• ಯಾವುದೇ ಕನ್ನಡ ಪುಸ್ತಕಕ್ಕಾಗಿ ಸಂಪರ್ಕಿಸಿ    
  • Call Us : +91 7022122121 / +91 8861212172
  • Free shipping above ₹499    
  • ಯಾವುದೇ ಕನ್ನಡ ಪುಸ್ತಕಕ್ಕಾಗಿ ಸಂಪರ್ಕಿಸಿ
  • Call Us: +91 7022122121 / +91 8861212172
  • Free shipping above ₹499
back

Publishers

Categories

Authors

Languages

Book Type

Clear All
Filter
ಜೈನ ಧರ್ಮ 63 ಒಳನೋಟಗಳು | Jaina Dharma 63 Olanotagalu

ಅಹಿಂಸೆ, ಅಪರಿಗ್ರಹ ಮತ್ತು ಅನೇಕಾಂತವಾದದಂಥ ಅನನ್ಯ ಬೋಧನೆಗಳ ಮೂಲಕ ಇಡೀ ಜಗತ್ತಿಗೆ ಶಾಂತಿಯ ದಾರಿ ತೋರಿಸಿದ ಜೈನ ಧರ್ಮವು ಭಾರತದ ಪುರಾತನ ಧರ್ಮಗಳಲ್ಲಿ ಒಂದು. ಭಾರತದ ಇತರ ಮತ್ತು ಪಾಶ್ಚಾತ್ಯ ಧರ್ಮಗಳ ತುಲನೆಯಲ್ಲಿ ಜೈನ ಧರ್ಮದ ಉನ್ನತ ಸ್ಥಾನಮಾನ ಗುರುತಿಸುವ ಈ ಪುಸ್ತಕ ಕನ್ನಡದ ಓದುಗರಿಗೆ ಒಂದು ಅಪೂರ್ವ ಕೊಡುಗೆ. ಜೈನ ಧರ್ಮದಲ್ಲಿ ೬೩ ಜನ ಶಲಾಕಾ ಪುರುಷರಿದ್ದಾರೆ. ಅದಕ್ಕಾಗಿಯೇ ಈ ಕೃತಿ ೬೩ ಅಧ್ಯಾಯಗಳಲ್ಲಿ ವಿಸ್ತರಿಸಿದೆ. ಜೈನ ಧರ್ಮದಲ್ಲಿ ಮತ್ತು ಧರ್ಮಗಳಲ್ಲಿ ಆಸಕ್ತಿ ಇರುವ ಯಾರೇ ಆದರೂ ಈ ಕೃತಿಯನ್ನು ಓದಬೇಕು. ದೇವದತ್ತ ಪಟ್ಟನಾಯಕರ ಈ ಅದ್ಭುತ ಕೃತಿಯನ್ನು ಪದ್ಮರಾಜ ದಂಡಾವತಿಯವರು ಅಷ್ಟೇ ಅನುಪಮವಾಗಿ ಕನ್ನಡಕ್ಕೆ ತರ್ಜುಮೆ ಮಾಡಿದ್ದಾರೆ

