| Category: | ಕನ್ನಡ |
| Sub Category: | ಅಂಕಣ ಬರಹಗಳು |
| Author: | ಬಂಜಗೆರೆ ಜಯಪ್ರಕಾಶ | Banjagere Jayaprakasha |
| Publisher: | Srushti Publications |
| Language: | Kannada |
| Number of pages : | |
| Publication Year: | 2025 |
| Weight | 300 |
| ISBN | |
| Book type | Paperback |
Delivery between 2-6 Days
No returns accepted. Please refer our full policy
Your payments are 100% secure
ಚಂದ್ರನೊಳಗೆ ಕಾಣುವ ಆಕೃತಿಯನ್ನು ಮನುಷ್ಯ ಎಂದೂ, ಅದೇ ಸಮಯದಲ್ಲಿ ಮೊಲ ಎಂದೂ ಕೆಲವರು ಹೇಳುತ್ತಾರೆ. ಮತ್ತೆ ಕೆಲವರ ಆಲೋಚನೆಯಲ್ಲಿ ಅದು ಬಾತುಕೋಳಿ ಹಾಗೂ ಮೊಲ. ಹಿಂದೂಗಳ ದೃಷ್ಟಿ ಒಂದೇ ಅಂಶದ ಮೇಲೆ ಎರಡು ವಿಧಗಳಾಗಿ ಹೇಗೆ ಇರುತ್ತದೆಂಬುದಕ್ಕೆ ಇದು ಒಂದು ರೂಪಕ. ಈ ಇಬ್ಬಗೆಯ ದೃಷ್ಟಿಯನ್ನು ಬಿಡಿಸಿ ಹೇಳುವುದೇ ಈ ಕೃತಿಯ ಉದ್ದೇಶ. ವೆಂಡಿ ಡೊನಿಗರ್ ******* ಹಿಂದೂ ಧರ್ಮ ಎನ್ನಲಾಗುವುದು ವಾಸ್ತವವಾಗಿ ಒಂದು ಮತವಾಗಿರದೆ, ಒಂದು ಸಂಕೀರ್ಣ, ವೈಶಿಷ್ಟ್ಯಪೂರ್ಣ ಸಂಸ್ಕೃತಿಯಾಗಿದೆ. ಇದಕ್ಕೆ ಯಾರೋ ಕೆಲವರು ಮಾತ್ರ ವಾರಸುದಾರರಲ್ಲ, ವಕ್ತಾರರೂ ಅಲ್ಲ. ಇಂತಹದೊಂದು ಸಾಗರ ಸದೃಶ ಪ್ರಾಚೀನ ಬದುಕಿನ ಕ್ರಮವನ್ನು ಇಷ್ಟು ಮಾತ್ರವೇ ಎಂದು ಹೇಳಿ ಮುಗಿಸುವುದು ಮೂರ್ಖತನ. ಇದು, ಹೌದು-ಅಲ್ಲ; ಹೌದು-ಅಲ್ಲ ಎರಡೂ ಹೌದು; ಹೌದು-ಅಲ್ಲ ಎರಡೂ ಅಲ್ಲ ಹಾಗೂ ಅದ್ಯಾವುದೂ ಅಲ್ಲ. ಹೀಗೆ ಅನೇಕಾಂತಗಳು, ಕೋನಗಳು, ಸಮೃದ್ಧ ತತ್ತ್ವದರ್ಶನಗಳು, ಸ್ಮೃತಿಗಳು, ಕಥನಗಳು ಒಂದರೊಳಗೊಂದು ಬೆರೆತು ಇತಿಹಾಸವಾಗಿದೆ. ಐತಿಹ್ಯವೂ ಆಗಿದೆ. ಇತಿಹಾಸ ಮಾತ್ರ ಖಚಿತ, ಐತಿಹ್ಯ ಕೇವಲ ಕಲ್ಪನಾತ್ಮಕ ಎನ್ನಲೂ ಬರದ ಹಾಗೆ ಎಷ್ಟೋ ಆಯಾಮಗಳಲ್ಲಿ ಇವು ಮುಪ್ಪುರಿಗೊಂಡಿವೆ. ಇದೆಲ್ಲವನ್ನೂ ತೆರೆದ ಕಣ್ಣಿಂದ, ಮುಕ್ತ ಮನಸ್ಸಿನಿಂದ ದರ್ಶಿಸುವುದು ಸಾಕ್ಷಾತ್ಕಾರಕ್ಕೆ ಒಂದು ಸಮಾನವಾದ ಕ್ರಿಯೆ. ಬಹುಶಃ ಅದು ಅದರ ರೂಪಕಾರ್ಥದಲ್ಲಿ ವಿಶ್ವರೂಪ ದರ್ಶನ. ಡಾ. ಬಂಜಗೆರೆ ಜಯಪ್ರಕಾಶ
ಬಂಜಗೆರೆ ಜಯಪ್ರಕಾಶ | Banjagere Jayaprakasha |
0 average based on 0 reviews.