ಗೀತ ಶಂಕುಂತಲ

Original price was: ₹ 100.Current price is: ₹ 89.

SKU: geeta shakuntala Category:

Secure Payments

Your payments are 100% secure

Pan India Shipping

Delivery between 2-8 Days

Return Policy

No returns accepted. Please refer our full policy

Book Details

Weight .2 kg
Author
Page Nos
ISBN
Publications

SYNOPSIS

ಕಾಳಿದಾಸ ಕವಿಯ ಶಾಕುಂತಲ ನಾಟಕದಲ್ಲಿಯ ಕೆಲವು ಸರಸ ಸಂದರ್ಭಗಳ ಗೀತಾನುವಾದಗಳು ಈ ಪುಸ್ತಕದಲ್ಲಿರತಕ್ಕವು. ಅಲ್ಲಿ ಸಂಸ್ಕೃತ ಪದ್ಯವೋ ವಚನವೋ ಆಗಿರುವುದು ಇಲ್ಲಿ ಕನ್ನಡ ಹಾಡಾಗಿದೆ.
ಕಾಳಿದಾಸನ ಸ್ವಾರಸ್ಯಗಳು ನೂರಾರು; ಅವು ಹತ್ತಾರುಬಗೆ, ಅವುಗಳಲ್ಲಿ ಹೆಚ್ಚಿನ ಭಾಗ ಶಾಕುಂತಲದವು. ಅಂಥ ಪ್ರಕರಣಗಳಲ್ಲಿ ಬಹಿರಂಗ ವರ್ಣನೆ ಸಂಭಾಷಣೆ- ಗಳನ್ನು ಒತ್ತಟ್ಟಿಗಿರಿಸಿ, ಅಂತರಂಗಸ್ಪಂದಕಗಳಲ್ಲಿ ತೀವ್ರಸ್ಪರ್ಶಿಯೆನ್ನಿಸಿದ ಕೆಲವನ್ನು ಇಲ್ಲಿ ರೂಪಗೊಳಿಸಿದೆ. ಚಿತ್ತವಿಸ್ತಾರ ಇಲ್ಲಿಯ ಮುಖ್ಯಾಶಯ.
ಕವಿಯ ಮೂಲವಾಕ್ಯದಲ್ಲಿ ಸ್ಪಷ್ಟವಾಗದೆ ಗೂಢವಾಗಿದೆಯೆಂದು ತನಗೆ ತೋರುವ ಧ್ವನಿಭಾವವನ್ನೂ ಅಂತರ್ಭಾವವನ್ನೂ ಸ್ಪುಟಪಡಿಸುವುದು ವ್ಯಾಖ್ಯಾನಕಾರನಿಗೆ ಸಂಪ್ರದಾಯದಿಂದ ಬಂದಿರುವ ಒಂದು ಅಧಿಕಾರ. ಹಾಗೆ ಇದು ಗೀತ ವ್ಯಾಖ್ಯಾನ. ಇದನ್ನು ಕಾಳಿದಾಸನ ಹೃದಯದ ಪ್ರತಿಬಿಂಬವೆಂದು ಹೇಳುವುದಕ್ಕಿಂತ, ಅನುವಾದಕನ ಹೃದಯದರ್ಪಣದಲ್ಲಿ ಪ್ರತಿಫಲಿಸಿದ ಕಾಳಿದಾಸೀಯ ಪ್ರತಿಬಿಂಬದ ಪ್ರತಿಬಿಂಬವೆಂದು ಹೇಳುವುದು ಸರಿಯಾದೀತು. ಆತನ ದೃಷ್ಟಿಯಲ್ಲಿದ್ದ ವಾಚಕ ಪ್ರೇಕ್ಷಕ ಸಮಾಜ ಆತನದು; ನನ್ನ ಸಮಾಜ ನನ್ನದು. ಎರಡರ ಮನಃಪರಿಪಾಕವೂ ಬುದ್ಧಿಸಂಸ್ಕಾರವೂ ಒಂದೇ ಮಟ್ಟದವೆಂದು ನಾನು ಹೇಳಲಾರೆ. ಕಾಳಿದಾಸನ ಮನೋಭಾವ ಇಂದಿನ ನನ್ನ ಜನ್ಮಕ್ಕೆ ಅಷ್ಟಿಷ್ಟಾದರೂ ತೋರಿಬರಬೇಕೆಂದು ನನ್ನ ಯೋಚನೆ.
ಕಾಳಿದಾಸನು ರಚಿಸಿದ ಸನ್ನಿವೇಶಗಳೂ ಅಲ್ಲಿ ವ್ಯಕ್ತಪಟ್ಟ ಭಾವಗಳೂ ನಮ್ಮ ಧ್ಯಾನಕ್ಕೆ ಇಷ್ಟವಾದವು ಹಿತಕರವಾದವು. ಆ ಭಾವಗಳನ್ನು ರಾಗವಿನ್ಯಾಸಕ್ಕೆ ಅಳವಡಿಸಿಕೊಂಡರೆ ಅದರಿಂದ ಧ್ಯಾನ ಮತ್ತಷ್ಟು ರುಚಿಸೀತೆಂದು ನನ್ನ ನಂಬಿಕೆ. ಕವಿತ್ವದ ರುಚಿ ಸಂಗೀತದ ಸಾಹಚರ್ಯದಿಂದ ದ್ವಿಗುಣಿತವಾಗುತ್ತದೆ ಎಂದು ವಾಲ್ಮೀಕಿ ಕಾಳಿದಾಸರುಗಳು ಸಾರಿದ್ದಾರೆ… ಸಾಹಿತ್ಯಕ್ಕೆ ಸಂಗೀತದಿಂದ ಆಗಬಹುದಾದ ಉಪಕಾರ ಇಂಥಾದ್ದು. ಅದು ಅಂತರಂಗದ ಭಾವಗ್ರಹಣಶಕ್ತಿಯನ್ನು ಸಿದ್ಧಗೊಳಿಸುತ್ತದೆ. ಅದರ ಸಹಕಾರದಿಂದ ಕಾಳಿದಾಸನ ನವುರಾದ ಆಶಯಗಳು ಸಾಮಾನ್ಯ ಜನಕ್ಕೆ ಹೆಚ್ಚು ಗ್ರಾಹ್ಯವಾದಾವೆಂಬ ಪ್ರತ್ಯಾಶೆಯಿಂದ ಆದವು ಈ ಗೀತಾನುವಾದಗಳು.

