| Category: | ಕನ್ನಡ |
| Sub Category: | ಕಥಾ ಸಂಕಲನ |
| Author: | ವಿನಯ್ ಹೊನ್ನಾವರ | Vinay Honnavara |
| Publisher: | ಅಕ್ಷರ ನಾದ ಪಬ್ಲಿಕೇಷನ್ಸ್ | Akshara naada Publications |
| Language: | Kannada |
| Number of pages : | 64 |
| Publication Year: | 2025 |
| Weight | 300 |
| ISBN | |
| Book type | Paperback |
Delivery between 2-6 Days
No returns accepted. Please refer our full policy
Your payments are 100% secure
ನಿಮ್ಮ ಅಷ್ಟಮುಖಿ ಕಥಾ ಸಂಕಲನವು ಕನ್ನಡ ಸಾಹಿತ್ಯದ ಹೊಳೆಯಲ್ಲಿ ಹೊಸ ಬೆಳಕಿನ ಕಿಡಿಯಾಗಿ ಮಿಂಚುತ್ತಿದೆ. ಈ ಕೃತಿಯ ಪ್ರತಿ ಕಥೆಯೂ ಜೀವನದ ಚಿತ್ರಣವನ್ನು ಸೂಕ್ಷ್ಮವಾಗಿ, ಆತ್ಮೀಯವಾಗಿ ಬಿಂಬಿಸುವ ಕನ್ನಡಿಯಂತಿದೆ. ಬಂದವರು ಹೋದರಂತೆ ಕಥೆಯಿಂದ ಆರಂಭವಾಗಿ, ಪ್ರತಿ ಕಥೆಯೂ ಒಂದೊಂದು ಭಾವನೆಯ ರಾಗವನ್ನು ಮೀಟುತ್ತದೆ ಪ್ರೇಮದ ಸಿಂಪನ, ತಾಯಿಯ ಕರುಳಿನ ಕಂಪನ, ತಂದೆಯ ಪ್ರೀತಿಯ ಬೆಸುಗೆ, ಮರನ ದುಡಿಮೆಯ ತೊಳಲಾಟ ಇವೆಲ್ಲವೂ ಜೀವನದ ಸತ್ಯಗಳನ್ನು ಸರಳವಾಗಿ, ಆಳವಾಗಿ ಒಡಮೂಡಿಸಿವೆ.
ನಿನ್ನ ಕಲಮದಿಂದ ಹೊಮ್ಮಿರುವ ಈ ಕಥೆಗಳು ಓದುಗರ ಹೃದಯದಲ್ಲಿ ಒಂದು ಚಿರಸ್ಥಾಯಿ ಮುದ್ರೆಯನ್ನು ಒತ್ತುತ್ತವೆ ಎನ್ನುವುದರಲ್ಲಿ ಎರಡು ಮಾತಿಲ್ಲ ಗೆಳೆಯ.. ಒಂದೊಂದು ಕಥೆಯೂ ಒಂದೊಂದು ಪಾಠವನ್ನು ಒಂದೊಂದು ಜೀವನದ ಪ್ರತಿಧ್ವನಿ ಮುಖವನ್ನು ತೆರೆದಿಡುತ್ತದೆ. ನಿಮ್ಮ ಬರವಣಿಗೆಯ ಸರಳತೆಯಲ್ಲಿ ಸಂಕೀರ್ಣ ಭಾವನೆಗಳು ಕರಗಿ, ಓದುಗರನ್ನು ಆಳವಾಗಿ ಸ್ಪರ್ಶಿಸುವ ಶಕ್ತಿಯನ್ನು ತೋರುತ್ತದೆ.
ಅಷ್ಟಮುಖಿ ಕನ್ನಡ ಸಾಹಿತ್ಯದಲ್ಲಿ ಒಂದು ಮೈಲಿಗಲ್ಲಾಗಿ ನಿಲ್ಲಲಿ ಎಂಬ ಆಶಯ ನಮ್ಮದು. ಅಕ್ಷರ ನಾದ ಪಬ್ಲಿಕೇಶನ್ಸ್ನಿಂದ ಈ ಕೃತಿಯನ್ನು ಮುದ್ರಣ ಮಾಡಿ ಬಿಡುಗಡೆ ಮಾಡಿರುವುದು ನಮಗೆ ಹೆಮ್ಮೆಯ ಕ್ಷಣ. ಯುವ ಲೇಖಕರಾದ ನಿಮಗೆ, ನಿಮ್ಮ ಕಲಾಸೌರಭದ ಈ ಯಾತ್ರೆಯಲ್ಲಿ, ಸಹೃದಯ ಓದುಗರ ಪ್ರೀತಿಯೂ, ಪ್ರೋತ್ಸಾಹವೂ ಸದಾ ಸಾರಥಿಯಾಗಿರಲಿ. ನಿಮ್ಮ ಬರವಣಿಗೆಯು ಇನ್ನಷ್ಟು ಕಾವ್ಯವಾಗಿ, ಕಥೆಯಾಗಿ, ಜೀವನವಾಗಿ ಹರಿಯಲಿ, ಆತ್ಮೀಯ ಶುಭಾಶಯಗಳೊಂದಿಗೆ, ನಿಮ್ಮ ಅಭಿನಂದನೆಗಳು!
ಸಾಹಿತ್ಯ
ಸಾಧನೆಗೆ
ಡಾ. ಶ್ರುತಿ ಮಧುಸೂದನ್
ವಿನಯ್ ಹೊನ್ನಾವರ | Vinay Honnavara |
0 average based on 0 reviews.