| Category: | ಕನ್ನಡ |
| Sub Category: | ಕಥಾ ಸಂಕಲನ |
| Author: | ರಾಗಂ | Raagam |
| Publisher: | ಅವ್ವ ಪುಸ್ತಕಾಲಯ | Avva Pustakalaya |
| Language: | Kannada |
| Number of pages : | |
| Publication Year: | 2026 |
| Weight | 150 |
| ISBN | 9789359069777 |
| Book type | Paperback |
Delivery between 2-6 Days
No returns accepted. Please refer our full policy
Your payments are 100% secure
ಈ ನನ್ನ ಸಾಕಿಯ ಹುಡುಕುತ್ತಾ ನೀವೆಲ್ಲೂ ಹೋಗಬೇಕಿಲ್ಲ. ಮನದನ್ನೆಯಾಗಿ, ಮಗಳಾಗಿ, ಗೆಳತಿಯಾಗಿ, 'ಸುಖವನರಿಯದ ಸೂಳೆಯಾಗಿ', ಅಂತರಂಗದ ಧ್ವನಿಯಾಗಿ, ಸೋಲಿಗೊಂದು ಸಾಕ್ಷಿಯಾಗಿ, ಗೆಲುವಿಗೊಂದು ಗರಿಯಾಗಿ, ವಿಭಜನೆಗೆ ನೆಪದ ಗೆರೆಯಾಗಿ ಇವಳಿದ್ದಾಳೆ ನಿಮ್ಮೊಂದಿಗೆ, ನಮ್ಮೊಂದಿಗೆ. ಜಗದ ಸಚರಾಚರ ಜೀವ- ಜೀವನದೊಂದಿಗೆ. ಇವಳಿಗಾಗಿ ಮತ್ತೇನೂ ಬೇಕಿಲ್ಲ. ನೀವು ಸ್ವಲ್ಪ ಸಮಯ ಕೊಡುವಷ್ಟು ಕರುಣಾಳುಗಳಾದರೆ ಸಾಕು. ಇವಳು ನಿಮ್ಮ ಬದುಕುಗಳನ್ನು ಸೋಕಿ ನಿಮ್ಮನ್ನು ಸಾವಿನಿಂದ ಮುಕ್ತಳಾಗಿಸುತ್ತಾಳೆ. ಬೇಡಾದ, ಬೇಕಾದ ಬದುಕಿನ ಭಕ್ತರಾಗಿಸುತ್ತಾಳೆ. ನಾನು ಇವಳನ್ನು ಕುರಿತು ಏನೆಲ್ಲಾ ಬರೆದೂ ವಿಫಲನಾಗಿದ್ದೇನೆ. ಯಾಕೆಂದರೆ ಇವಳು ಕಾಮನಬಿಲ್ಲಿನಂತೆ. ಏಳೂ ಬಣ್ಣಗಳನ್ನು ಸೇರಿಸಿ ಕಾಮನಬಿಲ್ಲು ಎಂದು ಕರೆದೆ. ಆದರೆ, ಬಣ್ಣ ಬಣ್ಣಗಳು ಸಂಧಿಸಿ ಹೊರಹೊಮ್ಮುವ ಚೆಲುವಿಗೆ ಏನೆಂದು ಹೆಸರಿಸಲಿ? ಮಾತಿಗೆ ಮಾತೆಂದೆ, ಮೌನಕ್ಕೆ ಮೌನ. ಮಾತು ಮತ್ತು ಮೌನಗಳು ಸಂಧಿಸುವ ಸುಮ್ಮಾನಕ್ಕೆ ಯಾವ ಹೊಸ ವ್ಯಾಖ್ಯಾನ ನೀಡಲಿ?
ರಾಗಂ
ರಾಗಂ | Raagam |
0 average based on 0 reviews.