₹375   ₹334

Buy Now
ದೇಶ ವಿಭಜನೆಯ ಪಾಪ ಹೊತ್ತವರು | Desha Vibhajaneya Papa Hottavaru

ದೇಶ ವಿಭಜನೆಯನ್ನು ಕುರಿತು ಈಗಾಗಲೇ ಲೆಕ್ಕವಿಲ್ಲದಷ್ಟು ಪುಸ್ತಕಗಳು ಬಂದಿವೆ. ಹಾಗೆ ನೋಡಿದರೆ ಇದೊಂದು ಮುಗಿಯದ ಸರಕು.ಕಾಲದಿಂದ ಕಾಲಕ್ಕೆ ಈ ದುರಂತವು ಬೇರೆ ಬೇರೆ ಮಾಹಿತಿ, ಅಂಕಿ-ಅಂಶ,ಸಂಶೋಧನೆ, ಚರಿತ್ರೆಯ ಅಧ್ಯಯನಗಳೊಂದಿಗೆ ಹೊಸ ಹೊಸ ಕೃತಿಗಳನ್ನು ಸೃಷ್ಟಿಸುತ್ತಿದೆ. ಅಂದಂತೆ,ಭಾರತದಲ್ಲಿ ಸಮಾಜವಾದದ ಯುಗದಲ್ಲಿ ಒಬ್ಬರಾದ ರಾಮ ಮನೋಹರ ಲೋಹಿಯಾ ಅವರು, ಅಖಂಡ ಭಾರತದ ಇಬ್ಭಾಗಕ್ಕೆ ನೇರ ಸಾಕ್ಷಿಯಾಗಿದ್ದವರು. ನೇರ ನಡೆ-ನುಡಿಗಳಿಗೆ ಮತ್ತು ನಿಲುವುಗಳಿಗೆ ಹೆಸರಾಗಿದ್ದ ಅವರು, ಭಾರತದ ಚಿಂತಕರ ವರ್ತುಲ ಮತ್ತು ಸಾರ್ವಜನಿಕ ಬದುಕಿನ ಮೇಲೆ ಬೀರಿರುವ ಪ್ರಭಾವ ಅಗಾಧವಾದುದು.ಅದರಲ್ಲೂ ಲೋಹಿಯಾ ಅವರು ದೇಶ ವಿಭಜನೆಗೆ ಕಾರಣರಾದವರು ಯಾರೆಂದು ಬಗೆದು ನೋಡಿ ಬರೆದಿರುವ The Guilty Men of India's Partition ಅತ್ಯಂತ ಮಹತ್ವದ ಕೃತಿಯಾಗಿದೆ.ಇದನ್ನು ಹೆಸರಾಂತ ಲೇಖಕ ಡಾ.ಟಿ ಎನ್ ವಾಸುದೇವಮೂರ್ತಿ ಅವರು "ದೇಶ ವಿಭಜನೆಯ ಪಾಪ ಹೊತ್ತವರು" ಎನ್ನುವ ಹೆಸರಿನಲ್ಲಿ ಕನ್ನಡಕ್ಕೆ ಅನುವಾದಿಸಿ ಕೊಟ್ಟಿದ್ದಾರೆ. ಇದಕ್ಕಾಗಿ ನಾವು ಅವರಿಗೆ ಆಭಾರಿಗಳಾಗಿದ್ದೇವೆ ದೊಡ್ಡದೊಡ್ಡ ಪದಗಳ ಬಾರವಿಲ್ಲದೆ ಸಹಜವಾದ ತಿಳಿಗನ್ನಡದಲ್ಲಿ ಮೂಡಿಬಂದಿರುವ ಈ ಭಾಷಾಂತರವು ಕನ್ನಡ ವಾಙ್ಮಯಕೊಂದು ಬೆಲೆಯುಳ್ಳ ಸೇರ್ಪಡೆಯಾಗಿದೆ

₹175   ₹156

Buy Now
ರಾಮಾಯಣ vs ಮಹಾಭಾರತ | Ramayana Versus Mahabharata

ಭಾರತದ ಮಾತ್ರವಲ್ಲ ಜಗತ್ತಿನ ಎರಡು ಶ್ರೇಷ್ಠ ಮಹಾಕಾವ್ಯಗಳು ಎಂದರೆ ಅವು ʻರಾಮಾಯಣʼ ಮತ್ತು ʻಮಹಾಭಾರತʼ. ಈ ಎರಡೂ ಕಾವ್ಯಗಳನ್ನು ಮುಖಾಮುಖಿಯಾಗಿಸಿ ಅವುಗಳಲ್ಲಿನ ಸಮಾನ ಅಂಶಗಳನ್ನು ಕುರಿತು ಬರೆದ ಏಕೈಕ ಕೃತಿ ಇದು. ಆಸೆಯ ಕೇಡನ್ನು ಶೋಧಿಸುವ ʻರಾಮಾಯಣʼ ಮತ್ತು ಸೇಡಿನ ಅಥವಾ ದ್ವೇಷದ ಕೇಡನ್ನು ತೆರೆದು ಇಡುವ ʻಮಹಾಭಾರತʼ ಕೃತಿಗಳನ್ನು ದೇವದತ್ತ ಪಟ್ಟನಾಯಕರು ಅರ್ಥೈಸಿದ ರೀತಿ ಗಹನವಾಗಿದೆ, ಅನ್ಯಾದೃಶವಾಗಿದೆ. ಈ ಮಹತ್ವದ ಕೃತಿಯನ್ನು ಪದ್ಮರಾಜ ದಂಡಾವತಿಯವರು ಅಷ್ಟೇ ತನ್ಮಯತೆಯಿಂದ ಕನ್ನಡಕ್ಕೆ ತಂದಿದ್ದಾರೆ.

₹325   ₹289

Buy Now