• ಯಾವುದೇ ಕನ್ನಡ ಸ್ತಕಕ್ಕಾಗಿ ಸಂಪರ್ಕಿಸಿ
  • Call Us : +91 7022122121 / +91 8861212172

  • ಯಾವುದೇ ಕನ್ನಡ ಪುಸ್ತಕಕ್ಕಾಗಿ ಸಂಪರ್ಕಿಸಿ    
  • Call Us : +91 7022122121 / +91 8861212172

ಆರಂಕುಶವಿಟ್ಟೊಡಂ | Arankushavittodam

Book short description

ಪವನ್ ಮೌರ್ಯ ಚಕ್ರವರ್ತಿ ಅವರು ಬರೆದಿರುವ ಆನೆಗಳನ್ನು ಕುರಿತ ' ಆರಂಕುಶವಿಟ್ಟೊಡಂ... ' ಎಂಬ 16 ಲೇಖನಗಳ ಪುಸ್ತಕದಲ್ಲಿ ಆನೆಗಳಿಗೆ ಸಂಬಂಧಿಸಿದಂತೆ ಪ್ರಾಚೀನ ಕಾಲದಿಂದ ಆಧುನಿಕ ಕಾಲದವರೆಗಿನ ವ್ಯಾಪ್ತಿಯನ್ನು ಇಟ್ಟುಕೊಂಡು ಅಧ್ಯಯನ ನಡೆಸಿದ್ದಾರೆ. ಇದುವರೆವಿಗೆ ಆನೆಗಳ ಬಗ್ಗೆ ಬಂದಿರುವ ಅನೇಕ ಕೃತಿಗಳನ್ನು ಓದಿ ಕ್ಷೇತ್ರ ಕಾರ್ಯ ಮಾಡಿ ಈ ಕೃತಿಯನ್ನು ರಚಿಸಿದ್ದಾರೆ. ಇದರೊಂದಿಗೆ ಸಂದರ್ಶನಗಳ ಮೂಲಕ ಪಡೆದ ಮಾಹಿತಿಯನ್ನು ಬಳಸಿ ಹೆಚ್ಚಿನ ವಿವರಗಳನ್ನು ಆನೆಗಳ ಬಗ್ಗೆ ಹಾಗೂ ಆನೆ ಪಳಗಿಸುವವರ ಬಗ್ಗೆ ಬರೆದಿದ್ದಾರೆ. ಚಕ್ರವರ್ತಿ ಅವರು ಈ ಕೃತಿ ರಚನೆಗಾಗಿ ಸಂಸ್ಕೃತ , ಕನ್ನಡ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಆನೆಗಳಿಗೆ ಸಂಬಂಧಿಸಿದಂತೆ ಬರೆದಿರು ಬಂದಿರುವ ಹಲವಾರು ಕೃತಿಗಳನ್ನು ಪರಾಮರ್ಶಿಸಿ ಅತ್ಯಅಮೂಲ್ಯ ಸಂಗತಿಗಳನ್ನು ಹೆಕ್ಕಿತೆಗೆದು ಬಳಸಿಕೊಂಡಿದ್ದಾರೆ. ಇವುಗಳಲ್ಲಿ ದೇಶಿಯವಾಗಿ ಆನೆಗಳನ್ನು ಸಾಕುತ್ತಿದ್ದ ವಿಧಾನ ಅವುಗಳಿಗೆ ಕಾಯಿಲೆಯಾದಾಗ ನೀಡುತ್ತಿದ್ದ ಚಿಕಿತ್ಸಾ ಪದ್ಧತಿಯನ್ನು ವಿವರವಾಗಿ ತಿಳಿಸಿದ್ದಾರೆ. ನಾರಾಯಣ ದೀಕ್ಷಿತ್ ಎಂಬುವವರು ಬರೆದಿರುವ ಗಜಗ್ರಹಣ ಕೃತಿ , ಮಲಯಾಳಂ ಭಾಷೆ ಗಜರಕ್ಷಾತಂತ್ರ , ಪಾಲಕಾಪ್ಯಮುನಿ ವಿರಚಿತ ಗಜಶಾಸ್ತ್ರ ಮುಂತಾದ ಕೃತಿಗಳಿಂದ ಪಾರಂಪರಿಕವಾಗಿ ಆನೆಗಳು ವಾಸಿಸುವ ಸ್ಥಳ , ಬದುಕುವ ರೀತಿ , ಆಮೆಗಳನ್ನು ಹಿಡಿಯುವ ಮತ್ತು ಪಳಗಿಸುವ ವಿಧಾನ ಮೊದಲಾದ ವಿವರಗಳನ್ನು ಈ ಕೃತಿಗಳಲ್ಲಿ ತಿಳಿಸಿದ್ದು , ಈ ಎಲ್ಲಾ ಮಾಹಿತಿಗಳನ್ನು ತಮ್ಮ ಕೃತಿಯಲ್ಲಿ ಸಮರ್ಥವಾಗಿ ಬಳಸಿಕೊಂಡಿದ್ದಾರೆ. ಇದಲ್ಲದೆ ಶಾಸನಗಳಲ್ಲಿ ಆನೆಗಳ ಬಗ್ಗೆ ಬಂದಿರುವ ವರ್ಣನೆ , ಯುದ್ಧಗಳಲ್ಲಿ ಅವುಗಳ ವರ್ತನೆಯ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ..... ಆನೆಗಳನ್ನು ಕುರಿತಂತೆ ಕೆಲವು ಡಾಕ್ಯುಮೆಂಟರಿಗಳು ಬಂದಿದ್ದು , ಅವುಗಳ ನಿಗೂಢ ಬದುಕನ್ನು ಜಗತ್ತಿಗೆ ತೆರೆದಿಟ್ಟಿವೆ . ಲೇಖಕರು ಬಹು ಸೂಕ್ಷ್ಮಜೀವಿ ಹಾಗೂ ಸ್ನೇಹಜೀವಿಯಾದ ಆನೆಗಳ ಬಗ್ಗೆ ಅನೇಕ ವಿವರಗಳನ್ನು ಒಂದಡೆ ತಂದು ಈ ಪುಸ್ತಕ ರೂಪದಲ್ಲಿ ನೀಡಿದ್ದಾರೆ.‌ ಇದರೊಂದಿಗೆ ಆನೆಗಳೊಂದಿಗೆ ತಮ್ಮ ಜೀವನವನ್ನು ಕಳೆಯುತ್ತಿರುವ ಬಂಡಿಪುರ , ಮದುಮಲೈ , ನೀಲಗಿರಿಬೆಟ್ಟ ಪ್ರದೇಶ , ಬಿಳಿಗಿರಿರಂಗನ ಬೆಟ್ಟ , ಮಲೈ ಮಹದೇಶ್ವರ ಬೆಟ್ಟ ಮೊದಲಾದ ಕಡೆಗಳಲ್ಲಿ ವಾಸಿಸುವ ಜೇನು ಕುರುಬ , ಬೆಟ್ಟ ಕುರುಬ ಮೊದಲಾದ ಕಾಡಿನ ಮಕ್ಕಳು ಹಾಗೂ ಅವರ ಮತ್ತು ಆನೆಗಳ ನಡುವಿನ ಸಂಬಂಧಗಳ ಬಗ್ಗೆ ಅವರೊಡನೆ ಸಂದರ್ಶನ ಮಾಡಿ ವಿಷಯವನ್ನು ಸಂಗ್ರಹಿಸಿದ್ದಾರೆ. ಹೀಗೆ ಅಪರೂಪದ ವಿಷಯಗಳನ್ನು ತೆಗೆದುಕೊಂಡು ನಾನಾ ಆಯಾಮಗಳಲ್ಲಿ ಆನೆಗಳ ಬಗ್ಗೆ ವಿವರ ನೀಡಿ ಪುಸ್ತಕ ರಚಿಸಿರುವ ಪವನ್ ಮೌರ್ಯ ಚಕ್ರವರ್ತಿ ಅವರು ಅಭಿನಂದನಾರ್ಹರು.

Category: ಕನ್ನಡ
Sub Category: ಕಥಾ ಸಂಕಲನ
Author:
Publisher: Kadamba Prakashana
Language: Kannada
Number of pages : 280
Publication Year: 2023
Weight 400
ISBN 9789395129084
Book type Paperback
share it
100% SECURE PAYMENT

₹300 20% off

₹240

quantity

Pan India Shipping

Delivery between 2-6 Days

Return Policy

No returns accepted. Please refer our full policy

Secure Payments

Your payments are 100% secure

ಆರಂಕುಶವಿಟ್ಟೊಡಂ | Arankushavittodam
₹300   ₹240  20% off