ತಾನೊಬ್ಬ ಆಗೋಸ್ಟಿಕ್. ಹಾಗೆಂದುಕೊಂಡ ಪರ್ವನ ಮನಸು ಗೊಂದಲದ ಗೂಡು. ಆಜೇಯತಾವಾದಿ ಎನ್ನುತ್ತಾರಂತೆ ಕನ್ನಡದಲ್ಲಿ ದೇವರಲ್ಲಿ ಅತಿಯಾಗಿ ವಿಶ್ವಾಸವಿರದ, ನಾಸ್ತಿಕತೆಯನ್ನೂ ಒಪ್ಪದ ಮನಸ್ಥಿತಿ ತನ್ನದು. ದೇವರು ಇರಲಿ, ಇರದಿರಲಿ ತನ್ನ ಬದುಕಿಗೆ ವ್ಯತ್ಯಾಸವೇನೂ ಆಗದು ಎನ್ನುವ ತರ್ಕ. ಅವನಿದ್ದರೆ ಅವನ ಪಾಡಿಗಿರಲಿ, ನಾನು ನನ್ನ ಪಾಡಿಗೆ ಎಂದುಕೊಂಡವನ ಬದುಕಲ್ಲಿ ಏನು ನಡೆಯುತ್ತಿದೆ ಎನ್ನುವುದು ಅರ್ಥವಾಗದ ಸ್ಥಿತಿ ಅವನಿಗೆ. ಪರಮ ಆಸ್ತಿಕರಾದ ಹೆತ್ತವರು ತನ್ನ ತರ್ಕವನ್ನು ಅಲ್ಲಗಳೆಯುತ್ತಿದ್ದಾರೆ. ಗೆಳೆಯನಿಗೆ ವಿಷಯದ ಗಂಭೀರತೆಯನ್ನು ವಿವರಿಸುವುದು ಕಷ್ಟ. ಚಿಕ್ಕಪ್ಪನಿಗೆ ವಿವರಿಸಿ ಅರ್ಥ ಮಾಡಿಸೋಣ ವೆಂದರೆ ಅವನಿನ್ನೂ ಆಘಾತದಿಂದ ಚೇತರಿಸಿಕೊಂಡಿಲ್ಲ. ಎಲ್ಲಕ್ಕಿಂತ ಅಚ್ಚರಿಯೆಂದರೆ ಸ್ಮಶಾನದಲ್ಲಿ ಕೊನೆಯವರೆಗೂ ತನ್ನ ಜೊತೆಗೇ ಇದ್ದ ಹೆಂಡತಿಗೆ ಏನೆಂದರೇ ಏನೂ ನೆನಪಿಲ್ಲ. ಆಕೆ ಕೂಡ ಲೋಕಿಯ ಸಾವು ಸಹಜ ಸಾವು ಎನ್ನುತ್ತಾಳೆ. ಅವನ ಸಾವಿಗೆ ಮಾನಸಿಕ ಕಾಯಿಲೆಯೇ ಕಾರಣ ಎಂದು ವಾದಿಸುತ್ತಾಳೆ. ಊಹುಂ..!! ಖಂಡಿತ ಇಲ್ಲ, ಅದು ಸಹಜ ಸಾವಲ್ಲ. ಮೇಲ್ನೋಟಕ್ಕೆ ಸಹವೆನ್ನಿಸಿದರೂ ಅಲ್ಲೊಂದಿಷ್ಟು ಅನುಮಾನಗಳಿಗೆ ಅವಕಾಶವಿದೆ. ಅಲ್ಲೊಂದು ವಿಲಕ್ಷಣತೆಯಿದೆ. ಯಾರ ಗಮನಕ್ಕೂ ಬಾರದ, ಒಂದೇನೋ ಅವ್ಯಕ್ತ ಅಸಹಜತೆಯಿದೆ. ಅದು ನಿಗೂಢ..!! ಅದು ವಿಕ್ಷಿಪ್ತ...!! ಅದು ಮನುಷ್ಯ ಸಹಜವಾದ ಸಾವಲ್ಲ, ಅದು ಅತಿಮಾನುಷ....!! ISBN
nil