ಭಗವಾನ್ ಬುದ್ಧನ ಧಮ್ಮಪದ

Original price was: ₹ 120.Current price is: ₹ 107.

Secure Payments

Your payments are 100% secure

Pan India Shipping

Delivery between 2-8 Days

Return Policy

No returns accepted. Please refer our full policy

Book Details

Weight .12 kg

SYNOPSIS

ತತ್ತ್ವಜ್ಞಾನವನ್ನು ಸಾಂಪ್ರದಾಯಿಕವಾಗಿ ಅಧ್ಯಯನ ಮಾಡಿದ ಹಾಗೂ ತತ್ತ್ವಜ್ಞಾನದ ಪ್ರಾಧ್ಯಾಪಕರೂ ಆಗಿದ್ದ ಓಶೋ ಜಗತ್ತಿನ ಹಲವು ದರ್ಶನಗಳನ್ನು ಆಳವಾಗಿ ಅಭ್ಯಾಸ ಮಾಡಿದ ಮೇಲೆ ಹೇಳಿದರು: ‘ಜಗತ್ತಿನ ಬೇರೆ ದರ್ಶನಕಾರರು ಬುದ್ಧನ ಹತ್ತಿರ ಸುಳಿಯದಷ್ಟು ದೂರವಿದ್ದಾರೆ. ಅವರೆಲ್ಲರಿಗೆ ಅನುಯಾಯಿಗಳು ಬೇಕು, ಅವರೆಲ್ಲ ನಿರ್ದಿಷ್ಟ ಕ್ರಮ, ಆಚರಣೆಗಳನ್ನು ಮಾಡಬೇಕೆಂಬ ನಿಬಂಧನೆ ಹಾಕುತ್ತಾರೆ. ತಾವು ತಯಾರಿಸಿಟ್ಟುಕೊಂಡ ಅಚ್ಚಿನಲ್ಲಿ ಪ್ರತಿಯೊಬ್ಬ ವ್ಯಕ್ತಿಯನ್ನೂ ಅದ್ದಿತೆಗೆದು, ಸುಂದರವಾದ ಜೈಲಿನಲ್ಲಿ ಕೂಡಿಡುತ್ತಾರೆ. ಆದರೆ ಬುದ್ಧ ಹಾಗಲ್ಲ. ಆತ ಸ್ವಾತಂತ್ರ್ಯದ ಹರಿಕಾರ, ಪರಿಪೂರ್ಣ ಸ್ವಾತಂತ್ರ್ಯವಿಲ್ಲದೆ ವ್ಯಕ್ತಿ ಆತ್ಮಸಾಕ್ಷಾತ್ಕಾರ ಪಡೆಯಲು ಸಾಧ್ಯವಿಲ್ಲ: ಆತ್ಯಂತಿಕ ಸತ್ಯದ ದರ್ಶನ ಮಾಡಲು ಸಾಧ್ಯವಿಲ್ಲ. ಬುದ್ಧ ಮನುಷ್ಯನನ್ನು ಶೃಂಖಲೆಯಿಂದ ಬಂಧಿಸುವುದಿಲ್ಲ; ಹಾರಲು ರೆಕ್ಕೆಗಳನ್ನು ಕೊಡುತ್ತಾನೆ. ಬೇರೆಲ್ಲ ದರ್ಶನಗಳು – ಅಥವಾ ದರ್ಶನಗಳೆಂದು ಕರೆಸಿಕೊಳ್ಳುವ ಮತಗಳು ಮನುಷ್ಯರನ್ನು ಬಂಧಿಸುತ್ತವೆ; ಅವರ ಮೇಲೆ ನಿಯಂತ್ರಣ ಸಾಧಿಸುತ್ತದೆ; ಅವರಿಗೆಲ್ಲ ಧರಿಸಲು ಒಂದೊಂದು ಮುಖವಾಡಗಳನ್ನು ಕೊಟ್ಟು