ಡಾ. ಡಿ.ಎಸ್. ಶ್ರೀನಿವಾಸ ಪ್ರಸಾದ್

ಡಾ. ಡಿ.ಎಸ್. ಶ್ರೀನಿವಾಸ ಪ್ರಸಾದ್ ಹುಟ್ಟಿದ್ದು ಬೆಂಗಳೂರಿನಲ್ಲಿ. ೧೯೭೭ರಲ್ಲಿ ಜನಿಸಿದ ಇವರ ತಾಯಿ ದಿ. ಇಂದುಮತಿ ಸಂಗೀತ ಕಲಿತಿದ್ದು ಚೆನ್ನಾಗಿ ಹಾಡುತ್ತಿದ್ದರು. ತಂದೆ ಶ್ರೀಧರರಾವ್, ಅಕ್ಕ ಡಿ.ಎಸ್. ಸುಧಾರಾಣಿ. ಬಾಲ್ಯದಿಂದಲೇ ಬರೆವಣಿಗೆಯಲ್ಲಿ ತೊಡಗಿಕೊಂಡಿದ್ದ ಶ್ರೀನಿವಾಸ ಪ್ರಸಾದ್ ಅವರು ೧೦ನೇ ವಯಸ್ಸಿನಲ್ಲೇ ಬೆಂಗಳೂರು ಆಕಾಶವಾಣಿಯಲ್ಲಿ ಬಾಲಕಲಾವಿದನಾಗಿ `ಒಗ್ಗಟ್ಟಿನಲ್ಲಿ ಬಲವಿದೆ’, `ಸಮುದ್ರದಲ್ಲಿ ಆಹಾರ…’ ಸೇರಿದಂತೆ ೧೦ ನಾಟಕಗಳಲ್ಲಿ ಅಭಿನಯಿಸಿದ್ದರು. ೧೦ನೇ ವಯಸ್ಸಿಗೇ ಇವರು `ಜಮೀನ್ದಾರನ ಮಗನ ಪಾಂಡಿತ್ಯ’ ಎಂಬ ಕಥೆಯನ್ನು ಬರೆದಿದ್ದರು. ನಂತರ ಆಚಾರ್ಯ ಪಾಠಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿ ಅಲ್ಲಿ ಪದವಿಯನ್ನು ವ್ಯಾಸಂಗ ಮಾಡುವಾಗ ಆಶುಭಾಷಣ, ಪ್ರಬಂಧ, ಚರ್ಚಾಸ್ಪರ್ಧೆಗಳಲ್ಲಿ ಭಾಗವಹಿಸಿ ೩ ವರ್ಷದಲ್ಲಿ ಸುಮಾರು ೧೫೫ ಅಂತರಕಾಲೇಜು ಬಹುಮಾನಗಳನ್ನು ಪಡೆದು ಕಾಲೇಜಿನಿಂದ ಸತತ ೩ ವರ್ಷ ಪ್ರತಿಭಾವಂತ ವಿದ್ಯಾರ್ಥಿ ಪ್ರಶಸ್ತಿಗೆ ಭಾಜನರಾದರು. ಶೇಷಾದ್ರಿಪುರಂ ಕನ್ನಡ ಸ್ನಾತಕೋತ್ತರ ಕೇಂದ್ರದಲ್ಲಿ ಕನ್ನಡ ಎಂ.ಎ./ಪದವಿಯನ್ನು ವ್ಯಾಸಂಗ ಮಾಡುವಾಗ ಇವರು ಮಂಡಿಸಿದ `ಬೇಂದ್ರೆ ಕಾವ್ಯದ ನೆಲೆ ಬೆಲೆ ಅತ್ಯುತ್ತಮ ಪ್ರಬಂಧವೆAದು ಸಂಚಯ ಪತ್ರಿಕೆಯಲ್ಲಿ ಪ್ರಕಟವಾಯಿತು.’ ನಾಡಿನ ವಿವಿಧ ಪತ್ರಿಕೆಗಳಲ್ಲಿ ಕಲೆ, ಸಂಸ್ಕöÈತಿ, ವಿಜ್ಞಾನ ಸಾಮಾಜಿಕ, ಚಿತ್ರರಂಗ… ಇವುಗಳ ಕುರಿತು ೩೩ ವರ್ಷದಿಂದ ಒಟ್ಟು ೧೦೦೦ಕ್ಕೂ ಅಧಿಕ ಲೇಖನಗಳನ್ನು ಬರೆದಿದ್ದು ಇಂಗ್ಲಿಷ್‌ನಲ್ಲೂ ೨೫೦ ಲೇಖನಗಳನ್ನು ಬರೆದಿದ್ದಾರೆ. ಕರೆಂಟಾಯಣ ಎಂಬ ಇವರ ಹಾಸ್ಯ ಬರೆಹಕ್ಕೆ ಬೀಛಿhi ವಿದ್ಯಾಕೇಂದ್ರದ ಪ್ರಶಸ್ತಿ ಅಲ್ಲದೆ, ಪ್ರತಿಭಾಶ್ರೀ, ಕಲಾಶ್ರೀ ಪ್ರಶಸ್ತಿಗಳೂ ದೊರೆತಿವೆ. ದೂರದರ್ಶನ ಚಂದನ ವಾಹಿನಿಯ ಜನಪ್ರಿಯ ಕಾರ್ಯಕ್ರಮ ಥಟ್ ಅಂತ ಹೇಳಿಯಲ್ಲಿ ಭಾಗವಹಿಸಿ ೧೩೦ ಅಂಕಗಳೊAದಿಗೆ ಪ್ರಥಮಸ್ಥಾನ ವಿಶೇಷ ಸಿ.ಡಿ. ಬಹುಮಾನ ಪಡೆದಿರುತ್ತಾರೆ. ಇವರ ಬಗ್ಗೆ ಪ್ರಶಸ್ತಿಗಳ ಸರದಾರ, ಬಹುಶ್ರುತ ಶ್ರೀನಿವಾಸ… ಎಂಬ ಲೇಖನಗಳು ಪ್ರಕಟವಾಗಿವೆ. ಈವರೆಗೆ ೪೫೨ ಉಪನ್ಯಾಸಗಳನ್ನು ನೀಡಿದ್ದಾರೆ.