ಸಂತೋಷಕುಮಾರ ಮೆಹೆಂದಳೆ

ಕನ್ನಡದ ಕಾದಂಬರಿಕಾರ, ಅಂಕಣಗಾರ, ಕಥೆಗಾರ ಸಂತೋಷ್ ಕುಮಾರ ಮೆಹೆಂದಳೆ. ಸಣ್ಣ ಕಥೆಗಳು, ಕಾದಂಬರಿಗಳು, ಸಾಮಾಜಿಕ ಮತ್ತು ವೈಜ್ಞಾನಿಕ ಲೇಖನಗಳು, ಪರಿಸರ ಸಂಬಂಧಿ ಚಿತ್ರ ಲೇಖನಗಳು, ಅಂಕಣ ಬರಹಗಳು, ಪತ್ತೆದಾರಿ ಮತ್ತು ವೈಜ್ಞಾನಿಕ ಕಥಾ ಸಾಹಿತ್ಯ, ಪ್ರವಾಸಿ ಕಥನಗಳು, ಸೈನ್ಸ್ ಫಿಕ್ಷನ್, ಛಾಯಾಗ್ರಹಣ ಹೀಗೆ ಎಲ್ಲ‌ ಸಾಹಿತ್ಯದ ಪ್ರಕಾರದಲ್ಲೂ ಬರೆಯುತ್ತಿದ್ದಾರೆ. “ತರಂಗ, ಕರ್ಮವೀರ ಸುಧಾ ಪ್ರಜಾವಾಣಿ, ವಿಜಯವಾಣಿ, ಸಂಯುಕ್ತ ಕರ್ನಾಟಕ, ಉದಯವಾಣಿ, ವಿಜಯ ಕರ್ನಾಟಕ, ಓ ಮನಸೇ, ತುಷಾರ, ಮಯೂರ, ಕನ್ನಡ ಪ್ರಭ, ಕಸ್ತೂರಿ, ಉತ್ಥಾನ ಮತ್ತು ಪ್ರತಿ ವರ್ಷದ ಎಲ್ಲಾ ಪತ್ರಿಕೆಗಳ ವಿಶೇಷಾಂಕಗಳಿಗೆ ಬರೆಯುವುದರ ಜೊತೆಗೆ ಅಕಾಡೆಮಿ ಹಾಗು ಸಾಹಿತ್ಯ ಪರಿಷತ್ತು ಪ್ರಕಟಿಸುವ ಸಂಪಾದನಾ ಕೃತಿಗಳಲ್ಲಿ ಲೇಖನ ಮತ್ತು ವೈಜ್ಞಾನಿಕ ಕಥೆಗಳು, ಕಥೆಗಳು ಪ್ರಕಟವಾಗಿವೆ. ಕಥಾಯಾನ – ರಾಜ್ಯ ಮಟ್ಟದ ಸಾಹಿತ್ಯ ಕಾರ್ಯಾಗಾರ ನಿರ್ವಹಿಸಿದ್ದು ಆರು ರಾಜ್ಯ ಮಟ್ಟದ ಕಾರ್ಯಕ್ರಮ ನಿರ್ದೇಶಕರಾಗಿ ಸಂಘಟಿಸಿದ್ದಾರೆ. ಕೆಲವು ಸಾಹಿತ್ಯ ಕಮ್ಮಟಗಳಿಗೆ ಸಂಪನ್ಮೂಲ‌ ವ್ಯಕ್ತಿಯಾಗಿ ಸೇವೆ. ಮೂಲತ: ಉತ್ತರ ಕನ್ನಡ ಜಿಲ್ಲೆಯ ತೇರಗಾಂವ್ ಗ್ರಾಮ. ಪ್ರಸ್ತುತ ಕೈಗಾ ಅಣುವಿದ್ಯುತ್ ಸ್ಥಾವರ. ಉ.ಕ. ಜಿಲ್ಲೆಯಲ್ಲಿ ಕೇಂದ್ರ ಸರಕಾರಿ ನೌಕರರಾಗಿ ಸೇವೆ ಸಲ್ಲಿಸುತ್ತಿದ್ದಾರೆ.