• ಯಾವುದೇ ಕನ್ನಡ ಸ್ತಕಕ್ಕಾಗಿ ಸಂಪರ್ಕಿಸಿ
  • Call Us : +91 7022122121 / +91 8861212172
  • ಯಾವುದೇ ಕನ್ನಡ ಪುಸ್ತಕಕ್ಕಾಗಿ ಸಂಪರ್ಕಿಸಿ    
  • Call Us : +91 7022122121 / +91 8861212172
back

Publishers

Categories

Authors

Languages

Book Type

Clear All
Filter
ಹಕ್ಕಿ ಮತ್ತು ಹುಡುಗಿ | Hakki Mattu Hudugi

ವೀರಲೋಕ ಮತ್ತು ಪ್ರಜಾವಾಣಿ ಸಹೋಯೋಗದ ಈ ʼಕಾವ್ಯಸಂಕ್ರಾಂತಿ ಸ್ಪರ್ಧೆʼಗೆ ಬಂದಿದ್ದ ಸಾವಿರಾರು ಕವಿತೆಗಳಲ್ಲಿ ಈ ಆಯ್ದ 50 ಕವಿತೆಗಳು ನಮ್ಮ ಮುಂದೆ ಇದ್ದವು. ಈ ಸಂಕಲನದ ಪ್ರತಿ ಕವಿತೆಯೂ ಓದಿದಾಗ ವಿಶೇಷ ಅನಿಸಿದೆ. ಅಂತಿಮವಾಗಿ ಆರು ಕವಿತೆಗಳನ್ನು ಆಯ್ಕೆ ಮಾಡುವುದು ನಿಜವಾಗಿಯೂ ಸವಾಲಿನದ್ದಾಗಿತ್ತು. ಯಾವುದೇ ಕವಿಯನ್ನು ತೂಕ ಮಾಡಲು ಸಾಧ್ಯವಿಲ್ಲ. -ಎಚ್‌.ಎಸ್‌.ವೆಂಕಟೇಶಮೂರ್ತಿ, ತೀರ್ಪುಗಾರರು

₹150   ₹113

ನೀಲಿ ಶಾಯಿಯ ಕಡಲು | Neeli Shayiya Kadalu

ಗೊತ್ತಿದೆ, ಗೊತ್ತಾಗುತ್ತಿದೆ ಎಂಬ ಭಾಸವನ್ನು ಹುಟ್ಟಿಸುತ್ತಲೆ ಗೊತ್ತಿಲ್ಲದ ವಿಸ್ತಾರದ ಕಡೆಗೆ ಇಲ್ಲಿನ ಕವಿತೆಗಳು ತುಡಿಯುತ್ತವೆ.

₹120   ₹90

ಹರಿವ ಕನ್ನಡಿ | Hariva Kannadi

ಖ್ಯಾತ ಕವಿಗಳಾದ ಜಯಂತ ಕಾಯ್ಕಿಣಿಯವರು ಹೇಳಿರುವಂತೆ ಬಿಟ್ಟುಬಿಡದೆ ಓದಿಸಿಕೊಳ್ಳುವ ಕಾಡುವ ಗುಣ ಇಲ್ಲಿನ ಕವಿತೆಗಳಿಗೆ ಇವೆ.

₹120   ₹90

ನರಕದ ಕೆನ್ನಾಲಿಗೆಯಂಥ ನಿನ್ನ ಬೆನ್ನಹುರಿ | Narakada Kennaaligeyantha Ninna Bennahuri

ಕವಿತೆಗೆ ಓದುಗರೇ ಇಲ್ಲವೆನ್ನುವವರ ಮುಂದೆ ಇಲ್ಲಿನ ಕವಿತೆಗಳನ್ನು ನಿಲ್ಲಿಸಬೇಕು. ಯಾಕೆಂದರೆ ಅಬ್ದುಲ್ ರಶೀದ್ ಅವರ ಕವಿತೆಗಳನ್ನು ಓದುವುದೇ ಒಂದು ಪರಮಸುಖ. ಅಷ್ಟು ತೀಕ್ಷ್ಮವಾದ ವೇಗ ಇಲ್ಲಿನ ಕವಿತೆಗಳಿಗಿವೆ. ಇಲ್ಲಿನ ಕವಿತೆಗಳು ಓದುಗನೊಳಗೆ ಹುದುಗಿರುವ ಕವಿಯನ್ನು ಬಡಿದೆಬ್ಬಿಸುವುದಂತು ನಿಜ!

