ಹೊಸುರೆಲೆಗಳನ್ನು ಹುಡುಕುತ್ತಲೇ ಸಾಗುತ್ತಿರುವ ಮನುಷ್ಯನಿಗೆ, ಎಡತಾಗುತ್ತಲೇ ಇರುವ ಪ್ರಶ್ನೆ "ನಾನ್ಯಾರು?' ಎಂಬುದು. ಇದು ಅಧ್ಯಾತ್ಮದ 'ಅಲೌಕಿಕ ನಾನು' ಅಲ್ಲ, ಬದಲಿಗೆ ನಮ್ಮ ಅರಿವಿನಲ್ಲೇ ಇರುವ 'ಲೌಕಿಕ ನಾನು' ಜಟಿಲವಾದ ಪ್ರಶ್ನೆಯಾದ್ದರಿಂದ ಕಟ್ಟಿಕೊಳ್ಳುವ ಉತ್ತರವೂ ಶಿಥಿಲವಾಗಿರುತ್ತದೆ. ರಾಜ್ಯದ ನಾನಾ ಕಡೆಗಳಿಂದ ಬೆಂಗಳೂರಿನಂತಹ ಮಹಾನಗರಕ್ಕೆ ಬಂದು ಬದುಕು ಕಟ್ಟಿಕೊುವ ಯುವಕ ಯುವತಿಯರಿಗೆ ಕಾಡುವುದೂ ಇದೇ ಪ್ರಶ್ನೆ ಈ ಕಾದಂಬರಿಯಲ್ಲಿರುವುದು ಅಂತಹ ಯುವಪ್ರೇಮಿಗಳಿಬ್ಬರ ಕಥನ. ಜನಸಮೂಹವನ್ನು ಅಪ್ಪಳಿಸಿದ ಕರೋನಾದ ಹಿನ್ನೆಲೆಯಲ್ಲಿ ನಡೆಯುವ ಪ್ರೇಮಕಥನ, ಅವರು ದಂಪತಿಗಳಾದ ನಂತರವೂ ವಿಸ್ತರಿಸುವ ದಾಂಪತ್ಯದ ಕಥನ. ನೈಜ ಬದುಕು, ಪ್ರಾರಂಭಹಾಗೂ ಅಂತ್ಯ ಎಂಬ ಒತ್ತಡಗಳಿಂದ ಮುಕ್ತವಾಗಿರುವುದರಿಂದ; ಇಲ್ಲಿನ ಪಾತ್ರಗಳಿಗೂ ಆ ಹೊರೆಯನ್ನು ಹೇರಲಾಗಿಲ್ಲ. ಆ ನಿಟ್ಟಿನಲ್ಲಿ ಇದೊಂದು ಹೊಸಪ್ರಯೋಗ ಎಂದು ಆಶಿಸುತ್ತೇನೆ. ಡಾ| ಶ್ರೀಧರ್ ಕೆ ಬಿ