• ಯಾವುದೇ ಕನ್ನಡ ಪುಸ್ತಕಕ್ಕಾಗಿ ಸಂಪರ್ಕಿಸಿ    
  • Call Us : +91 7022122121 / +91 8861212172
  • Free shipping above ₹499    
back

Publishers

Categories

Authors

Languages

Book Type

Clear All
Filter
ಬಿಸಿನೆಸ್ 360 | Business 360

ಸುರೇಶ್ ಪದ್ಮನಾಭನ್

₹200   ₹178

ಲಕ್ಷಾಧಿಪತಿಯ ಗುಣಲಕ್ಷಣಗಳು | Lakshadhipatiya Gunalakshanagalu

ಅಸಾಮಾನ್ಯರು ಎನ್ನಿಸಿಕೊಳ್ಳುವುದಕ್ಕೆ ಮುಂಚೆ ಎಲ್ಲರೂ ಸಾಮಾನ್ಯರೆ! ಹೌದಲ್ವಾ? ನೀವೇ ಯೋಚಿಸಿ ನೋಡಿ, ಅವರಿಗೂ ಅಡೆತಡೆಗಳು ಎಲ್ಲರಿಗೂ ಬಂದಂತೆ ಬಂದಿರುತ್ತವೆ. ಅವರು ಅಡೆತಡೆಗಳ ಬಗ್ಗೆ ಗೊಣಗುತ್ತ ಕೂರುವ ಬದಲು ಅದನ್ನು ಸವಾಲಾಗಿ ಸ್ವೀಕರಿಸಿ ಮುನ್ನಡೆದಿರುತ್ತಾರೆ. ಈ ಧೀಮಂತ ಗುಣವೇ ಅವರನ್ನು ಗುಂಪಿನಿಂದ ಬೇರ್ಪಡಿಸುತ್ತದೆ. ವಿಶೇಷರನ್ನಾಗಿಸುತ್ತದೆ. ಲಕ್ಷಾಧಿಪತಿಯ ಗುಣಲಕ್ಷಣಗಳನ್ನು ನಾವು ಅಳವಡಿಸಿಕೊಳ್ಳಬಹುದೇ? ಅಥವಾ ಅವು ಅನುವಂಶಿಕವಾಗಿ ಬರುವಂತಹ ಗುಣಗಳೆ? ಎನ್ನುವ ಪ್ರಶ್ನೆ ಸಹಜವಾಗಿ ಉದ್ಭವವಾಗುತ್ತದೆ. ಕೆಲವೊಂದು ಹುಟ್ಟಿನಿಂದ ಬಂದಿರುತ್ತದೆ ಎನ್ನುವುದು ನಿಜವಾದರೂ, ಬಹುತೇಕ ಗುಣಗಳನ್ನು ಕಲಿಕೆಯಿಂದ, ಸ್ವ-ಪ್ರಯತ್ನದಿಂದ ಅಳವಡಿಸಿಕೊಳ್ಳಬಹುದು. ಜಗತ್ತಿನ ಮುಕ್ಕಾಲು ಪಾಲು ಶೀಮಂತರು ಸೆಲ್ಫ್ ಮೇಡ್‌. ಅವರಿಗೂ ಯಾವ ಗಾಡ್‌ಫಾದರ್‌ ಇರಲಿಲ್ಲ ಎನ್ನುವುದು ಗೊತ್ತಿರಲಿ. ನಿಮಗೆಲ್ಲಾ ಒಂದು ಅಚ್ಚರಿಯ ವಿಷಯವನ್ನು ಹೇಳುವೆ. ಅಚಾನಕ್ಕಾಗಿ ಅಂದರೆ ಲಾಟರಿ ಮೂಲಕ ಹಣ ಗಳಿಸಿದವರಲ್ಲಿ 70ಕ್ಕೂ ಹೆಚ್ಚು ಪ್ರತಿಶತ ಜನ ಒಂದೆರಡು ವರ್ಷಗಳಲ್ಲಿ ದಿವಾಳಿ ಎದ್ದು ಹೋಗುತ್ತಾರೆ ಎನ್ನುತ್ತದೆ ಸಂಶೋಧನೆ. ಅಮೆರಿಕನ್‌ ಬಾಂಕ್ರಾಫ್ಟ್ಸಿ ಇನ್ಸ್ಟಿಟ್ಯೂಟ್‌ ನಡೆಸಿದ ಸಂಶೋಧನೆಯಲ್ಲಿ ಲಾಟರಿ ಗೆದ್ದವರಲ್ಲಿ ಮೆಜಾರಿಟಿ 2ರಿಂದ 5 ವರ್ಷಗಳಲ್ಲಿ ದಿವಾಳಿ ಘೋಷಿಸಿಕೊಳ್ಳುತ್ತಾರೆ ಎನ್ನುವುದು ತಿಳಿದು ಬಂದಿದೆ. ಇದರರ್ಥ ಸುಲಭವಾಗಿ ಬಂದದ್ದು ಸುಲಭವಾಗಿ ಹೋಗುತ್ತದೆ. ನಮಗ್ಯಾವುದೂ ಪುಕ್ಕಟೆ ಬೇಡ. ಸುಲಭವಾಗುವುದೂ ಬೇಡ. ಕ್ಷಮತೆ ಹೆಚ್ಚಿಸಿಕೊಳ್ಳೋಣ, ಇಲ್ಲಿನ ಗುಣಗಳನ್ನು ಅಳವಡಿಸಿಕೊಳ್ಳೋಣ. ಅವು ನಿಜಕ್ಕೂ ನಮ್ಮೊಂದಿಗೆ ಕೊನೆಯವರೆಗೂ ಬರುತ್ತವೆ.