₹130   ₹98

ನಿಶ್ಚಲವ ಕಲಕಿದ ಹಕ್ಕಿ | Nischalava Kalakida Hakki

ಆವರಣಗಳಿಂದ ಕಳಚಿಕೊಂಡ ಆತ್ಮದ ಹೊನಲು ಈ ಕವಿತೆಗಳಲ್ಲಿವೆ.. ವಿವರಿಸಲು ಹೋದರೆ ಮಾತು ಸೋಲುತ್ತದೆ. ಈ ಕವಿತೆಗಳನ್ನು ಓದಿದಾಗ, ಒಂದು ವಿಚಿತ್ರವಾದ ನಿರುಮ್ಮಳ ಶಾಂತ ಸ್ಥಿತಿಯ ಅನುಭೂತಿ ಉಂಟಾಗುತ್ತದೆ.

₹100   ₹75

ನೋಡಲು ಮರೆಯದಿರಿ ಮರೆತು ನಿರಾಶರಾಗದಿರಿ | Nodalu mareyadiri marethu nerasharagadhiri

ಡಾ ಶರಣು ಹುಲ್ಲೂರು ವೃತ್ತಿಯಿಂದ ಪತ್ರಕರ್ತರಾಗಿರುವ ಡಾ. ಶರಣು ಹುಲ್ಲೂರು ಹುಟ್ಟಿದ್ದು ಗದಗ ಜಿಲ್ಲೆ ರೋಣ ತಾಲೂಕಿನ ಹುಲ್ಲೂರು ಗ್ರಾಮದಲ್ಲಿ. ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಪಿಎಚ್‌.ಡಿ ಪದವಿ ಪಡೆದಿರುವ ಅವರು ವಿಜಯ ಕರ್ನಾಟಕ ಪತ್ರಿಕಾ ಬಳಗದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. 'ತಪ್ಪು ಮಾಡಿದ ತಾತ', 'ಮುಂದಿರುವ ಮೌನ', 'ಜುಗಲ್ಬಂದಿ' ಎಂಬ ಕವನ ಸಂಕಲನಗಳನ್ನು, ’ಚಂದನ ಸಿಂಚನ’ ಎಂಬ ಬಿ.ಜೆ.ಅಣ್ಣಿಗೇರಿ ಅವರ ಜೀವನ ಚರಿತ್ರೆಯನ್ನು, ’ಮಲ್ಲಿಗೆ’, ’ಕನಸಿನ ಹುಡುಗ’ ನಾಟಕವನ್ನು Read More...

