ಭಗ್ನಪ್ರೇಮಿಯ ಅಪೂರ್ಣ ಡೈರಿ

Original price was: ₹ 180.Current price is: ₹ 160.

SKU: BHAGNAPREMIYA APOORNA DIARY Categories: ,

Secure Payments

Your payments are 100% secure

Pan India Shipping

Delivery between 2-8 Days

Return Policy

No returns accepted. Please refer our full policy

Book Details

Weight .4 kg
Author
Page Nos
Publications
(1 customer review)

SYNOPSIS

ಒಬ್ಬ ಭಗ್ನಪ್ರೇಮಿಯ ನೋವನ್ನು ಇನ್ನೊಬ್ಬ ಭಗ್ನಪ್ರೇಮಿ ಮಾತ್ರ ಅರ್ಥಮಾಡಿಕೊಳ್ಳಲು ಸಾಧ್ಯ. ಅಂತಹದೇ ಒಬ್ಬ ಭಗ್ನಪ್ರೇಮಿಯ ಖಾಸಗಿ ನೋವಿನ ಡೈರಿಯ ಪುಟಗಳು ಇಲ್ಲಿವೆ. ಇದನ್ನು ಓದಿ ನವಪ್ರೇಮಿಗಳು ಇಲ್ಲಿಂದಲೆ ಎಚ್ಚರ ವಹಿಸಬಹುದು. ಈಗಾಗಲೇ ಭಗ್ನಗೊಂಡವರು ನಮ್ಮಂಥವರು ಹಲವರಿದ್ದಾರೆ ಎಂದು ಸಮಾಧಾನ ಪಟ್ಟುಕೊಳ್ಳಬಹುದು.
-ಸಚಿನ್ ತೀರ್ಥಹಳ್ಳಿ

ಭಗ್ನಪ್ರೇಮಿ ಕಟ್ಟಿದ ಕೋಟೆಯ ಮೇಲೆ ಕಾವಲುಗಾರನಿಲ್ಲ. ಏಕೆಂದರೆ ಅವನ ಸಾಮ್ರಾಜ್ಯ ಬರಿದೋ ಬರಿದು. ಅವನ ಅರಮನೆಯೊಳಗೆ ಸಿಂಹಾಸನವೂ ಕಾಣೆ. ಆದರೆ ಅವಳ ಅಂತರಂಗದಲ್ಲಿ ನಿತ್ಯವೂ ಪಟ್ಟಾಭಿಷೇಕ. ಇದನ್ನೆಲ್ಲಾ ಹದಿಹರೆಯದ ವ್ಯಾಮೋಹದ ಮೂಲಕ ಈ ಕಾದಂಬರಿ ಹೇಳುತ್ತದೆ.
-ಗೋಪಾಲಕೃಷ್ಣ ಕುಂಟಿನಿ

ನಿಮ್ಮೆಲ್ಲಾ ಪ್ರೇಮಗಳೂ ಫಲಿಸಿವೆ ಅಂದುಕೊಂಡಿದ್ದೆ. ಭಗ್ನಗೊಂಡವೂ ಇದ್ದಾವೆ ಎಂದು ಗೊತ್ತಾಗಿ ಸಂತೋಷವಾಯಿತು. ಒಮ್ಮೊಮ್ಮೆ ಅನ್ನಿಸುತ್ತದೆ; ಪ್ರೇಮ ಭಗ್ನಗೊಂಡ ಅವಳೇ ಅದೃಷ್ಟವಂತೆ. ನಾನೀಗ ಜಮುನಾಳನ್ನು ಹುಡುಕುತ್ತಿದ್ದೇನೆ, ಅಭಿನಂದನೆ ಹೇಳುವುದಕ್ಕೆ.
-ಜ್ಯೋತಿ ಎನ್

