ಅಲೆಮಾರಿಯ ಡೈರಿ
Original price was: ₹ 200.₹ 178Current price is: ₹ 178.
Book Details
Weight | .3 kg |
---|---|
Author | Santoshkumar Mehendale |
Page Nos | 180 |
ISBN | 9788195523948 |
Publications | Vikram |
SYNOPSIS
ಮುಂಚೂಣಿಯಲ್ಲಿರುವ ಕನ್ನಡದ ಬರಹಗಾರರಲ್ಲಿ ಒಬ್ಬರಾದ ಸಂತೋಷ ಕುಮಾರ್ ಮೆಹಂದಳೆ ತಿಂಗಳಿಗೊಂದರಂತೆ ಹೊಸ ಹೊಸ ಪುಸ್ತಕಗಳನ್ನು ಪ್ರಕಟಿಸಿ ತಾವೊಬ್ಬ ಲೇಖಕರೋ ಇಲ್ಲ ಬರವಣಿಗೆಯ ಮಷಿನೋ ಎನ್ನುವ ಸಂದೇಹ ಮೂಡಿಸುತ್ತ ಬರುತ್ತಿದ್ದಾರೆ. ವಿಶ್ವವಾಣಿ ಪತ್ರಿಕೆಯಲ್ಲಿ ಬರುತ್ತಿರುವ ಇವರ ಅಂಕಣ “ಅಲೆಮಾರಿಯ ಡೈರಿ” ಯನ್ನು ನಾನು ಬಹಳ ದಿನಗಳಿಂದ ಓದುತ್ತಿರುವೆ. ಒಂದಕ್ಕಿಂತಾ ಒಂದು ಲೇಖನ ಅದ್ಭುತವಾಗಿರುತ್ತದೆ. ಬಹುತೇಕ ಪ್ರವಾಸಿಗರು ಹೋಗಲು ಅಂಜುವ, ಸುಲಭವಾಗಿ ಹೋಗಿಬರಲು ಸಾಧ್ಯ ವಾಗದಂತಹ, ಜಾಗಗಳನ್ನೇ ಸಂತೋಷ್ ಕುಮಾರ್ ಆಯ್ಕೆ ಮಾಡಿಕೊಂಡು ಅವುಗಳ ವಿಶೇಷತೆಯನ್ನು ತಮ್ಮ ವಿಶಿಷ್ಟ ಶೈಲಿಯಲ್ಲಿ ವಿವರಿಸುವ ಕಾರಣ ಇವು ನಮಗೆ ಆಪ್ತವಾಗುತ್ತವೆ. ೪೬ ಜಾಗಗಳನ್ನು ಪರಿಚಯಿಸುವ ಪ್ರವಾಸ ಗುಚ್ಛದಲ್ಲಿ ದೇಶದ ಈಶಾನ್ಯ ಹಾಗು ಉತ್ತರ ಗಡಿ ಭಾಗದಲ್ಲಿರುವ ವಿಶಿಷ್ಟ ಜಾಗಗಳ ಸುಂದರ ವಿವರಣೆಯಿದೆ. ಓದುತ್ತ ಹೋದಂತೆ ಮೈ ಜುಮ್ ಮೈ ಎನ್ನುತ್ತದೆ. ನಾವೇ ಹೋದಂತೆ ಭಾಸವಾಗುತ್ತದೆ. ಲೇಖಕರು ನಮ್ಮ ದೇಶದ ಜನಜೀವನದ ವೈವಿಧ್ಯತೆಗಳನ್ನು ಸುಂದರವಾಗಿ ಅನಾವರಣ ಗೊಳಿಸಿ ದೇಶದ ಬಗ್ಗೆ ಹೆಮ್ಮೆ ತರಿಸುತ್ತಾರೆ. ಎಲ್ಲರೂ ಈ ಕೃತಿಯನ್ನು ಓದುವುದಲ್ಲದೆ ತಮ್ಮ ಮಕ್ಕಳಿಗೂ ಓದಿಸಬೇಕು.
ABOUT AUTHOR
Opinion of Others
There are no others opinion yet.
Reviews
There are no reviews yet.