₹225   ₹200

ವಾರೆನ್ ಬಫೆಟ್: ಹೂಡಿಕೆ ಮಾಂತ್ರಿಕನ ತಂತ್ರಗಳು | WARREN BUFFETT: Hoodike Maantrikana Tantragalu

ವಾರೆನ್ ಬಫೆಟ್ ವಿಶ್ವದ ಅತ್ಯಂತ ಶ್ರೀಮಂತ ಹೂಡಿಕೆದಾರರಲ್ಲಿ ಒಬ್ಬರು. ಲಕ್ಷಾಂತರ ಸ್ವತಂತ್ರ ಹೂಡಿಕೆದಾರರು ಅವರ ಪ್ರತಿಯೊಂದು ನಡೆಯನ್ನೂ ಅನುಸರಿಸುತ್ತಾರೆ. ಆದರೆ ಬಫೆಟ್ ಅವರೇ ಏಕೆ? ಹೂಡಿಕೆ ಮತ್ತು ಆರ್ಥಿಕ ಯಶಸ್ಸಿನ ಬಫೆಟ್‌ನ ಹಾದಿಯನ್ನು ಅನುಸರಿಸಲು ಹೂಡಿಕೆದಾರರು ಏನು ಮಾಡಬಹುದು? ಬಫೆಟ್ ಅವರು ಹೇಗೆ ಹೂಡಿಕೆ ಮಾಡುತ್ತಾರೆ? ಅವರ ಯಶಸ್ಸಿನ ತಂತ್ರಗಳೇನು? ವಾರೆನ್ ಬಫೆಟ್ ಅವರ ವಿಧಾನವು ಮೌಲ್ಯ ಹೂಡಿಕೆಯ ಮೇಲೆ ಕೇಂದ್ರೀಕರಿಸುತ್ತದೆ – ಕಡಿಮೆ ಬೆಲೆಯಲ್ಲಿ ಗುಣಮಟ್ಟದ ಷೇರುಗಳನ್ನು ಖರೀದಿಸುವುದು ಮತ್ತು ಅವುಗಳನ್ನು ದೀರ್ಘಕಾಲೀನವಾಗಿ ಹಿಡಿದಿಟ್ಟುಕೊಳ್ಳುವುದು. ಅವರು ಊಹಾಪೋಹಗಳಿಗಿಂತ ಸರಳತೆ, ತಾಳ್ಮೆ ಮತ್ತು ತಾರ್ಕಿಕ ಚಿಂತನೆಗೆ ಒತ್ತು ನೀಡುತ್ತಾರೆ. ಈ ಪುಸ್ತಕದಲ್ಲಿ ಅವರ ಹೂಡಿಕೆಯ ಮೂಲಭೂತ ಅಂಶಗಳನ್ನು ಸೇರಿಸಿ ನೀಡಲಾಗಿದೆ. ಹೊಸದಾಗಿ ಮಾರುಕಟ್ಟೆಯನ್ನು ಪ್ರವೇಶಿಸುತ್ತಿರುವವರಿಂದ ಹಿಡಿದು, ಅನುಭವಿ ಹೂಡಿಕೆದಾರರು ಈ ಪುಸ್ತಕದಲ್ಲಿನ ಅಂಶಗಳನ್ನು ಅಳವಡಿಸಿಕೊಂಡು ಲಾಭ ಗಳಿಸಬಹುದು. ಶುಭ ಲಾಭವಾಗಲಿ! - ಚಂದ್ರಶೇಖರ ಮದಭಾವಿ

