ಪಿಂಚ್ ಆಫ್ ಪ್ರಪಂಚ
ವಿತ್ತ ಜಗತ್ತಿನ ಬರಹಗಾರರಾಗಿ ಖ್ಯಾತರಾಗಿರುವ ರಂಗಸ್ವಾಮಿ ಮೂಕನಹಳ್ಳಿ ಅವರು ಬರೆದಿರುವ ಪುಸ್ತಕವೇ ‘ಮನಿ ಮನಿ ಎಕಾನಮಿ.’ ಇದು ಬ್ಯಾಂಕಿಂಗ್, ಹಣಕಾಸು ಕ್ಷೇತ್ರ ಕುರಿತ ಮಾಹಿತಿಪೂರ್ಣ ಪುಸ್ತಕವಾಗಿದೆ. ವಿತ್ತ ಜತ್ತಿನ ಆಗುಹೋಗುಗಳನ್ನು ಪ್ರತಿಯೊಬ್ಬ ಸಾಮಾನ್ಯ ಪ್ರಜೆಯೂ ತಿಳಿದುಕೊಳ್ಳುವ ಅಗತ್ಯವಿದೆ. ಸಾಮಾನ್ಯ ಪ್ರಜೆಗೂ ಅರ್ಥವಾಗುವ ಸರಳ ಭಾಷೆಯಲ್ಲಿ ಲೇಖಕರು ಹಲವು ಉಪಯುಕ್ತ ಮಾಹಿತಿಯ ಲೇಖನಗಳನ್ನು ಬರೆದಿದ್ದಾರೆ. ವಿದ್ಯಾರ್ಥಿಗಳು, ಪೋಷಕರು, ಅಧ್ಯಾಪಕರು, ಸಾಮಾನ್ಯ ಪ್ರಜೆಗಳಿಗೂ ಉಪಯುಕ್ತ ಪುಸ್ತಕ ಇದಾಗಿದೆ.
ಆಸ್ಕರ್ ಟಿವಿಯಲ್ಲಿ 1992ರ ಬಾರ್ಸಿಲೋನಾ ಒಲಂಪಿಕ್ಸ್ ಹೈಲೈಟ್ಸ್ ಹಲ್ಲು ಕಿಸಿದು ಕೊಂಡು ನೋಡಿದ ನೆನಪು ಅಚ್ಚಳಿಯದೆ ಮಸ್ತಕದಲ್ಲಿ ಅಚ್ಚಾಗಿದೆ. ಅವತ್ತಿಗೆ ಯಾರಾದರೂ ಇನ್ನೊಂದು ಹತ್ತು ವರ್ಷದಲ್ಲಿ ಈ ಒಲಂಪಿಕ್ ಆಟಗಾರರಿಗೆ ಎಂದು ಕಟ್ಟಿರುವ ಸುಸಜ್ಜಿತ ಮನೆಯೊಂದರ ಒಡೆಯ ನೀನಾಗುತ್ತೀಯ ಎಂದಿದ್ದರೆ ಹುಚ್ಚಾಪಟ್ಟೆ ನಕ್ಕು, ಹಂಗಿಸುವುದಕ್ಕೂ ಒಂದು ಮಿತಿ ಇರುತ್ತೆ ಗೆಳೆಯ ಎಂದು ಹೇಳಿ ಕಳಿಸುತ್ತಿದ್ದೆ. ಆದರೆ ದೈವೇಚ್ಛೆ ಬೇರೆಯಿತ್ತು, ಬಾರ್ಸಿಲೋನಾದಲ್ಲಿ ಒಂದಕ್ಕಿಂತ ಹೆಚ್ಚು ಮನೆಕೊಳ್ಳುವಂತಾಯ್ತು. 17 ವರ್ಷ ಬಾರ್ಸಿಲೋನಾ ನೆಲೆಯಾಯ್ತು, ಭಾಷೆ, ಬದುಕುವ ರೀತಿ, ಈ ಅಗಾಧ ಪ್ರಪಂಚದಲ್ಲಿ ನಾವೇನೂ ಅಲ್ಲ ಎನ್ನುವುದನ್ನ ಕಲಿಸಿತು.ಸಹಜೀವಿಗಳ ಬಗ್ಗೆ ಪ್ರೀತಿ, ಮಮಕಾರ ಕೂಡ ಕಲಿಸಿದ್ದು ಬಾರ್ಸಿಲೋನಾ. ಈ ಪುಸ್ತಕದಲ್ಲಿ, ಬಾರ್ಸಿಲೋನಾ ನನಗೆ ಉಣಬಡಿಸಿದ ಅನುಭವಗಳ ಕಥೆಯನ್ನ ಕಟ್ಟಿಕೊಟ್ಟಿದ್ದೇನೆ.
ತುಮಕೂರು ಜಿಲ್ಲೆಯ ಸಿರಾದಲ್ಲಿ ೧೮.೦೫.೧೯೭೫ ರಂದು ಜನನ. ಪ್ರಾಥಮಿಕ ಶಿಕ್ಷಣ ಸಿರಾ ತಾಲೂಕಿನ ಹೊಸೂರು ಎನ್ನುವ ಗ್ರಾಮದಲ್ಲಿ ಆಗುತ್ತದೆ. ಮಾಧ್ಯಮಿಕ ಶಿಕ್ಷಣ ಬೆಂಗಳೂರಿನ ಪೀಣ್ಯದಲ್ಲಿನ ಸರಕಾರಿ ಶಾಲೆಯಲ್ಲಿ, ಹತ್ತನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿ ಕಲಿಕೆ. ನಂತರ ವಿವೇಕಾನಂದ ಕಾಲೇಜಿನಲ್ಲಿ ಕಾಮರ್ಸ್ ಭಾಗದಲ್ಲಿ ಓದಿ ಬೆಂಗಳೂರು ಯೂನಿವರ್ಸಿಟಿಯಿಂದ ಕಾಮರ್ಸ್ ಪದವಿ ಪಡೆಯುತ್ತಾರೆ. ೨೩ ನೆಯ ವಯಸ್ಸಿಗೆ ಕೆಲಸದ ಮೇಲೆ ದೇಶವನ್ನ ತೊರೆದು ದುಬೈ ಸೇರುತ್ತಾರೆ. Read More...