Category: | ಕನ್ನಡ |
Sub Category: | ಅನುಭವ ಕಥನ |
Author: | Abdul Rasheed |
Publisher: | |
Language: | Kannada |
Number of pages : | |
Publication Year: | 2010 |
Weight | |
ISBN | |
Book type | Paperback |
Delivery between 2-8 Days
No returns accepted. Please refer our full policy
Your payments are 100% secure
`ಮೈಸೂರು ಪೋಸ್ಟ್ ಅರಮನೆ ನಗರಿಯ ಚಿತ್ರಗಳು’ ಕೃತಿಯು ಅಬ್ದುಲ್ ರಶೀದ್ ಅವರ ಬರಹಗಳ ಸಂಕಲನವಾಗಿದೆ. ರಶೀದ್ ‘ಮೈಸೂರ್ ಪೋಸ್ಟ್’ನ ಲೇಖಕನ ಮಾತಿನಲ್ಲಿ ಹೀಗೆ ಬರೆದಿದ್ದಾರೆ :‘ಬರೆದು ಎಷ್ಟೋ ಕಾಲವಾದ ಬಳಿಕ ನಾನೇ ಓದಿದಾಗ ವಿಷಣ್ಣತೆಯಂಥದ್ದು ಗಂಟಲಿಗೆ ಸಿಕ್ಕಿಹಾಕಿಕೊಂಡಂತಾಗುತ್ತಿದೆ. ನಾನು ಬರೆಯಲೋಸುಗ ಇವರೆಲ್ಲ ನೆಪದಂತೆ ಆಗಿಬಿಟ್ಟರಲ್ಲಾ ಎಂದು’. ಪ್ರವಾಸಿ ತಾಣಗಳ ಬಗ್ಗೆ ಬರೆಯುವಾಗಲೂ ಎಷ್ಟೋ ಬಾರಿ ಹೀಗೆ ಅನ್ನಿಸುತ್ತಿರುತ್ತದೆ. ಬರೆದರೆ ಆ ಸ್ಥಳ ಪ್ರಾಮುಖ್ಯತೆ ಪಡೆದು, ಆ ಸ್ಥಳಕ್ಕೆ ಒಂದಿಷ್ಟು ಜನರು ಬಂದು ಹೋಗಿ ಸ್ಥಳೀಯರಿಗೊಂದಿಷ್ಟು ಉದ್ಯೋಗಾವಕಾಶಗಳು ದೊರೆಯಬಹುದೇನೋ ಎಂದೂ, ಬರೆದ ನಂತರ ಪ್ರವಾಸಿಗಳು ಆ ಸ್ಥಳದಲ್ಲಿ ಸ್ವೇಚ್ಛೆಯಾಗಿ ರ್ತಿಸುವುದನ್ನು ಕಂಡಾಗ ಯಾಕಾದರೂ ಬರೆದೆವೋ, ಅವರ ಪಾಡಿಗವರು ಸುಖವಾಗಿದ್ದರು ಎಂದೂ ಅನ್ನಿಸುತ್ತಿರುತ್ತದೆ. ಬದುಕಿನ ಅಸ್ಪಷ್ಟ ಗೆರೆಗಳ ಛಿuಣ oಜಿಜಿ ಠಿoiಟಿಣ ಎಲ್ಲಿರುತ್ತದೆ ಎನ್ನುವುದೇ ನಮಗೆ ಸರಿಯಾಗಿ ಕಾಣಿಸುವುದಿಲ್ಲ. ಬರೆದರೆ ಇನ್ಸೆನ್ಸಿಟಿವ್ ಆದೆವೇನೋ ಎನ್ನಿಸುತ್ತದೆ, ಬರೆಯದಿದ್ದರೆ ಇದನ್ನೆಲ್ಲ ಲೋಕದೆದುರು ತೆರೆದಿಡಲು ಶಕ್ತರಾಗಿದ್ದೂ, ತೆರೆದಿಡದೆ ತಪ್ಪು ಮಾಡಿದೆವೇನೋ ಅನ್ನಿಸುತ್ತದೆ… ಒಟ್ಟಿನಲ್ಲಿ ರ್ಥವಾಗುವುದಿಲ್ಲ ಯಾವುದು, ಎಲ್ಲಿಂದ, ಎಲ್ಲಿಯವರೆಗೆ ಎನ್ನುವ ಮನಸ್ಸಿನ ತಾಕಲಾಟಗಳು. ಆದರೆ ರಶೀದ್ ಇಂಥ ಬರಹಗಳನ್ನು ನನ್ನೆದುರು ಇಡುವುದರಿಂದ ನಾನು ಹೆಚ್ಚು ಮನುಷ್ಯಳಾಗುತ್ತ ಹೋದೆ ಅನ್ನುವುದು ಈ ರೀತಿಯ ಚಿತ್ರಣಗಳನ್ನು ಬರೆಯುವುದರ ಸರ್ಥಕತೆ ಅನ್ನಬಹುದಲ್ಲವಾ? ನನ್ನಂತೆ ಎಷ್ಟು ಜನರು ಹೀಗೆ ಕಥೆಗಳಿಗೆ ಕಿವಿಯಾಗುತ್ತಾ, ಹೆಚ್ಚು ಮನುಷ್ಯರಾಗುತ್ತಾ ಇದ್ದಾರೋ! ಅಸಲಿಗೆ ಗೊಂದಲಗಳಿಂದ, ನೋವಿನಿಂದ ತುಂಬಿದ ಜಗತ್ತಿನಲ್ಲಿ ಇರುವವರಿಗೆ ಹಲವಾರು ಬಾರಿ ಕೇಳಲೊಂದು ಕಿವಿ ಬೇಕಿರುತ್ತದೆ. ಕಷ್ಟಗಳೆಂದರೆ ಕೇವಲ ಹಣದ್ದಲ್ಲ, ಊಟ-ಬಟ್ಟೆಯದ್ದಲ್ಲ… ಎಷ್ಟೋ ಸಾವಿರ ಕಷ್ಟಗಳಿರುತ್ತವೆ ಜಗತ್ತಿನಲ್ಲಿ. ಈ ‘ಅರಮನೆಯ ನಗರಿಯ ಉಳಿದ ಚಿತ್ರಗಳಲ್ಲಿ’ ಅಂಥ ಅನೇಕ ಕಥೆಗಳಿವೆ ಎಂದಿದ್ದಾರೆ.
Abdul Rasheed |
0 average based on 0 reviews.