
ಈ ಸಂಪುಟದಲ್ಲಿ ಬಿ. ಎಂ. ಶ್ರೀಕಂಠಯ್ಯ ನವರಿಂದ ಹಿಡಿದು ಹೊಸ ತಲೆಮಾರಿನ ವರೆಗೂ ಹಲವು ಮಂದಿ ಸಾಹಿತಿಗಳು ಎಲ್.ಎಸ್. ಶೇಷಗಿರಿ ರಾವ್ ಅವರ ಹಲವು ಮುಖಗಳನ್ನು ಪರಿಚಯಿಸಿದ್ದಾರೆ. ಅವರ ಸಾಹಿತ್ಯ ಸೇವೆಯ ಹಲವು ಮಗ್ಗುಲುಗಳ ವಿಮರ್ಶೆಗಳಿವೆ. ಅವರೊಂದಿಗೆ ಒಡನಾಡಿದ ಸಾಹಿತ್ಯಕ ಮತ್ತು ಸಾಹಿತ್ಯೇತರ ವ್ಯಕ್ತಿಗಳ ಆತ್ಮೀಯ ನೆನಪುಗಳಿದೆ. ಅವರು ಸಾಹಿತ್ಯಕವಾಗಿ ಕ್ರಿಯಾಶೀಲರಾಗಿದ್ದ ಅವಧಿಯಲ್ಲಿ ನಡೆಸಲಾಗಿದ್ದ ಹಲವು ಸಂದರ್ಶನಗಳ ಅಮೂಲ್ಯ ಸಂಗ್ರಹವಿದೆ. ಓದುಗರಿಗೆ ವಿವರಗಳನ್ನು, ಸಿದ್ದಿ-ಸಾಧನೆಗಳನ್ನು ಸಮಗ್ರವಾಗಿ ಪರಿಚಯ ಮಾಡಿಕೊಡಬಲ್ಲ ಈ ಸಂಪುಟವು ಸಾಹಿತ್ಯಾಸಕ್ತರಿಗಂತೂ ಸಂಗ್ರಹಯೋಗ್ಯವಾದ ಕೃತಿಯಾಗಿದೆ.
Category: | ಕನ್ನಡ |
Sub Category: | ಆತ್ಮಕಥೆ ಜೀವನ ಚರಿತ್ರೆ |
Author: | ಡಾ. ಟಿ.ಎನ್. ವಾಸುದೇವ ಮೂರ್ತಿ | Dr T N Vasudevamurthy |
Publisher: | SAHITYALOKA |
Language: | Kannada |
Number of pages : | 364 |
Publication Year: | 2025 |
Weight | 400 |
ISBN | |
Book type | Paperback |
Delivery between 2-6 Days
No returns accepted. Please refer our full policy
Your payments are 100% secure
ಆದರ್ಶ ಜೀವನ ನಡೆಸಿ ನಮ್ಮನ್ನು ಆಗಲಿದ ಶ್ರೇಷ್ಠರನ್ನು ಸ್ಮರಿಸುವುದು ಒಂದು ಸಂಗತ ಸಂಸ್ಕೃತಿ, ಈ ಸ್ಮರಣೆ ಅವರು ಲೋಕಕ್ಕೆ ಬೇಕಾದ, ಸಲ್ಲಿಸಿದ ಸೇವೆಗೆ, ಅವರು ನೀಡಿರುವ ಪ್ರಬುದ್ಧ ಸಾಹಿತ್ಯ ಕೊಡುಗೆಗೆ ನಾವು ಅರ್ಪಿಸುವ ಕೃತಜ್ಞತೆಯಲ್ಲದೆ ಬೇರೆಯಲ್ಲ, ಇಹದಲ್ಲಿ ಜನಿಸಿದವರಿಗೆಲ್ಲ ಜನ್ಮಶತಮಾನೋತ್ಸವವೆನ್ನುವುದು ಇದ್ದದ್ದೇ. ಆದರೆ, ಈ ಶತಮಾನದ ಸ್ಮರಣೆ ಎಲ್ಲರಿಗೂ ಸಲ್ಲುತ್ತದೆ ಎಂದು ಹೇಳಲಾಗುವುದಿಲ್ಲ. ಯಾರು ತಾವು ಬದುಕಿದ್ದಾಗ ಲೋಕಕ್ಕೆ ಬೇಕಾಗಿರುತ್ತಾರೋ, ಯಾರು ಆಗಲಿದ ಮೇಲೂ ಜನಮನದಲ್ಲಿ ಉಳಿಯುವಂತಹ ಕೊಡುಗೆ ನೀಡಿರುತ್ತಾರೋ ಅಂತಹವರು ಮಾತ್ರ ಇಂತಹ ಸ್ಮರಣೆಗೆ ಸಲ್ಲುತ್ತಾರೆ. ಸಜ್ಜನಿಕೆ ಎಂದರೇನು, ಸಂಸ್ಕೃತಿ ಎಂದರೇನು, ವಿದ್ವತ್ತು ಎಂದರೇನು, ವಿಮರ್ಶೆ ಎಂದರೇನು, ಎಂಬೆಲ್ಲ ಪ್ರಶ್ನೆಗಳಿಗೂ ಕೊಡಬಹುದಾಗಿದ್ದ ಒಂದೇ ಉತ್ತರವೆಂದರೆ, ಪ್ರೊ. ಎಲ್. ಎಸ್. ಶೇಷಗಿರಾವ್. ಅವರು ಇಂಗ್ಲಿಷ್ ಭಾಷೆಯಲ್ಲೂ ಪ್ರಬುದ್ಧರಿದ್ದರೂ ಕನ್ನಡದ ಬಗೆಗಿನ ಅವರ ಅಭಿಮಾನ ಅದಮ್ಯವಾದದ್ದು. ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಮನ್ನಣೆ ದೊರಕಿಸುವಲ್ಲಿ ಅವರು ಸಿದ್ಧಪಡಿಸಿದ ವರದಿಯದೇ ಮುಖ್ಯ ಪಾತ್ರವೆಂದು ಬೇರೆ ಹೇಳಬೇಕಾಗಿಲ್ಲ. ಎಲ್.ಎಸ್.ಎಸ್. ಅವರ ಅಧ್ಯಯನ-ಅಭಿವ್ಯಕ್ತಿ ಎರಡೂ ಗಾಢ-ಗಂಭೀರ ಅವರು ಗ್ರಂಥಗಳನ್ನು ಓದುವಾಗ ಅದರಲ್ಲಿ ಬರುವ ಆಗೋಚರ ವ್ಯಕ್ತಿಗಳೊಡನೆ ಸಂವಾದಿಸುತ್ತಿದ್ದರು. ಗೋಚರ ವ್ಯಕ್ತಿಗಳೊಡನೆ ಅನುಸಂಧಾನ ಮಾಡುತ್ತಿದ್ದರು. ಅದರಿಂದಾಗಿಯೇ ಅವರ ಮಾತು-ಬರಹಗಳಲ್ಲಿ ಅಂತಃಸತ್ವ ತುಂಬಿಕೊಂಡಿರುವುದು. "ತುಕ್ಕು ಹಿಡಿದು ಹೋಗುವುದಕ್ಕಿಂತ ಸವೆದು ಹೋಗುವುದು ಉತ್ತಮ" ಎಂದು ಭಾವಿಸಿದ್ದ ಅವರು ತಾವು ಒಪ್ಪಿಕೊಂಡ ಕೆಲಸವನ್ನು ಒಪ್ಪವಾಗಿ ಮಾಡುತ್ತಿದ್ದರು. 'ಹತ್ತಿದರೆ ಹಿಮಾಲಯವನ್ನು ಹತ್ತು, ಬಿತ್ತಿದರೆ ಉತ್ತಮ ಬೀಜ ಬಿತ್ತು, ಹಚ್ಚಿದರೆ ನಂದಾದೀಪ ಹಚ್ಚು' ಎಂಬ ಅನುಭವದ ಮಾತಿನಂತೆ ಅವರು ಸಾಹಿತ್ಯ ಕ್ಷೇತ್ರದ ಹಿಮಾಲಯವನ್ನು ಹತ್ತಿದವರು. ಕನ್ನಡ ಓದುಗರ ಮನಸ್ಸಿನಲ್ಲಿ ಸ್ವಾಭಿಮಾನದ ಬೀಜ ಬಿತ್ತಿದವರು. ತಮ್ಮ ಸೃಜನಶೀಲ ಬರಹಗಳಿಂದ ಜ್ಞಾನದ ಶಾಶ್ವತ ದೀಪ ಹಚ್ಚಿದವರು. ಇಂತಹ ಶ್ರೇಷ್ಠ ಚಿಂತಕರ ಸಂಬಂಧ ನನಗಿತ್ತು ಎನ್ನುವುದೇ ಒಂದು ಅಭಿಮಾನದ ಸಂಗತಿ.
ಡಾ. ಟಿ.ಎನ್. ವಾಸುದೇವ ಮೂರ್ತಿ | Dr T N Vasudevamurthy |
0 average based on 0 reviews.