₹200   ₹178

ವಿದುರ/vidura

#

₹250   ₹223

ಸಿಂದೂರ: ನಾ ಕಂಡ ಕಾಶ್ಮೀರ | SINDOORA: NAA KANDA KASHMIRA

ಯುದ್ಧ ಎನ್ನುವ ಪದ ಬಹಳ ಶಕ್ತಿಶಾಲಿ. ಅದೇ ಸಮಯದಲ್ಲಿ ಅದು ಭಯವನ್ನು ಸಹ ಹುಟ್ಟಿಸುತ್ತದೆ. ಪೂರ್ಣ ಪ್ರಮಾಣದ ಯುದ್ಧವನ್ನು ಇಂದು ಜಗತ್ತಿನ ಯಾವ ದೇಶವೂ ಭರಿಸುವ ಶಕ್ತಿಯನ್ನು ಹೊಂದಿಲ್ಲ. ಯುದ್ಧ ಅಭಿವೃದ್ಧಿಯ, ಸಿರಿವಂತಿಕೆಯ ಶತ್ರು. ಆದರೂ ಕೆಲವೊಮ್ಮೆ ಕೆಲವು ಸಂಘರ್ಷಗಳು ಅನಿವಾರ್ಯ. ಕೆಲವು ಬಾರಿ ಶಾಂತಿಯಿಂದ ಮತ್ತು ನೆಮ್ಮದಿಯಿಂದ ಬದುಕಲು ಇಂತಹ ಸಂಘರ್ಷಗಳ ಅವಶ್ಯಕತೆ ಇರುತ್ತದೆ. ಭಾರತ ಎಂದಿಗೂ ಕಾಲು ಕೆರೆದು ಜಗಳಕ್ಕೆ ಹೋದ ಉದಾಹರಣೆ ಇತಿಹಾಸದಲ್ಲಿ ಸಿಗುವುದಿಲ್ಲ. ಈ ಬಾರಿಯ ಇಂಡೋ ಪಾಕ್‌ ಯುದ್ಧಕ್ಕೂ, ಪಾಕಿಸ್ತಾನ ಕಾರಣ ಎನ್ನುವುದು ಸ್ಪಷ್ಟ. ನಾವು ಅವರ ಉದ್ಧಟತನಕ್ಕೆ ತಕ್ಕ ಉತ್ತರವನ್ನು ನೀಡಿದ್ದೇವೆ. ಇಂತಹ ಘಟನೆಯನ್ನು ಹದಿನೈದು ದಿನಗಳ ಕಾಲ ನೇರವಾಗಿ ನೋಡಿ, ಅನುಭವಿಸಿ ಅದನ್ನು ಅಕ್ಷರಕ್ಕೆ ಇಳಿಸಿದ್ದಾರೆ ಅಭಿಷೇಕ್‌. ಹದಿನೈದು ದಿನದ ಘಟನಾವಳಿಗಳ ಅನುಭವ ಕಥನ, ವರದಿಗಾರನ ಮೈನವಿರೇಳಿಸುವ ರೋಚಕ ಡೈರಿಯಿದು. ಇಲ್ಲಿನ ಬರಹ, ಭಾಷೆ ನೇರವಾಗಿ ಹೃದಯಕ್ಕೆ ನಾಟುತ್ತದೆ. ನಾವೇ ವಾರ್‌ ಫೀಲ್ಡ್ ನಲ್ಲಿದ್ದೇವೆ ಎನ್ನಿಸುತ್ತದೆ. - ರಂಗಸ್ವಾಮಿ ಮೂಕನಹಳ್ಳಿ ಲೇಖಕರು, ಆರ್ಥಿಕ ತಜ್ಞರು

₹180   ₹160

ಸಿನಿ ಮಾಯಾಲೋಕ | Cini mayalokha

ಸಂಧ್ಯಾರಾಣಿ ಎಸ್

₹200   ₹178

ಸಿರಿವಂತಿಕೆಗೆ ಸರಳ ಸೂತ್ರಗಳು | Sirivanthikege sarala suthragalu

ತುಮಕೂರು ಜಿಲ್ಲೆಯ ಸಿರಾದಲ್ಲಿ ೧೮.೦೫.೧೯೭೫ ರಂದು ಜನನ. ಪ್ರಾಥಮಿಕ ಶಿಕ್ಷಣ ಸಿರಾ ತಾಲೂಕಿನ ಹೊಸೂರು ಎನ್ನುವ ಗ್ರಾಮದಲ್ಲಿ ಆಗುತ್ತದೆ. ಮಾಧ್ಯಮಿಕ ಶಿಕ್ಷಣ ಬೆಂಗಳೂರಿನ ಪೀಣ್ಯದಲ್ಲಿನ ಸರಕಾರಿ ಶಾಲೆಯಲ್ಲಿ, ಹತ್ತನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿ ಕಲಿಕೆ. ನಂತರ ವಿವೇಕಾನಂದ ಕಾಲೇಜಿನಲ್ಲಿ ಕಾಮರ್ಸ್ ಭಾಗದಲ್ಲಿ ಓದಿ ಬೆಂಗಳೂರು ಯೂನಿವರ್ಸಿಟಿಯಿಂದ ಕಾಮರ್ಸ್ ಪದವಿ ಪಡೆಯುತ್ತಾರೆ. ೨೩ ನೆಯ ವಯಸ್ಸಿಗೆ ಕೆಲಸದ ಮೇಲೆ ದೇಶವನ್ನ ತೊರೆದು ದುಬೈ ಸೇರುತ್ತಾರೆ. Read More...

₹180   ₹160