ವಸ್ತ್ರವಿನ್ಯಾಸ, ರುಚಿಕಟ್ಟಾದ ಅಡುಗೆಯೂ ಸೇರಿದಂತೆ ದಶಾವತಾರಗಳಲ್ಲಿ ಮುಖ್ಯವಾಗಿ ಅಭಿನೇತ್ರಿಯಾಗಿರುವ ಅಕ್ಷತಾ, ಏನೇ ಮಾಡಿದರೂ ಅಲ್ಲಿ ತಮ್ಮ ಅಭಿವ್ಯಕ್ತಿಯನ್ನು ಸಂಪೂರ್ಣವಾಗಿ ದಾಖಲಿಸುತ್ತಾರೆ. ಇವರ ಬರಹಗಳು ಕೂಡ ಇದರದ್ದೇ ಒಂದು ವಿಸ್ತರಣೆ. ಹಿಂದೆ ಲೀಕ್ ಔಟ್ ಕತೆಗಳನ್ನು ಪ್ರಕಟಿಸಿ, ಅವನ್ನು ತಮ್ಮದೇ ವಿಶಿಷ್ಟ ಶೈಲಿಯಲ್ಲಿ ಜನ - ನಾಟಕವನ್ನಾಗಿಸಿ ಯಶಸ್ವಿಯಾಗಿದ್ದರು ಅಕ್ಷತಾ. ಏನೇ ಮಾಡಿದರೂ ಜನರನ್ನು ಒಳಗೊಳಿಸಿಕೊಂಡೇ ಮಾಡುವ ಇವರ ಅಡುಗೆ ಮಾತು ಪ್ರಯೋಗವೂ ಅಷ್ಟೇ ವಿಭಿನ್ನ. ಇವರ 'ರುಚಿಗೆ ತಕ್ಕಷ್ಟು' ಕತೆಗಳು ಮುಂದೆ ಇಂಥದೇನೋ ಟ್ವಿಸ್ಟ್ ಕೊಡುವ ಸುಳಿವಿನೊಂದಿಗೇ ಹೆಣೆದುಕೊಂಡಂತೆ ತೋರುತ್ತವೆ.
ವರದಾ ತೀರದ ಕಥೆಗಳನ್ನು ಓದುತ್ತಾ ಮನಸಾರೆ ನಕ್ಕಿದ್ದೇನೆ. ಅರಿವಿಲ್ಲದೇ ಕಣ್ಣಂಚಿನಲ್ಲಿ ಬಂದ ನೀರನ್ನು ಒರೆಸಿಕೊಂಡಿದ್ದೇನೆ. ಹೀಗಾಗಬಾರದಿತ್ತು ಎಂದು ನೊಂದುಕೊಂಡಿದ್ದೇನೆ. ಬರಹಗಾರನ ಕಥೆಯ ಭಾವಕ್ಕೆ ಓದುಗನ ಭಾವನೆಗಳು ಹೊಂದಿದ್ದೇ ಆದರೆ ಕಥಾಪ್ರಸವ ಅನುಭವಿಸಿದ ಕಥೆಗಾರನಿಗೂ ನೆಮ್ಮದಿಯ ನಿಟ್ಟುಸಿರು. ರವೀಂದ್ರ ಮುದ್ದಿಯವರ ಸಿನಿಮಾ, ಟಿವಿಗಳಲ್ಲಿ ಇನ್ನೂ ಬಳಕೆಯಾಗದ ಜವಾರಿ ಭಾಷೆಯ ಪದ ಪ್ರಯೋಗ ಮಾತ್ರ ಅದ್ಭುತ. ವರದಾ ತೀರದ ಕತೆಗಳನ್ನು ಓದುತ್ತಿದ್ದರೆ ನಮಗೆ ಗೊತ್ತಿಲ್ಲದಂತೆ ನಾವು ಆಡಿ ಬೆಳೆದ ನಮ್ಮೂರು ಚಿತ್ರಣ ಕಣ್ಮುಂದೆ ಮುಂದೆ ಬರುವುದು ಗ್ಯಾರಂಟಿ.
ತನಗೆ ತಾನು ಬಹುತೇಕ ಅನುಕೂಲ ಕಲ್ಪಿಸಿಕೊಳ್ಳಲಿಕ್ಕಾಗಿ ಲೋಕವು ತನ್ನದೇ ಕೆಲಪಾಲನ್ನು ಪ್ರತಿಕೂಲಕ್ಕೆಂದು ಮೀಸಲಿಡುತ್ತದೆ. ಇಲ್ಲಿರುವ ಕೆಲವೇ ಕೆಲಮಂದಿಯೂ ಹೀಗೇ.. ಬಹುತೇಕರಿಗೆ ಸ್ವರ್ಗ ದಕ್ಕಿಸಲೆಂದು ನರಕದಂತಹ ಕೋಟಲೆಯನ್ನೂ ಒಪ್ಪಿ ಅಪ್ಪಿಕೊಳ್ಳುತ್ತಾರೆ. -ಫೈರುಪೀಸ್ ಫೀಸ್ ಕತೆಯ ಮುಮ್ಮಾತು
Showing 31 to 33 of 33 results