ಪದಬಂಧ
₹ 100 Original price was: ₹ 100.₹ 89Current price is: ₹ 89.
Secure Payments
Your payments are 100% secure
Pan India Shipping
Delivery between 2-8 Days
Return Policy
No returns accepted. Please refer our full policy
SYNOPSIS
ಇಂಗ್ಲಿಷ್ ಭಾಷೆಯಲ್ಲಿ ಉಪಯೋಗದಲ್ಲಿರುವ Crossword puzzle ಎಂಬ ಶಬ್ದಕ್ಕೆ ಕನ್ನಡದಲ್ಲಿ ಮಾಡಿಕೊಂಡಿರುವ ‘ಪದಬಂಧ’ ಎಂಬ ಮಾತು ಈಗ ತುಂಬಾ ಪ್ರಚಾರದಲ್ಲಿದೆ. ನಿಜವಾಗಿ ಇದು ಒಂದು ಸಮಸ್ಯೆಯ ಪ್ರಪಂಚ. ಇದರಲ್ಲಿ ಮೇಲಿನಿಂದ ಕೆಳಕ್ಕೆ ೯, ೧೦ ಅಥವ ೧೧ ಮನೆಗಳು, ಅಡ್ಡಡ್ಡಲಾಗಿ ಅಷ್ಟೇ ಸಂಖ್ಯೆಯ ಮನೆಗಳು ಇರುತ್ತವೆ. ಆ ಮನೆಗಳಲ್ಲಿ ನಿಯಮಬದ್ಧವಾಗಿ ಕೆಲವು ಮನೆಗಳನ್ನು ಬಿಟ್ಟು ಮಿಕ್ಕ ಮನೆಗಳಲ್ಲಿ ಮೇಲಿನಿಂದ ಕೆಳಕ್ಕೂ, ಅಡ್ಡಡ್ಡಲಾಗಿಯೂ ಶಬ್ದಗಳನ್ನು ಸೇರಿಸಬೇಕು. ಈ ಶಬ್ದಗಳನ್ನು ಆರಿಸಿಕೊಳ್ಳಲು ಎರಡು ಕಡೆಗಳಿಗೂ ಸೂಕ್ತವಾದ ಸೂಚನೆಗಳಿರುತ್ತವೆ. ಆ ಸೂಚನೆಯ ಬೆನ್ನು ಹತ್ತಿ ಓದುಗರು ಸರಿಯಾದ ಪದಗಳನ್ನು ಹುಡುಕಿ ಆ ಮನೆಗಳಿಗೆ ತುಂಬ ಬೇಕು.
ಅ.ನಾ.ಪ್ರಹ್ಲಾದರಾವ್ ಅವರು ಸಿದ್ಧಪಡಿಸಿರುವ ಈ ಪುಸ್ತಕದಲ್ಲಿ ಸುಮಾರು ೧೬೮ ಪದಬಂಧಗಳು ಅಡಕಗೊಂಡಿವೆ. ಪ್ರತಿಯೊಂದರಲ್ಲಿಯೂ ಓದುಗರಿಗೆ ಆಸಕ್ತಿ ಹುಟ್ಟಿಸುವ ಸಮಸ್ಯೆಗಳಿವೆ. ಇಲ್ಲಿಯವರೆಗೂ ಕನ್ನಡದಲ್ಲಿ ಇಂಥ ಒಂದು ಪುಸ್ತಕ ಬಂದಿರಲಿಲ್ಲ. ಇದೇ ಮೊದಲ ಪುಸ್ತಕ. ಇದನ್ನು ಸಿದ್ಧಪಡಿಸಿರುವ ಶ್ರೀ ಪ್ರಹ್ಲಾದರಾವ್ ಅವರು ಕನ್ನಡದ ಬಹುಪಾಲು ಪತ್ರಿಕೆಗಳಿಗೆ ಕಳೆದ ೨೩ ವರ್ಷಗಳಿಂದ ಪದಬಂಧಗಳನ್ನು ರಚಿಸುತ್ತಾ ಬಂದಿದ್ದಾರೆ. ಇವರು ಬಹಳ ಶ್ರಮ ವಹಿಸಿ ಈ ಸುಂದರ ಸಮಸ್ಯಾ ಪ್ರಪಂಚವನ್ನು ಸಿದ್ಧಪಡಿಸಿದ್ದಾರೆ.
ABOUT AUTHOR
Opinion of Others
There are no others opinion yet.
Reviews
There are no reviews yet.