• ಯಾವುದೇ ಕನ್ನಡ ಪುಸ್ತಕಕ್ಕಾಗಿ ಸಂಪರ್ಕಿಸಿ    
  • Call Us : +91 7022122121 / +91 8861212172
  • Free shipping above ₹499    
  • ಯಾವುದೇ ಕನ್ನಡ ಪುಸ್ತಕಕ್ಕಾಗಿ ಸಂಪರ್ಕಿಸಿ
  • Call Us: +91 7022122121 / +91 8861212172
  • Free shipping above ₹499
back

Publishers

Categories

Authors

Languages

Book Type

Clear All
Filter
ಆ ದಿನ | A dhina

nil

₹150   ₹134

ಆ ರಹಸ್ಯ ಕಾಪಾಲಿಕ ಮಠ|Aa Rahasya Kapalika Mata

ಅನೇಕರು ನನ್ನಲ್ಲಿ ಭೂತ-ಪ್ರೇತ, ಪಿಶಾಚಿಗಳನ್ನು ಒಲಿಸಿಕೊಳ್ಳುವುದು ಹೇಗೆ? ಎಂದು ಕೇಳುತ್ತಾರೆ. ತಂತ್ರ-ಮಂತ್ರ ಸಾಧನೆಯನ್ನು ಪಡೆಯುವುದು ಹೇಗೆ? ಎಂದು ತಿಳಿಯಬಯಸುತ್ತಾರೆ. ಇವೆಲ್ಲವೂ ಸರಳ ಮತ್ತು ಸುಲಭ ಎಂದು ಅವರು ತಿಳಿದಿದ್ದಾರೆ. ಅಂಥವರಿಗೆ ನಾನು ಏನೆಂದು ಉತ್ತರಿಸಲಿ?... ಈ ಎಲ್ಲ ಸಿದ್ದಿಗಳು ಮತ್ತು ಈ ಎಲ್ಲ ಸಾಧನೆಗಳು ಎಲ್ಲರಿಗೂ ಸಾಧ್ಯವಿಲ್ಲ ಎಂದು ನಾನು ಹೇಗೆ ಹೇಳಲಿ?... ಎಲ್ಲವನ್ನೂ ಅವರು ಮಾಡಲಾರರು, ಎಲ್ಲರಿಗೂ ಅದು ಪ್ರಾಪ್ತಿಯಾಗುವುದಿಲ್ಲ ಎಂದು ಅವರಿಗೆ ತಿಳಿಸುವುದಾದರೂ ಹೇಗೆ?...

₹175   ₹156

ಆ ವದನ (ಕಾದಂಬರಿ) | Aa Vadana

ಈ ಭೂಮಿಯ ಮೇಲೆ ‘ಕಾಮ’ ಯಾರನ್ನೂ ಬಿಟ್ಟಿಲ್ಲ. ಆದರೆ ಎಲ್ಲರೂ ಕಾಮಕ್ಕಾಗಿಯೇ ಬದುಕುವವರಲ್ಲ. ಪ್ರತಿಯೊಬ್ಬರ ಬದುಕಿನಲ್ಲೂ ಕವಲು ದಾರಿಗಳು ಇದ್ದೇ ಇರುತ್ತವೆ.