ಅವರದನ್ನು ಸದಾ ಧರಿಸಿರುವಂತೆ ಒತ್ತಡ ಹೇರಿ ಅದನ್ನೇ ಮತಶಿಕ್ಷಣ ಎಂದು ಕರೆಯುತ್ತವೆ. ಆದರೆ ಬುದ್ಧ ಅಂಥ ಯಾವುದೇ ‘ಶಿಕ್ಷಣ’ ಕೊಡುವುದಿಲ್ಲ. ನೀನು ನೀನಾಗಿರು” ಎಂಬುದೇ ಆತನ ಶಿಕ್ಷಣ, ಅವನಂತೆ ಸ್ವಾತಂತ್ರ್ಯವನ್ನು ಪ್ರೀತಿಸಿದವರಿಲ್ಲ. ಅದಕ್ಕಾಗಿಯೇ ಇರಬೇಕು – ಬುದ್ಧ ಯಾರನ್ನೂ ತನ್ನ ಹಿಂಬಾಲಕರು ಎಂದು ಕರೆಯಲಿಲ್ಲ. ಅನುಯಾಯಿಗಳನ್ನು ಹೆಚ್ಚಿಸಿಕೊಳ್ಳುವುದರ ಕಡೆಗೆ ಆತನಿಗೆ ಗಮನವೇ ಇರಲಿಲ್ಲ. ಆತನ ಜೊತೆಗಿದ್ದವರೆಲ್ಲ ಸಹಯಾತ್ರಿಕರು. ತನ್ನ ಕಟ್ಟಕಡೆಯ ಮಾತಿನಲ್ಲಿ ಕೂಡ ಬದ್ಧ ಹೇಳಿದ್ದು: ಮುಂದಿನ ಜನ್ಮದಲ್ಲಿ ನಾನು ಬರುವುದಿದ್ದರೆ, ನಿಮ್ಮ ಗೆಳೆಯನಾಗಿ ಬರುತ್ತೇನೆ. ಹೌದು – ಆತ ಮೈತ್ರೇಯರಾಗಬಯಸಿದ್ದ ಮೈತ್ರೇಯ ಎಂದರೆ ಮಿತ್ರ ಎಂದು ಅರ್ಥ. ಅನುಯಾಯಿಯಲ್ಲ, ಸಹಚರ. ಹಿಂಬಾಲಕನಲ್ಲ, ಸ್ನೇಹಿತ, ಇದು ಬುದ್ಧನ ಸಂದೇಶ.”
ಬುದ್ಧನ ಸಂದೇಶಗಳೆಲ್ಲವನ್ನೂ ಸಂಗ್ರಹಿಸಿ ಬರೆದ ಗ್ರಂಥವೇ ಧಮ್ಮಪದ, ಬುದ್ಧನು ಇಹ ತ್ಯಜಿಸಿ ಎರಡೂವರೆ ಸಾವಿರ ವರ್ಷಗಳೇ ಕಳೆದರೂ ಆತನ ದಾರಿಯನ್ನು, ಆತನ ಬದುಕಿನ ರೀತಿಯನ್ನು, ಆತನ ಲೋಕಪ್ರೀತಿಯನ್ನು ಕಾಣಿಸುವ ಧಮನದ ನಾವೆಲ್ಲ ಓದಿ, ಅನುಸರಿಸಿ, ಆಚರಿಸಿ, ಇತರರಿಗೂ ಪರಿಚಯಿಸಿ ತಿಳಿಹೇಳಬೇಕಾದ ಲೋಕಮಾನ್ಯ ಗ್ರಂಥ

Opinion of Others

There are no others opinion yet.

Customer Reviews

Reviews

There are no reviews yet.

Be the first to review “ಭಗವಾನ್ ಬುದ್ಧನ ಧಮ್ಮಪದ”

Your email address will not be published. Required fields are marked *

Related Products