Delivery between 2-8 Days
No returns accepted. Please refer our full policy
Your payments are 100% secure
ಪ್ರಕೃತಿ ವೈಭವದ ವರ್ಣನೆಯಿರಲಿ, ಪ್ರವಾಹದ ಭೀಕರತೆಯಿರಲಿ, ಪ್ರೀತಿ, ಪ್ರೇಮಗಳ ನವಿರು ಭಾವನೆಯಿರಲಿ, ಸ್ವಾರ್ಥದ ಪರಮಾವಧಿಯಿರಲಿ, ಒಳ್ಳೆಯತನದ ಅನಾವರಣವಿರಲಿ, ಇಲ್ಲಿನ ಕಥೆಗಳಲ್ಲಿ ಎಲ್ಲವೂ ಇವೆ ಮತ್ತು ಎಲ್ಲೂ ಕಪೋಲಕಲ್ಪಿತವೆನಿಸದೆ ಸಹಜವಾಗಿ ಮೂಡಿ ಬಂದಿವೆ. ಕೆಟ್ಟಿದ್ದಾಗುತ್ತದೆಯೆಂಬ ನಿರೀಕ್ಷೆ ಒಳಿತಾಗುವ ಅನಿರೀಕ್ಷಿತ ಅಂತ್ಯದ ಕತೆಗಳೂ ಇಲ್ಲಿವೆ. ಒಟ್ಟಿನಲ್ಲಿ ಹೇಳಬೇಕೆಂದರೆ ತಾವು ಕೈಗೆತ್ತಿಕೊಂಡ ವಸ್ತುಗಳಿಗೆ ನ್ಯಾಯ ಒದಗಿಸಿದ್ದಾರೆ ಲೇಖಕಿ. ತಮಗೆ ಬರವಣಿಗೆಯ ಕಲೆ ಸಿದ್ದಿಸಿದೆಯೆಂಬುದನ್ನು ಸಾಬೀತುಪಡಿಸಿದ್ದಾರೆ. ಸಂಕಲನದ ಕೊನೆಯಲ್ಲಿ ನವಿರಾದ, ಚುರುಕಾದ ಕಿರುಗತೆಗಳೂ ಸೇರಿಕೊಂಡು ವೈವಿಧ್ಯಮಯ ಓದಿನ ಸವಿಯನ್ನು ಹೆಚ್ಚಿಸಿವೆ.
- ವಸುಮತಿ ಉಡುಪ
Geetha Kundapura |
0 average based on 0 reviews.