₹240   ₹204

ಆಕಸ್ಮಿಕ

nil

₹450   ₹401

ಆಕಾಶ ಇಷ್ಟೇ ಯಾಕಿದೆಯೋ | AKASHA ISHTE YAKIDEYO

ಕನ್ನಡದಲ್ಲಿ ಹಲವು ಮಹನೀಯರು ವೃತ್ತಿ ಜೀವನದ ನೆನಪುಗಳನ್ನು ಬರೆದಿದ್ದಾರೆ. ಅವುಗಳ ಪೈಕಿ ನನಗೆ ಥಟ್ಟನೆ ನೆನಪಾಗುವುದು ಎಂ.ಆರ್‌. ಶ್ರೀನಿವಾಸಮೂರ್ತಿಯವರ `ರಂಗಣ್ಣನ ಕನಸಿನ ದಿನಗಳು', ನವರತ್ನರಾಮ್‌ ಬರೆದ `ಕೆಲವು ನೆನಪುಗಳು' ಮತ್ತು ಆಕಾಶವಾಣಿಯಲ್ಲಿ ಕಳೆದ `ಕಲಕತ್ತಾ ದಿನಗಳ' ಕುರಿತು ಜ್ಯೋತ್ಸ್ನಾ ಕಾಮತ್‌ ಕೃತಿ. ಇವೆಲ್ಲ ಸಾಹಿತ್ಯದ ವಿಶಿಷ್ಟ ಪ್ರಕಾರಗಳು. ದಿನದ ಹತ್ತು ಹನ್ನೆರಡು ಗಂಟೆಗಳನ್ನು ಮನೆಯಿಂದ ಹೊರಗೆ ಕಳೆಯುವಂತೆ ಮಾಡುವ ವೃತ್ತಿ ನಮಗೆ ಹೊಸ ಸವಾಲುಗಳನ್ನು ಒಡ್ಡುತ್ತದೆ, ಹೊಸ ಹೊಸ ಅನುಭವ ಮತ್ತು ಒಡನಾಟಗಳನ್ನು ಒದಗುವಂತೆ ಮಾಡುತ್ತದೆ. ಸಾಹಿತ್ಯದ ಮೂಲದ್ರವ್ಯ ಇದೇ ಆಗಿರುವುದರಿಂದ, ಈ ನೆನಪುಗಳಲ್ಲಿ ಕಥನದ ಕುತೂಹಲ ಮತ್ತು ಬದುಕಿನ ಆರ್ದ್ರತೆ ಎರಡೂ ಬೆರೆತಿರುತ್ತದೆ.ಪೂರ್ಣಿಮಾ ಮಾಳಗಿಮನಿ ಅವರ ವೃತ್ತಿ ಜೀವನ ಅವರನ್ನು ವಿಶಿಷ್ಟವಾಗಿ ರೂಪಿಸಿರುವ ಚಿತ್ರಣ ಈ ಕೃತಿಯಲ್ಲಿದೆ. ಪುಟ್ಟ ಹಳ್ಳಿಯಿಂದ ಬಂದ ಪೂರ್ಣಿಮಾ ನವೋದಯ ಶಾಲೆಯಲ್ಲಿ ಓದಿ, ಆಕಸ್ಮಿಕವಾಗಿ ವಾಯುಸೇನೆ ಸೇರಿಕೊಂಡು, ತನಗೆ ಅಪರಿಚಿತವಾದ ಜಗತ್ತಿನಲ್ಲಿ ಅಡ್ಡಾಡಿದ ಪ್ರಸಂಗಗಳು ಈ ನೆನಪುಗಳ ಬುತ್ತಿಯಲ್ಲಿವೆ. ತಮಾಷೆ, ಭಾವುಕತೆ, ದಿಟ್ಟತನ ಮತ್ತು ಬೆರಗು ಹಾಸುಹೊಕ್ಕಾಗಿರುವ ಈ ಕಥನದಲ್ಲಿ ನಡೆದುಬಂದ ದಾರಿಯ ಹೆಜ್ಜೆಗುರುತುಗಳಿವೆ. ಸಹಜ ಕುತೂಹಲದಿಂದ ಓದಿಸಿಕೊಳ್ಳುವ ಕೃತಿ ಇದು. – ಜೋಗಿ

₹225   ₹200

ಆಕಾಶ ಬುಟ್ಟಿ ಅಪ್ಪನ ನೆನಪಿನ ಕನವರಿಕೆ | Akasha Butti Appana nenapina kanavarike

ಆಕಾಶಬುಟ್ಟಿಯ ಲೇಖಕರಾದ ಪ್ರೊ. ನಟರಾಜ್ ಅರಳಸುರಳಿ, ತೀರ್ಥಹಳ್ಳಿ ತಾಲ್ಲೂಕಿನ ಪುಟ್ಟ ಗ್ರಾಮ ಅರಳಸುರಳಿಯ ನಿವಾಸಿ. ಮೂಲತಃ ವ್ಯಂಗ್ಯಚಿತ್ರಗಾರರಾಗಿರುವ ನಟರಾಜ್ ನಾಡಿನಾದ್ಯಂತ ವ್ಯಂಗ್ಯಚಿತ್ರಕಾರರಾಗಿ ಹೆಚ್ಚು ಜನ ಓದುಗರಿಗೆ ಪರಿಚಿತರಾದವರು. ಈವರೆಗೂ ಐದು ಸಾವಿರಕ್ಕೂ ಹೆಚ್ಚು ವ್ಯಂಗ್ಯಚಿತ್ರಗಳನ್ನು ರಚಿಸಿದ್ದಾರೆ. ಕನ್ನಡದ ಪ್ರಸಿದ್ದ ವಾರ, ಮಾಸ ಪತ್ರಿಕೆಗಳೆಲ್ಲೆಲ್ಲಾ ಇವರ ವ್ಯಂಗ್ಯಚಿತ್ರಗಳು ಪ್ರಕಟವಾಗಿವೆ. ತೀರ್ಥಹಳ್ಳಿಯ ಪ್ರಸಿದ್ದ ಶಿಕ್ಷಣ ಸಂಸ್ಥೆಯಾದ ತುಂಗಾ ಮಹಾವಿದ್ಯಾಲಯದಲ್ಲಿ ಸರಿ ಸುಮಾರು ಮುವತ್ತೈದು ವರ್ಷಗಳ ಕಾಲ ಇಂಗ್ಲಿಷ್ ಉಪನ್ಯಾಸಕರಾಗಿ, ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಆಕಾಶಬುಟ್ಟಿ ನಟರಾಜ್ ಅರಳಸುರಳಿಯವರ ಚೊಚ್ಚಲ ಕೃತಿ.

