ಸವಿರಾಜ ಆನಂದೂರು ಕಾವ್ಯಲೋಕದಿಂದ ಕಥಾ ಲೋಕಕ್ಕೆ `ಪುರಾಣ ಗಿರಾಣ ಇತ್ಯಾದಿ' ಮೂಲಕ ಪಾದಾರ್ಪಣೆ ಮಾಡಿದ್ದಾರೆ. ಈ ಸಂಕಲನಕ್ಕೆ ಬೇಕಾದ ಅಪಾರ ಓದು, ವಿಶ್ಲೇಷಣೆ, ಅದಕ್ಕೆ ಬೇಕಾದ ಪೂರ್ವ ಸಿದ್ಧತೆ, ಕತೆಗೆ ಬೇಕಾದ ಚೌಕಟ್ಟಿನೊಳಗೆ ಕೂರಿಸುವ ಜಾಣ್ತನ, ಎಲ್ಲವೂ ಅವರಿಗೆ ಈ ಕಥಾ ಸಂಕಲನದಲ್ಲಿ ಸಿದ್ಧಿಸಿದೆ. ಚೌಕಟ್ಟಿನಾಚೆಗೂ ಕತೆ ಜಿಗಿತವನ್ನು ಕಾಣುತ್ತವೆ, ಕಾಡುತ್ತವೆ.