ಎದ್ದೇಳು ಭಾರತೀಯ

Original price was: ₹ 60.Current price is: ₹ 53.

Secure Payments

Your payments are 100% secure

Pan India Shipping

Delivery between 2-8 Days

Return Policy

No returns accepted. Please refer our full policy

Book Details

Weight .2 kg
Author
Page Nos
ISBN
Publications

SYNOPSIS

ನಿಮಗೆ ಈಗ ದೊರೆಯುತ್ತಿರುವ ವಿದ್ಯಾಭ್ಯಾಸದಲ್ಲಿ ಕೆಲವು ಒಳ್ಳೆಯ ಅಂಶಗಳಿವೆ. ಆದರೆ ಅದರಲ್ಲಿ ಒಂದು ಮಹಾಲೋಪವಿದೆ. ಅದು ಒಳ್ಳೆಯ ಅಂಶಗಳನ್ನೂ ನಿಷ್ಕ್ರಿಯಗೊಳಿಸಿದೆ. ಇದು ಪುರುಷಸಿಂಹರನ್ನು ತಯಾರು ಮಾಡುವ ವಿದ್ಯಾಭ್ಯಾಸವಲ್ಲ. ಇದು ಕೇವಲ ನಿಷೇಧಮಯವಾದ ವಿದ್ಯಾಭ್ಯಾಸ, ನಿಷೇಧಮಯವಾದ ವಿದ್ಯಾಭ್ಯಾಸ ಅಥವಾ ನಿಷೇಧಭಾವನೆಯ ಮೇಲೆ ನಿಂತ ಯಾವ ತರಬೇತಿಯಾಗಲೀ ಮೃತ್ಯುವಿಗಿಂತ ಹಾನಿಕರ. ನಮ್ಮಲ್ಲಿ ತಂದೆತಾಯಿ ಮಗುವನ್ನು ಶಾಲೆಗೆ ಕಳಿಸುವರು. ಮೊದಲು ಅದು ಕಲಿಯುವುದೇ ತಂದ ಮೂರ್ಖ ಎಂಬುದನ್ನು ಎರಡನೆಯದು ಅದರ ತಾತ ಹುಚ್ಚವೆನ್ನುವುದನ್ನು. ಮೂರನೆಯದೇ ಗುರುಗಳೆಲ್ಲ ಆಷಾಢಭೂತಿಗಳು, ನಾಲ್ಕನೆಯದೇ ಪವಿತ್ರ ಶಾಸ್ತ್ರಗಳೆಲ್ಲ ಸುಳ್ಳಿನ ಕಂತೆ ಎನ್ನುವುದು. ಅವನಿಗೆ ಹದಿನಾರು ವರ್ಷ ತುಂಬುವ ಸಮಯಕ್ಕೆ ಅದನೊಂದು ನಿಷೇಧಮಯದ ಕಂತೆಯಾಗುವನು. ಅವನು ನಿರ್ಜೀವವಾಗಿ, ನಿತ್ರಾಣನಾಗುವನು. ಇದರ ಪರಿಣಾಮವಾಗಿ ಐವತ್ತು ವರ್ಷಗಳಲ್ಲಿ ಈ ದೇಶದಲ್ಲಿ ಒಬ್ಬ ಸ್ವತಂತ್ರವಾಗಿ ವಿಚಾರ ಮಾಡುವ ವ್ಯಕ್ತಿಯೂ ಇದರ (ಇಂತಹ ಶಿಕ್ಷಣಕ್ರಮದ) ಮೂಲಕ ಬಂದಿಲ್ಲ.
ಸ್ವತಂತ್ರವಾಗಿ ಆಲೋಚನೆ ಮಾಡುವ ವ್ಯಕ್ತಿಗಳೆಲ್ಲ ವಿದ್ಯಾಭ್ಯಾಸವನ್ನು ಹೊರಗೆ ಪಡೆದರು ಅಥವಾ ಪುನಃ ಹಿಂದಿನ ಕಾಲದ ವಿದ್ಯಾಕೇಂದ್ರಗಳಿಗೆ ತನ್ನ ಮೂಢನಂಬಿಕೆಗಳಿಂದ ಪಾರಾಗಲು ಹೋದರು. ವಿದ್ಯಾಭ್ಯಾಸವೆಂದರೆ ನಿಮ್ಮ ತಲೆಗೆ ತುಂಬಿದ ವಿಷಯಗಳ ಮೊತ್ತವಲ್ಲ. ಜೀವನವನ್ನು ನಿರ್ಮಾಣ ಮಾಡುವಂತಹ, ಸುರುಷಸಿಂಹರನ್ನು ನಿರ್ಮಿಸುವಂತಹ, ಶೀಲಸಂಪತ್ತಿಗೆ ಸಹಾಯವಾಗುವಂತಹ, ವಿಚಾರಗಳನ್ನು ಗ್ರಹಿಸುವಂತಹ ವಿದ್ಯಾಭ್ಯಾಸ ನಮಗೆ ಬೇಕು. ಗಂಧದ ಮರವನ್ನು ಹೊರುವ ಕತ್ತೆಗೆ ಅದರ ಭಾರ ಮಾತ್ರ ಗೊತ್ತು, ಅದರ ಗುಣ ಗೊತ್ತಿಲ್ಲ. ವಿದ್ಯಾಭ್ಯಾಸ ಕೇವಲ ವಿಷಯಸಂಗ್ರಹವಾದರೆ ಪುಸ್ತಕಾಲಯಗಳೇ ದೊಡ್ಡ ಮುನಿಗಳು, ವಿಶ್ವಕೋಶಗಳೇ ದೊಡ್ಡ ಋಷಿಗಳಾಗುತ್ತಿದ್ದವು. ನಮ್ಮ ಆದರ್ಶವೇನೆಂದರೆ ಪಾರಮಾರ್ಥಿಕ ಮತ್ತು ಲೌಕಿಕ ಶಿಕ್ಷಣಗಳೆರಡೂ ನಮ್ಮ ಅಧೀನದಲ್ಲಿರಬೇಕು; ಸಾಧ್ಯವಾದ ಮಟ್ಟಿಗೆ ಅವು ರಾಷ್ಟ್ರೀಯವಾಗಿರಬೇಕು, ರಾಷ್ಟ್ರೀಯ ಪದ್ಧತಿಯಲ್ಲಿರಬೇಕು.

ABOUT AUTHOR

ಡಾ. ಜಿ. ಬಿ. ಹರೀಶ ಹುಟ್ಟಿದ್ದು 1975ರಲ್ಲಿ, ಹಾಸನದಲ್ಲಿ ಎಂಎ, ಎಂಬಿಎ ಮತ್ತು ಪಿಎಚ್‌ಡಿ ಪದವೀಧರರು. ವಿವಿಧ ಶೈಕ್ಷಣಿಕ ಸಂಸ್ಥೆಗಳಲ್ಲಿ ಕನ್ನಡಅಧ್ಯಾಪಕರಾಗಿ, ಕರ್ನಾಟಕ ಜ್ಞಾನ ಆಯೋಗದ ಕಣಜದ ಸಂಶೋಧನಾಧಿಕಾರಿಯಾಗಿ, ತುಮಕೂರು ವಿವಿಯ ಡಿ. ವಿ. ಗುಂಡಪ್ಪ ಸ್ನಾತಕೋತ್ತರ ಕನ್ನಡ ಅಧ್ಯಯನ ಕೇಂದ್ರದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ, "ಪ್ರಜಾವಾಣಿ"ಯ ಮುಖ್ಯ ಉಪಸಂಪಾದಕರಾಗಿ, "ವಿಜಯವಾಣಿ"ಯ ಸಂಪಾದಕೀಯ ಸಲಹೆಗಾರರಾಗಿ ಸೇವೆ. ಮೂರು ವರ್ಷ ವಿಯೆಟ್ನಾಂನ ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ    Read More...

Opinion of Others

There are no others opinion yet.

Customer Reviews

Reviews

There are no reviews yet.

Be the first to review “ಎದ್ದೇಳು ಭಾರತೀಯ”

Your email address will not be published. Required fields are marked *

Related Products