ಗಂಗಪಾಣಿ

 249

SKU: gangapani Categories: ,

Secure Payments

Your payments are 100% secure

Pan India Shipping

Delivery between 2-8 Days

Return Policy

No returns accepted. Please refer our full policy

Book Details

Weight .4 kg
Author
Page Nos
Publications

SYNOPSIS

ಇದು ಕೇವಲ ಮನುಷ್ಯರ ಕತೆಯಲ್ಲ, ನೆಲದ ಕತೆ. ಒಂದು ಆವರಣದಲ್ಲಿನ ಯಾವುದಾದರೊಂದು ಸಂಬಂಧದ ಎಳೆಯನ್ನು ಜಗ್ಗಿದರೆ ಇಡೀ ಲೋಕವೇ ಜುಂ ಅನ್ನುತ್ತದೆ. ಕನ್ನಡದ ಬರಹ ಮತ್ತು ಬದುಕಿನಲ್ಲಿ ಏಕದ್ದೇ ಯಜಮಾನಿಕೆ ದೀರ್ಘಕಾಲ ನಡೆದು ಬಂತು. ಈಗಲೂ ಅದರದ್ದೇ ರಾಜಕಾರಣ. ಇಂತಹ ನಡೆಯನ್ನು ಸರಿ ದಿಕ್ಕಿಗೆ ತರುವ ಅದೆಷ್ಟೋ ಪ್ರಯತ್ನಗಳು ಚರಿತ್ರೆಯಲ್ಲಿ ಮಾತ್ರವಲ್ಲ; ವರ್ತಮಾನದಲ್ಲೂ ನಿರಂತರವಾಗಿ ನಡೆದೇ ಇವೆ. ಈ ಕಾದಂಬರಿ ಅಂತಹ ಒಂದು ಹೊಸ ಕೈಮರವನ್ನು ಆಯಕಟ್ಟಿನ ಜಾಗದಲ್ಲಿ ನೆಡುತ್ತಿದೆ.

– ಎಸ್. ನಟರಾಜ ಬೂದಾಳು

‘ಗಂಗಪಾಣಿ’ ಹಲವು ಕಾರಣಗಳಿಂದಾಗಿ ಇತ್ತೀಚಿನ ದಿನಗಳಲ್ಲಿ ಬಂದಂತಹ ಬಹುಮುಖ್ಯವಾದ ಕಾದಂಬರಿಗಳಲ್ಲಿ ಒಂದು. ‘ಹುಸಿ’ಯನ್ನೇ ‘ದಿಟ’ವೆಂದು ಆರಾಧಿಸುತ್ತಾ ಸಮಾಜದ ಅವನತಿಗೆ ನಾವೇ ಕಾರಣವಾಗುತ್ತಿರುವುದನ್ನು ತುಂಬಾ ಮಾರ್ಮಿಕವಾಗಿ ಅಭಿವ್ಯಕ್ತಿಗೊಂಡಿರುವ ಚಿತ್ರಗಳು ಕನ್ನಡ ಕಾದಂಬರಿಯ ಅವಿಸ್ಮರಣೀಯ ಚಿತ್ರಣಗಳ ಸಾಲಿಗೆ ‘ಗಂಗಪಾಣಿ’ಯನ್ನು ಸೇರಿಸುತ್ತವೆ. ಒಂದು ಕಾಲದ ಉತ್ಕೃಷ್ಟವಾದ ಕಲ್ಪನೆಯಲ್ಲಿ ವಾಸ್ತವದ ಕತೆಯಂತೆ ಸೋಜಿಗದ ಹಾಗೆ ಚಿತ್ರಿತವಾಗಿದೆ. ಇಲ್ಲಿ ಕತೆಯು ನಿರೂಪಣೆಯಾಗಿರುವುದಕ್ಕಿಂತಲೂ ಬದುಕೇ ಬರೆಯಲ್ಪಟ್ಟಿದೆಯೇನೋ ಎಂಬಂತಿದೆ.

ಎಚ್. ಆರ್. ರಮೇಶ

Opinion of Others

There are no others opinion yet.

Customer Reviews

Reviews

There are no reviews yet.

Be the first to review “ಗಂಗಪಾಣಿ”

Your email address will not be published. Required fields are marked *