nil
"ಬದುಕು ಗಣಿತದ ಸೂತ್ರಗಳ ಲೆಕ್ಕಾಚಾರದಂತೆ ಒಂದು ಅಂಕೆ ತಪ್ಪಿದರೆ ಇಡೀ ಸೂತ್ರವೇ ತಪ್ಪಿಹೋಗುತ್ತದೆ" ಎಂಬ ಕಾದಂಬರಿಯ ಕೇಂದ್ರ ಪಾತ್ರ ವಸಂತಿ ಹೇಳುವ ಮಾತು ಕಾದಂಬರಿಯ ಆಶಯವನ್ನು ಹೇಳುವಂತದ್ದು. ಬದುಕಿನ ಬವಣೆಗಳನ್ನು, ಕ್ಲಿಷ್ಟ ಸಮಸ್ಯೆಗಳನ್ನು ತಾಳ್ಮೆಯಿಂದ ಧೈರ್ಯದಿಂದ ಅಂತಃಕರಣದಿಂದ ಬಿಡಿಸುತ್ತಾ ಸಾಗಬೇಕೇ ಹೊರತು ಕೋಪತಾಪ ಆತುರದ ನಿರ್ಧಾರಗಳು ಬದುಕನ್ನು ಹಾಳುಗೆಡವುತ್ತವೆಂಬುದನ್ನು ಲೇಖಕಿ ಮಾಲತಿಯವರು ಈ ಕಾದಂಬರಿಯ ಮೂಲಕ ಚಂದದಲ್ಲಿ ಕಟ್ಟಿಕೊಡುತ್ತಾರೆ. ಯುವ ಮನಸ್ಸುಗಳು ಎದುರಿಸುವ ಅನೇಕ ಸಂಘರ್ಷಗಳಿಗೆ ಪ್ರೀತಿ ಬೆಂಬಲ ಪ್ರೋತ್ಸಾಹದ ಕೊರತೆ ಕಾರಣವಾಗಿರುವುದನ್ನು ಕುರಿತು ಹೇಳುವ ಲೇಖಕಿ, ಹಾಗೆಯೇ ಅತೀ ಕೊಂಡಾಟ ಕೂಡಾ ಅವರನ್ನು ದಿಕ್ಕುಗೆಡಿಸುತ್ತದೆ ಎಂಬ ಪ್ರಸ್ತುತ ಸಮಾಜದ ಜ್ವಲಂತ ಸಮಸ್ಯೆಯನ್ನು ಇಲ್ಲಿ ಕುತೂಹಲಕಾರಿಯಾಗಿ, ಆಪ್ತವಾಗಿ ಚಿತ್ರಿಸಿದ್ದಾರೆ. ತಲ್ಲಣಗಳನ್ನು ಎದುರಿಸುವ, ಅದರಿಂದ ಹೊರಬರುವ ಮಾರ್ಗಗಳನ್ನು ಕಥಾನಕ ಸರಳ, ಸುಂದರವಾಗಿ ಚಿತ್ರಿಸಿದರೂ, ಬದುಕೆಂಬುದು ಅಷ್ಟು ಸಲೀಸಲ್ಲ, ಅನೂಹ್ಯವಾದದ್ದು ಎಂಬ ಧ್ವನಿಯೂ ಅಂತರ್ಗತವಾಗಿದೆ. ಆಶಾದಾಯಕ, ಭರವಸೆಯ ದಿಕ್ಕಿನೆಡೆ ಕಥೆ ಮುಖಮಾಡಿರುವುದು ವಿಶೇಷವಾಗಿದೆ.
ಬದಲಾವಣೆ ಜಗದ ನಿಯಮ ಎಂದುಕೊಂಡರೂ ಕುಟುಂಬ ವ್ಯವಸ್ಥೆಯನ್ನು ಹಿಡಿದಿಡುವ ಭಾವನಾತ್ಮಕ ಸಂಬಂಧಗಳು ಇರದೆ ಹೋಗುವುದು ಇತ್ತೀಚಿನ ದುರಂತ ಕಾದಂಬರಿಯ ಶೀರ್ಷಿಕೆಯೇ ಹೇಳುವಂತೆ ಕೌಟುಂಬಿಕ ವ್ಯವಸ್ಥೆ ಮತ್ತು ಅದರೊಳಗಿರುವವರ ಭಾವನೆಗಳನ್ನೇ ಕೇಂದ್ರೀಕರಿಸಿ ಬರೆದಿರುವ ಕಾದಂಬರಿ 'ಭಾವನೆ' ಇಂತಹ ಸೂಕ್ತ ಎಳೆಗಳನ್ನೇ ಹೆಣೆದು ಕತೆಯಾಗಿಸುವುದರಲ್ಲಿ ಸಿರಿಮೂರ್ತಿಯವರು ನಿಪುಣರು. ದೇಶದ ಸಂಸ್ಕೃತಿಯು ಆಧುನಿಕತೆಯ ಹೆಸರಿನಲ್ಲಿ ಸವಕಲಾಗುತ್ತಿರುವುದು, ಹೊಸ ಪೀಳಿಗೆಯ ಸಾಗರದಾಚೆಗಿನ ಸೀಮೋಲ್ಲಂಘನ, ವಿದೇಶಿ ಸಂಸ್ಕೃತಿಯ ಪರಿಚಯ, ಭಾರತೀಯ ಸಂಸ್ಕೃತಿಯ ಪರಂಪರೆ, ಹಿರಿಮೆಯ ಪರಳ ವಿವರಣೆ, ಮನ ಮುಟ್ಟುವ ಪ್ರಸ್ತುತಿ ಕಾದಂಬರಿಯ ಭಾಗವಾಗುತ್ತಾ ಹೋಗುತ್ತದೆ. ಅಂತ್ಯದ ಬಗ್ಗೆ ಕುತೂಹಲ ಕಾಳಿಸಿಕೊಂಡೇ ಸಾಗುವ ಕತೆ ಎಲ್ಲವೂ ಕಾದಂಬರಿಯನ್ನು ಆಪ್ತವಾಗಿಸುತ್ತದೆ. ಎಲ್ಲರೂ ಓದಬೇಕಾದ ಕಾದಂಬರಿ. - ಗೀತಾ ಕುಂದಾಪುರ
Showing 481 to 510 of 760 results