| Category: | ಕನ್ನಡ |
| Sub Category: | ಕವನಗಳು |
| Author: | ಸುಮಾ ರಮೇಶ್ | Suma Ramesh |
| Publisher: | ಸಾಹಿತ್ಯಲೋಕ ಪಬ್ಲಿಕೇಷನ್ಸ್ | Sahityaloka Publication |
| Language: | Kannada |
| Number of pages : | |
| Publication Year: | 2025 |
| Weight | 300 |
| ISBN | |
| Book type | Paperback |
Delivery between 2-6 Days
No returns accepted. Please refer our full policy
Your payments are 100% secure
ಈ ಸಂಕಲನದಲ್ಲಿರುವ ಬರಹಗಳು ಮಲ್ಲಿಗೆಯಂತೆಯೇ ಅರಳಿವೆ. ಭಾಷೆ ಸರಳ ಸುಂದರವಾಗಿದೆ. ಅಲ್ಲಲ್ಲಿ ಗಾದೆ ಮಾತುಗಳು, ನುಡಿಗಟ್ಟುಗಳು, ಸಿನಿಮಾದ ಹಾಡಿನ ಸಾಲುಗಳು ಸಂದರ್ಭಾನುಸಾರವಾಗಿ ಬಳಕೆಯಾಗಿ ವಿಷಯದ ಸಮರ್ಥನೆಗೆ ಪುಷ್ಠಿ ನೀಡುತ್ತವೆ. ಎರಡು ಭಾಷೆಗಳ ಪದಗಳನ್ನು ಒಟ್ಟಿಗೆ ಸೇರಿಸಿ ಅರ್ಥಪೂರ್ಣವಾಗಿ ಬಳಸಿರುವ ಕ್ರಿಯೆ ಅತ್ಯಂತ ಕುತೂಹಲಭರಿತ ಹಾಗು ಕಲಾಪೂರ್ಣತೆಯಿಂದ ಕೂಡಿದೆ. ಹಾಸ್ಯವನ್ನು ಎಲ್ಲಿಯೂ, ಯಾವುದೇ ಅಪಾರ್ಥತೆಗೆ ಆಸ್ಪದವಾಗದಂತೆ ಹೆಣೆಯುವ ಸೃಜನಶೀಲ ಕ್ರಿಯೆ ಇರುವವರಿಂದ ಮಾತ್ರ ಇದು ಸಾಧ್ಯ. ಅಂತಹ ಕ್ರಿಯಾಶೀಲವಾದ ಬರವಣಿಗೆಯ ಮೂಲಕ ಸುಮಾ ರಮೇಶ್ ಅವರು ತಮ್ಮ ಸೃಜನಶೀಲತೆಯನ್ನು ಈ ಕೃತಿಯಲ್ಲಿ ತಂದಿದ್ದಾರೆ. ಇಲ್ಲಿಯ ಬರಹಗಳಲ್ಲಿ ಲಘು ಹಾಸ್ಯವಿದೆ, ವಿಡಂಬನೆಗಳಿವೆ. ಆದರೆ ಹಾಸ್ಯದಲ್ಲಿ ವ್ಯಂಗ್ಯವಿಲ್ಲ, ವಿಡಂಬನೆಗಳಲ್ಲಿ ವಕ್ರೋಕ್ತಿಯಿಲ್ಲ. ನಗುವಿನ ಒಳಗೆ ವಾಸ್ತವಿಕತೆಯ ಅರಿವನ್ನು ತೆರೆದು ತೋರುವುದು ಕೂಡ ಇವರ ಶೈಲಿಯ ಕೌಶಲ್ಯವೇ ಆಗಿದೆ. ನಗುವಿನೊಳಗೆ ಚಿಂತನ, ಮಂಥನ, ಸಮಾಜದ ವಿಮರ್ಶೆ, ಅರ್ಥಗರ್ಭಿತ ವಿಚಾರಗಳು ಇವೆ. ವರ್ತಮಾನಕ್ಕೆ ಬೇಕಾದಂತಹ ಹಲವಾರು ಮೌಲಿಕ ಸಂಗತಿಗಳು ಇವರ ಬರಹದ ಮೂಲಕ ಅಧಿಕೃತತೆಯನ್ನು ಪಡೆದುಕೊಂಡಿವೆ. ದಿನನಿತ್ಯದ ಬದುಕಿನ ರೀತಿ ನೀತಿಗಳ ಒಳಮರ್ಮಗಳು, ಕಾಡುವ ಕೆಲವು ಪ್ರಶ್ನೆಗಳಿಗೆ ಇಲ್ಲಿಯ ಬರಹಗಳ ಮೂಲಕ ಉತ್ತರ ದೊರೆಯುತ್ತದೆ. ಇಲ್ಲಿಯ ಹಾಸ್ಯ ಕೇವಲ ಹಾಸ್ಯಕ್ಕಾಗಿ ಅಲ್ಲ, ಅದರ ಹಿಂದೆ ಜೀವನದ ಹಲವಾರು ಗಹನವಾದ ಸಂದರ್ಭಗಳು ಪರಿಪೂರ್ಣತೆ ಪಡೆಯುವಲ್ಲಿ ಯಶಸ್ವಿಯಾಗಿವೆ.
ಡಾ. ಹಂಪನಹಳ್ಳಿ ತಿಮ್ಮೇಗೌಡರು ವಿಶ್ರಾಂತ ಪ್ರಾಧ್ಯಾಪಕರು ಹಾಗು ಸಾಹಿತಿಗಳು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು
ಸುಮಾ ರಮೇಶ್ | Suma Ramesh |
0 average based on 0 reviews.