nil
#
"ಹೇ ಇದ್ರೇನ್ ಇಲ್ಲಿ..!?” ಆತನನ್ನು ಅಲ್ಲಿ ನೋಡಿದ ಕೂಡಲೇ, ಆ ಸಾವಿನ ಮನೆಯಲೆಲ್ಲ ಸಂಚಲನದ ಜೊತೆಗೆ ಗುಸುಗುಸು ಹಬ್ಬಿತ್ತು. ಅರವತ್ತು ವರ್ಷಗಳ ತುಂಬು ಜೀವನವನ್ನ ನಡೆಸಿದ್ದ ಅನ್ನಪೂರ್ಣ ಅಂದು ಇಹ ಲೋಕ ತ್ಯಜಿಸಿದ್ದರು. ಅವರ ಪಾರ್ಥಿವ ದೇಹವನ್ನ ದರ್ಶನ ಮಾಡಲು ಬರುತ್ತಿದ್ದವರ ಸಾಲಿನಲ್ಲಿ, ಅನ್ನಪೂರ್ಣರವರಷ್ಟೇ ವಯಸ್ಸಾದ, ಆ ಜಿಲ್ಲೆಯ ಪ್ರಸಿದ್ಧ ವ್ಯಕ್ತಿಯೊಬ್ಬ ಕಣ್ಣಲ್ಲಿ ನೀರು ತುಂಬಿಕೊಂಡು ನಿಂತಿದ್ದ ಗುಸು, ಗುಸು ಅನ್ನಪೂರ್ಣರವರ ತಮ್ಮನ ಕಿವಿಗೂ ತಲುಪಿ, ಯಾರೆಂದು ಬಗ್ಗಿ ನೋಡಿದವನ ಕಣ್ಣಲ್ಲಿ ಅರೆಕ್ಷಣ ಅಚ್ಚರಿಯೊಂದು ಹಾದುಹೋಗಿತ್ತು. ಅನ್ನಪೂರ್ಣ ಮನಸಾರೆ ಪ್ರೀತಿಸಿದ ವ್ಯಕ್ತಿಯವನು. ಅವರಿಬ್ಬರೆದು ಅಮರ ಪ್ರೇಮಕತೆ. ಜೀವಕ್ಕೆ ಜೀವವಾಗಿ ಪ್ರೀತಿಸಿ, ಕೊನೆಗೆ ಅಮ್ಮ ಅಪ್ಪನ ಮಾತಿಗೆ, ಬೆದರಿಕೆಗೆ ಹೆದರಿ ಬೇರೆಯವನನ್ನು ಮದುವೆಯಾಗಿದ್ದರು ಅನ್ನಪೂರ್ಣಮ್ಮ, ಆಮೇಲೆ ಎಂದಿಗೂ ಅವರು ಭೇಟಿಯಾಗಿರಲಿಲ್ಲ. ಒಬ್ಬರಿಗೊಬ್ಬರ ಇರುವುಗಳ ಮಾಹಿತಿಯಿದ್ದರೂ ಮುಖತಃ ಎಂದು ಭೇಟಿಯಾಗಲೇ ಇಲ್ಲ. ಅದಾದ ಮೇಲೆ ಬಹುಷಃ ಇದೇ ಅವರ ಮೊದಲ ಭೇಟಿ. ಗುಸುಗುಸು ಮಾತುಗಳ ಪರಿವೆಯೇ ಇಲ್ಲದ ಆತ, ಕಣ್ಣಲ್ಲಿ ಹರಿಯುತ್ತಿದ್ದ ನೀರನ್ನು ಒರೆಸಿಕೊಳ್ಳುವ ಗೋಜಿಗೆ ಬೀಳದೆ "ಹೇಳಿಲ್ಲ ನಿಂಗೆ, 'ಎಲ್ಲೇ ಇರು, ಯಾರಜೊತೆನಾದ್ರು ಇರು, ಖುಷಿಯಾಗಿರು, ಆದ್ರೆ ನಂಗಿಂತ ಮುಂಚೆ ಈ ಭೂಮಿ ಬಿಟ್ಟೋಗ್ಗೇಡ, ನಿನ್ನ ಭೌತಿಕ ಇರುವಿಲ್ಲದೆ ನಾ ಇರಲ್ಲ ಅಂತ'. ಹೇಳು ಯಾಕ್ ಬಿಟ್ಟೋದೇ 17' ಅನ್ನಪೂರ್ಣರ ಜೀವವಿಲ್ಲದ ದೇಹದೊಡನೆ, ಮನಸ್ಸಲ್ಲೇ ಮಾತನಾಡುತ್ತಿದ್ದನಾತ. #ಕೆಲವೊಂದು ಪ್ರೇಮಕತೆಗಳಿಗೆ ಮೊದಲಷ್ಟೇ ಇರುತ್ತದೆ, ಕೊನೆಯಲ್ಲ. ಒಳಗೆ ಇನ್ನಷ್ಟು ನಮ್ಮ-ನಿಮ್ಮ ಕಥೆಗಳಿವೆ. ಓದಿ ನೋಡಿ. ಹ್ಯಾಪಿ ರೀಡಿಂಗ್... - ಅರ್ಜುನ್ ದೇವಾಲದಕೆರೆ.