ಭಗ್ನಪ್ರೇಮ ಎಂಬ ಭಾವವೇ ನಶಿಸುತ್ತಿರುವ ಕಾಲದಲ್ಲಿ ಪ್ರೇಮದ ಮಾಧುರ್ಯ, ವಿರಹದ ಸಂಕಟ, ಬದುಕಿನ ವಿಷಾದವನ್ನು ಧರಿಸಿ ಬಂದಿರುವ ಆಹ್ಲಾದಕರ ಕತೆ ಇದು. ನಡೆದು ಬಂದ ದಾರಿಯ ಹಸಿರು ನೆನಪನ್ನು ಕೆದಕುವ ಕಲಕುವ ಸುಡುವ ಗಾಢನೆನಪಿನಚಿತ್ರ.
-ರಾಜೇಶ್ ಶೆಟ್ಟಿ

ABOUT AUTHOR

ಗಿರೀಶ್ ರಾವ್ ಹತ್ವಾರ್.. ಈ ಹೆಸರು ಹೆಚ್ಚಿನ ಜನಕ್ಕೆ ಗೊತ್ತಿಲ್ಲ. ಯಾಕಂದ್ರೆ ಗಿರೀಶ್ ರಾವ್ ಹತ್ವಾರ್ ಸಾಹಿತ್ಯ ಲೋಕದಲ್ಲಿ ಹೆಸರು ಮಾಡಿರೋದು ಜೋಗಿ ಹೆಸರಿನಲ್ಲಿ. ಜೋಗಿ, ಜಾನಕಿ, ಎಚ್.ಗಿರೀಶ್ ರಾವ್, ಸತ್ಯವ್ರತ ಹೀಗೆ ವಿವಿಧ ಅಂಕಿತ ನಾಮಗಳ ಮೂಲಕ ಓದುಗರ ಮನ ಗೆದ್ದವರು ಜೋಗಿ. 1965ರ ನವೆಂಬರ್ 16ರಂದು ಸೂರತ್ಕಲ್ ಸಮೀಪದ ಹೊಸಬೆಟ್ಟು ಗ್ರಾಮದಲ್ಲಿ ಜನಿಸಿದ ಜೋಗಿ ವೃತ್ತಿಯಲ್ಲಿ ಪತ್ರಕರ್ತರು. ಖ್ಯಾತ ವಾರ    Read More...

Opinion of Others

There are no others opinion yet.

Customer Reviews

1 review for ಭಗ್ನಪ್ರೇಮಿಯ ಅಪೂರ್ಣ ಡೈರಿ

  1. Prabhatmaja (verified owner)

    ಕಾರಣಗಳು ಇಲ್ಲದೇ ಹುಟ್ಟುವುದಂತೆ ಪ್ರೀತಿ.ಹಾಗೆಯೇ ಕಾರಣಗಳೇ ಇಲ್ಲದೇ ಒಡೆದು ಹೋಗುವುದಂತೆ ಪ್ರೀತಿ.ಋಣತ್ಮಕವನ್ನೂ ಧನಾತ್ಮಕ ಮಾಡುವುದೇ ಪ್ರೀತಿ. ಅನಿಶ್ಚಿತ ಬದುಕಿಗೆ ಟಾನಿಕ್ ರೂಪದಲ್ಲಿ ಉತ್ಸುಕತೆಯನ್ನು ನೀಡುವುದು ಪ್ರೇಮ. ಇಂತಹ ಪ್ರೇಮ ಸಾಗರದಲ್ಲಿ ಈಜಿ ದಡ ಸೇರಿದವರಿಗಿಂತ ಮುಳುಗಿ ಸತ್ತವರೇ ಹೆಚ್ಚು. ಅಂತಹ ಭಗ್ನಗೊಂಡ ಹೃದಯದ ಚಿಕ್ಕ ಕಥೆ (ಕಾದಂಬರಿ?) ಯ ಹೂರಣವೇ ಜೋಗಿಯವರ ಭಗ್ನ ಪ್ರೇಮಿಯ ಅಪೂರ್ಣ ಡೈರಿ.

Add a review

Your email address will not be published. Required fields are marked *

Related Products