₹220   ₹187

ಆಕ್ರಮಣ | Akramana

ಅವರು ನಮ್ಮ ಒಗ್ಗಟ್ಟನ್ನು ಮುರಿಯಲು ಸುಲಭ ದಾರಿ ಕಂಡುಕೊಂಡಿದ್ದಾರೆ. ಅದು ಸಿಂಪಲ್ ದಾರಿ. ನಮಗೂ ಗೊತ್ತಿರುವ ದಾರಿ! ಆದರೂ ನಾವು ಎಚ್ಚೆತ್ತುಕೊಂಡಿಲ್ಲ! ಒಮ್ಮೆ ಧರ್ಮ, ಇನ್ನೊಮ್ಮೆ ಜಾತಿ, ಮತ್ತೊಮ್ಮೆ ಲಿಂಗ, ಮಗದೊಮ್ಮೆ ಬಣ್ಣ ಹೀಗೆ ಒಂದಲ್ಲ ಒಂದು ಬಾಂಬುಗಳನ್ನು ನಮ್ಮ ನಡುವೆ ತಂದಿಡುತ್ತಲೇ ಇರುತ್ತಾರೆ. ಆ ಬಾಂಬಿಗೆ ಸಿಡಿಯುವ ಶಕ್ತಿ ಇದೆಯಾ? ಸಿಡಿದರೆ ಎಷ್ಟು ಜನ ಆಹುತಿಯಾಗಬಹುದು? ಆ ಬಾಂಬನ್ನು ನಿಷ್ಕ್ರಿಯಗೊಳಿಸುವ ದಾರಿ ಯಾವುದು? ಎಂಬ ಸಣ್ಣಪುಟ್ಟ ಆಲೋಚನೆಗಳೂ ನಮ್ಮ ಮನಸ್ಸನ್ನು ಕದಡುವುದಿಲ್ಲ. ಹೊರತಾಗಿ ಬಾಂಬಿನ ಬಗ್ಗೆ ಹರಡುವ ಊಹಾಪೋಹಗಳಿಗೆ ಕಿವಿ ಕೊಡುತ್ತೇವೆ. ಕೇಳಿದ್ದೆಲ್ಲಾ ಸತ್ಯ ಅನ್ನುವಹಾಗೆ ಒಂದಷ್ಟು ದಿನ ಹಾರಾಡುತ್ತೇವೆ. ಅಲ್ಲಿಗೆ ಇನ್ನೊಂದು ಹೊಸ ಬಾಂಬು ಬಂದು ಬೀಳುತ್ತದೆ. ನಮ್ಮ ಚಿತ್ತ ಅತ್ತ ಹಾಯುತ್ತದೆ. ಹೀಗೇ ನಮ್ಮನ್ನು ಈ ಬಾಂಬುಗಳು ಸದಾ ಬ್ಯುಸಿಯಾಗಿರುವಂತೆ ಮಾಡುತ್ತವೆ. ನಮ್ಮ ಸಮಯ, ಹಣ, ತಕ್ತಿ, ಸೃಜನಶೀಲತೆ ಎಲ್ಲವೂ ಹಾಳಾಗುವುದು ಹೀಗೇ.. ಹಾಗಾದರೆ ಈ ಎಲ್ಲವನ್ನು ಬಳಸಿಕೊಂಡು ರ‍್ಯಾಂಬೊ ಏನು ಮಾಡುತ್ತಾನೆ? ಅಕ್ರಮಣ ಮಾಡುತ್ತಾನೆ!

₹150   ₹134

ಆಗಸ್ಟ್/august/

nil

₹230   ₹205

ಆಜಾದಿ | Ajadi

nil

₹499   ₹444