ಜೀವನದ ಕೊನೆಯ ಹಂತಗಳನ್ನು ಅಲ್ಲಗಳೆದು ಸದಾ ಯೌವ್ವನ, ಯಶಸ್ಸನ್ನೇ ಹುಡುಕಿ ಮೆರೆಸುವ ಇತ್ತೀಚಿನ ಸಮಾಜದಲ್ಲಿ, ಹೆಚ್ಚುತ್ತಿರುವ ವೃದ್ಧರ ಸಂಖ್ಯೆಯು ಒಂದು ನಿಜವಾದ ಸಂಗತಿ. ಈ ವಯೋವರ್ಗದ ಅವಶ್ಯಕತೆಗಳು, ಅವರು ಎದುರಿಸಬಹುದಾದ ಸಮಸ್ಯೆಗಳು ಹಾಗು ಅವುಗಳನ್ನು ನಿಭಾಯಿಸುವ ಹಲವಾರು ಸಾಧ್ಯತೆಗಳನ್ನು ವಿವರಿಸುವ ಪುಸ್ತಕ ಇದು. ತಿಳಿ ಹಾಸ್ಯದೊಂದಿಗೆ ಸಾಮಾನ್ಯವಾಗಿ ಒಪ್ಪಿಕೊಳ್ಳಲು ಹಿಂಜರಿಯುವ ವಿಷಯಗಳನ್ನು ಬಿಡಿಸಿ ಹೇಳಿ, ಮುಗುಳ್ನಗೆಯಿಂದ ಮುಪ್ಪನ್ನು ಕೂಡ ಧೈರ್ಯದಿಂದ ಆಲಿಂಗಿಸಿ ಮುನ್ನಡೆಯುವುದಕ್ಕೆ ಒಂದು ಮಾರ್ಗಸೂಚಿ. ಡಾ।। ಸರಸ್ವತಿ ಐತಾಳ್ ಅವರು ಬೆಂಗಳೂರಿನ ಸಂಜಯನಗರದಲ್ಲಿ ಕಳೆದ 20 ವರ್ಷಗಳಿಂದ ವೈದ್ಯೆ ವೃತ್ತಿಯನ್ನು ನಡೆಸಿಕೊಂಡು ಬಂದಿದ್ದಾರೆ. ಅವರಿಗೆ ಗ್ರಾಮಾಂತರ ವೈದ್ಯಕೀಯ ಸೇವೆ, ಜೀವನ ಶೈಲಿಯ ರೋಗಗಳು (ಮಧುಮೇಹ), ಮಹಿಳೆಯರು ಹಾಗು ವೃದ್ಧರ ಆರೋಗ್ಯ ಸಮಸ್ಯೆಗಳ ಬಗ್ಗೆ ಹೆಚ್ಚು ಕಾಳಜಿ. ಅದರ ಫಲಶ್ರುತಿಯೇ ಅವರ ಈ ಮೊದಲನೆಯ ಪುಸ್ತಕ `ಅರವತ್ತರ ನಂತರ ಮರಳಿ ಅರಳಿ'.