ABOUT AUTHOR

ಡಿ ವಿ ಜಿ(ಮಾರ್ಚ್ ೧೭, ೧೮೮೭ - ಅಕ್ಟೋಬರ್ ೭, ೧೯೭೫) ಎಂಬ ಹೆಸರಿನಿಂದ ಪ್ರಸಿದ್ಧರಾದ ಡಾ. ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪನವರು ಕರ್ನಾಟಕದ ಪ್ರಸಿದ್ಧ ಸಾಹಿತಿ, ಪತ್ರಕರ್ತರು. ಹಲವು ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಇವರು ಕನ್ನಡದ ಆಧುನಿಕ ಸರ್ವಜ್ಞ ಎಂದೇ ಪ್ರಸಿದ್ಧರಾದವರು. ಡಿ.ವಿ.ಜಿ ಅವರು ೧೮೮೭, ಮಾರ್ಚ್ ೧೭ರಂದು ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ದೇವನಹಳ್ಳಿಯಲ್ಲಿ ಜನಿಸಿದರು. ದಿವಾನ್ ರಂಗಾಚಾರ್ಯ ಅವರ ಬಗ್ಗೆ    Read More...

Opinion of Others

There are no others opinion yet.

Customer Reviews

Reviews

There are no reviews yet.

Be the first to review “ಗೀತ ಶಂಕುಂತಲ”

Your email address will not be published. Required fields are marked *

Related Products