ಕನ್ನಡ ಮ್ಯಾಕ್ ಬೆತ್

Original price was: ₹ 200.Current price is: ₹ 178.

SKU: Kannada Macbeth Category:

Secure Payments

Your payments are 100% secure

Pan India Shipping

Delivery between 2-8 Days

Return Policy

No returns accepted. Please refer our full policy

Book Details

Weight .2 kg
Author
ISBN
Page Nos
Publications

SYNOPSIS

ಮ್ಯಾಕ್‌ಬೆತ್ ನಾಟಕವು ಷೇಕ್ಸ್‌ಪಿಯರನ ಅತ್ಯಂತ ಪ್ರಸಿದ್ಧ ಕೃತಿಗಳಲ್ಲೊಂದಾಗಿರುವುದು… ಇಂಗ್ಲಿಷ್ ಜನತೆಯ ಆದರ್ಶ ಕವಿ ಷೇಕ್ಸ್‌ಪಿಯರ್.
ಮ್ಯಾಕ್‌ಬೆತ್ತನ ಕಥೆ ಪಾಪಕಥೆ. ಇದನ್ನು ಬರೆಯುವುದರಲ್ಲಿ ಷೇಕ್ಸ್‌ಪಿಯರನ ಉದ್ದೇಶ ಪಾಪದ ಭಯಂಕರತೆಯನ್ನು ತೋರಿಸಬೇಕೆಂಬುದೋ, ಅಥವಾ ಪಾಪದ ಅನಿವಾರ್ಯತೆಯನ್ನು ತೋರಿಸಬೇಕೆಂಬುದೋ, ನಾನು ತಿಳಿಯಲಾರೆ, ಪ್ರಪಂಚದ ಮಹಾಕವಿಗಳಲ್ಲಿ ಧರ್ಮವಿಚಾರದ ದೃಷ್ಟಿಯಿಂದ ಎರಡು ಜಾತಿಗಳಿರುವಂತೆ ತೋರುತ್ತದೆ: (೧) ಕೆಲವರು ರಹಸ್ಯದರ್ಶಕರು, (೨) ಕೆಲವರು ಸಂದೇಶದಾಯಕರು. ಷೇಕ್ಸ್‌ಪಿಯರು ಮುಖ್ಯವಾಗಿ ಜೀವನರಹಸ್ಯ ಪ್ರದರ್ಶಕನು; ಎಂದರೆ ಆ ಮನೋವಾಗತೀತವಾದ ರಹಸ್ಯವನ್ನು ನಮ್ಮಗಳಿಗೆ ಗೋಚರವಾಗಿಸುವುದು ಮನುಷ್ಯಶಕ್ತಿಗೆ ಎಷ್ಟು ಮಾತ್ರ ಸಾಧ್ಯವೆಂದು ಇದುವರೆಗೂ ತೋರಿದೆಯೋ ಅಷ್ಟು ಮಾತ್ರ ಗೋಚರ ಮಾಡಿಸಿರುವನು. ಮನುಷ್ಯನ ಜೀವನಪಥದಲ್ಲಿ ಎಂಥ ಏರುತಗ್ಗುಗಳಿವೆ; ಎಷ್ಟು ಅಡ್ಡದಾರಿ ಸೀಳುದಾರಿಗಳಿವೆ; ಎಂಥೆಂಥ ಸಂದುಗಳೂ ಇಕ್ಕಟ್ಟುಗಳೂ ಇವೆ; ಎಷ್ಟು ಮಟ್ಟೂ ಎಷ್ಟು ಹುಸಿಬೆಳಕೂ ಸೇರಿವೆ ಎಂಬೀ ವಿಷಮ ಸನ್ನಿವೇಶಗಳನ್ನು ಅವನು ದಿಕ್ಷದರ್ಶನ ಮಾಡಿ, ಜೀವನವೆಂಬ ಗಂಭೀರಗಾರದ ಬಾಗಿಲನ್ನು ಒಂದು ಕ್ಷಣ ತೆರೆದು ತೋರಿಸಿ, ನಮಗೆ ತನ್ನ ಉಪದೇಶವೇನೆಂಬುದನ್ನು ಮಾತ್ರ ಸ್ಪಷ್ಟಾಕ್ಷರಗಳಲ್ಲಿ ಉಸಿರದೆ ನಿಂತಿರುತ್ತಾನೆ. ಆಶೆ ನಮ್ಮ ಸ್ವಭಾವದಲ್ಲಿ ಹೇಗೆ ಅಡಗಿಕೊಂಡಿರುತ್ತದೆ, ಹೊರಗಣ ಸಂದರ್ಭ ಸನ್ನಿವೇಶಗಳು ಅದನ್ನು ಹೇಗೆ ಕೆಣಕಿ ಪ್ರೋತ್ಸಾಹಿಸುತ್ತವೆ; ಎಚ್ಚತ್ತು ಕೆರಳಿದ ಬಳಿಕ ಆ ಆಶೆ ಹೇಗೆ ನಮ್ಮ ಮೇಲೆ ಸವಾರಿಮಾಡುತ್ತದೆ ಎಂಬಿಷ್ಟನ್ನು ಚಿತ್ರಿಸುವುದರಿಂದ ಷೇಕ್ಸ್‌ಪಿಯರು ತೃಪ್ತನಾದಂತಿದೆ. ಆಶಾದೂಷಣೆಯೇ ಅವನ ಕಥೆಯ ಬೋಧನೆಯೆಂದು ನಾವು ಹೇಳಿದರೆ, ಅವನು ಅದಲ್ಲವೆನ್ನುವಂತಿಲ್ಲ. ಆದರೆ ಆಕೆ ಅಜಯ್ಯವೆಂಬುದೇ ಆ ಕಥೆಯ ಬೋಧನೆಯೆಂದೂ ಅವನು ಹೇಳಿದರೆ ನಾವು ಅದಲವೆನ್ನುವಂತಿಲ್ಲ.

ABOUT AUTHOR

ಡಿ ವಿ ಜಿ(ಮಾರ್ಚ್ ೧೭, ೧೮೮೭ - ಅಕ್ಟೋಬರ್ ೭, ೧೯೭೫) ಎಂಬ ಹೆಸರಿನಿಂದ ಪ್ರಸಿದ್ಧರಾದ ಡಾ. ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪನವರು ಕರ್ನಾಟಕದ ಪ್ರಸಿದ್ಧ ಸಾಹಿತಿ, ಪತ್ರಕರ್ತರು. ಹಲವು ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಇವರು ಕನ್ನಡದ ಆಧುನಿಕ ಸರ್ವಜ್ಞ ಎಂದೇ ಪ್ರಸಿದ್ಧರಾದವರು. ಡಿ.ವಿ.ಜಿ ಅವರು ೧೮೮೭, ಮಾರ್ಚ್ ೧೭ರಂದು ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ದೇವನಹಳ್ಳಿಯಲ್ಲಿ ಜನಿಸಿದರು. ದಿವಾನ್ ರಂಗಾಚಾರ್ಯ ಅವರ ಬಗ್ಗೆ    Read More...

Opinion of Others

There are no others opinion yet.

Customer Reviews

Reviews

There are no reviews yet.

Be the first to review “ಕನ್ನಡ ಮ್ಯಾಕ್ ಬೆತ್”

Your email address will not be published. Required fields are marked *

Related Products