ ಪ್ರಾಣಿಗಳು. ಹಸಿಮೆಣಸಿಕಾಯಿಯ ಸುವಾಸನೆ ಇಷ್ಟ ಎಂದು ಅದನ್ನೇ ಶಂಪೂವಿನೊಂದಿಗೆ ಬೆರೆಸಿ ತಲೆ ಸ್ನಾನ ಮಾಡುವ ಮೂರ್ಖರು.!

Add a review

Your email address will not be published. Required fields are marked *