ಅನಂತ ಹುದೆಂಗಜೆ

ಮಲೆನಾಡಿನ ಪಾದಗಳಲ್ಲಿರುವ ಕಾರ್ಕಳ ತಾಲೂಕು ಈದು ಗ್ರಾಮ ಹುಟ್ಟೂರು. ಕಲಿಕೆ-ವೃತ್ತಿ ಸಂಬಂಧ ಉಜಿರೆ, ಮಣಿಪಾಲ, ಬೆಂಗಳೂರು, ಬೆಳಗಾವಿ, ಹುಬ್ಬಳ್ಳಿಯ ನಂಟು. ಪ್ರಸ್ತುತ ತಾಯಿ, ಪತ್ನಿ, ಪುತ್ರಿಯೊಂದಿಗೆ ವಾಸ್ತವ್ಯವೂ ಈ ನಾಡಿನ ವಾಣಿಜ್ಯ ನಗರಿಯಲ್ಲೇ. ವಿದ್ಯಾರ್ಥಿಯಾಗಿದ್ದಾಗಲೇ ಅಂಕಣ, ದೈನಿಕ ಧಾರಾವಾಹಿ ಬರೆದ ಹಿರಿಮೆ. ೪ನೇ ರ‍್ಯಾಂಕ್ ಸಹಿತ ಪತ್ರಿಕೋದ್ಯಮ ಪದವಿ. ೨೨ ವರ್ಷ ಕನ್ನಡ ಜನಾಂತರಂಗ , ಮಂಜುವಾಣಿ, ಕನ್ನಡಪ್ರಭ ಹಾಗೂ ಉದಯವಾಣಿಯಲ್ಲಿ ಪತ್ರಕರ್ತನಾಗಿ ಕೆಲಸ. ಎರಡು ವರ್ಷಗಳಿಂದ ಪೂರ್ಣಕಾಲಿಕ ಅನುವಾದಕ. ಎರಡು ಕೆಲವು ಸ್ವಂತ ಕೃತಿಗಳು (ಇದುವೇ ನಮ್ಮ ಸಂಸ್ಕೃತಿ, ಭಾರತ ಇಸ್ಲಾಂ ಮತ್ತು ಗಾಂಧಿ), ೧೫ಕ್ಕೂ ಹೆಚ್ಚು ಸಂಪಾದಿತ ಕೃತಿಗಳೂ (ಮೊಗ್ಗು ಅರಳುವ ಹೊತ್ತು, ಎಲ್ಲ ಅವನ ಹೆಸರಿನಲ್ಲೇ, ಮಹಾನಡಾವಳಿ, ಮಾತೃಶ್ರೀ ರತ್ನಮ್ಮ, ವಿಂಶತಿ ಸಂಭ್ರಮ ಇತ್ಯಾದಿ) ಇವೆ. `ಮೂಕಂ ಕರೋತಿ ವಾಚಾಳಿ’ಯಂತಹ ಸ್ವಭಾವ. ಓದು, ಪ್ರವಾಸ, ಛಾಯಾಗ್ರಾಹಣ, ಸಂಗೀತ-ಸಿನೆಮಾ, ಕ್ರೀಡೆ ನೆಚ್ಚಿನ ಹವ್ಯಾಸಗಳು.