₹350   ₹263

ಕಥಾಭರಣ | Kathabharana

ಬಹುತೇಕ ಹಳ್ಳಿಗಳಲ್ಲಿ ಸುಗ್ಗಿಹಬ್ಬ ಮಾಡುತ್ತಾರೆ. ಹೊಸ ಬೆಳೆ ಮನೆಗೆ ಬಂದ ತಕ್ಷಣ, ಅದರಲ್ಲಿ ಮೊದಲ ಭಾಗವಾಗಿ ತಮ್ಮ ಯೋಗ್ಯತೆಗೆ ತಕ್ಕಂತೆ ಒಂದಿಷ್ಟು ಧಾನ್ಯವನ್ನು ಊರ ದೇವರಿಗೆ ಎಲ್ಲರೂ ಅರ್ಪಿಸುತ್ತಾರೆ. ಬಡವ, ಬಲ್ಲಿದ, ಮೇಲು, ಕೀಳು ಇತ್ಯಾದಿಗಳ ಸೋಂಕಿಲ್ಲದೆ ಎಲ್ಲರೂ ಈ ದಾನ ಮಾಡುತ್ತಾರೆ. ಅವನ್ನೆಲ್ಲಾ ಸ್ವೀಕರಿಸಿದ ದೇವಸ್ಥಾನವು ಸುಗ್ಗಿಹಬ್ಬ ಹಮ್ಮಿಕೊಳ್ಳುತ್ತದೆ. ಊರವರೇ ನೀಡಿದ ಧಾನ್ಯಗಳನ್ನು ಬಳಸಿ ಊರವರೇ ಅಡಿಗೆ ತಯಾರಿಸಿ, ಎಲ್ಲರೂ ಊಟ ಮಾಡುತ್ತಾರೆ. ಈ ಊಟವು ಊರವರಿಗೆಲ್ಲಾ ಅತ್ಯಂತ ರುಚಿಯೆನ್ನಿಸುತ್ತದೆ.ಇಂತಹ ಸುಗ್ಗಿಹಬ್ಬದ ರುಚಿ ಈ ಕಥಾಸಂಕಲನಕ್ಕೆ ದಕ್ಕಿದೆ. ಕನ್ನಡ ಸಾಹಿತ್ಯಲೋಕದ ಸಾಕಷ್ಟು ಹೊಸ ಕತೆಗಾರರು ಮತ್ತು ಒಂದಿಷ್ಟು ಹಳಬರು ಈ ಸಂಕಲನಕ್ಕೆ ತಮ್ಮ ಕತೆಯನ್ನು ನೀಡಿದ್ದಾರೆ. ಸದ್ಯದ ಕನ್ನಡ ಲೋಕದ ಹೊಸ ಬರವಣಿಗೆಯ ಪಕ್ಷಿನೋಟವನ್ನು ಈ ಸಂಕಲನ ನೀಡುತ್ತದೆ. ಊರವರೆಲ್ಲರೂ ಒಂದಾದಾಗ ಮೂಡುವ ಸಹೃದಯತೆ, ಆತ್ಮೀಯತೆ ಮತ್ತು ಲವಲವಿಕೆಯೂ ಇಲ್ಲಿ ಕಾಣುತ್ತದೆ. ಇಂತಹ ಒಗ್ಗಟ್ಟಿನ ಕಾರ್ಯಗಳು ಸದ್ಯದ ಸಾಹಿತ್ಯದ ಲೋಕವನ್ನು ಜೀವಂತ ಉಳಿಸುವುದಕ್ಕೆ ಅವಶ್ಯ ಬೇಕಾದ ಲಸಿಕೆಯಾಗಿದೆ. ಕನ್ನಡ ಸಾಹಿತ್ಯ ಚರಿತ್ರೆಯ ಹಿರಿಯ ಮಹನೀಯರೆಲ್ಲರ ಪ್ರತಿಫಲನವೂ ಈ ಕತೆಗಳಲ್ಲಿ ಕಾಣುತ್ತದೆ. ಆ ನಿಟ್ಟಿನಿಂದ ಇದು ಪರಂಪರೆಯ ನೆಲದಲ್ಲಿ ಬೆಳೆದ ಹೊಸ ಬೆಳೆಯಾಗಿದೆ. ಊರ ದೇವಸ್ಥಾನವೂ ಒಂದಿಷ್ಟು ಹೊಲವನ್ನು ಹೊಂದಿದ್ದು, ಅದೂ ಕೊಯ್ದು ಮಾಡಿದ ಧಾನ್ಯದಲ್ಲಿ ಒಂದಿಷ್ಟು ಭಾಗವನ್ನು ಸುಗ್ಗಿಹಬ್ಬಕ್ಕೆ ದಾನ ಮಾಡುತ್ತದೆ. ಅದೇ ರೀತಿ ಈ ಸಂಕಲನವನ್ನು ಶ್ರದ್ಧೆಯಿಂದ ಸಂಪಾದಿಸಿದ ಅಜಿತ್ ಹರೀಶಿ ಮತ್ತು ವಿಠಲ್ ಶೆಣೈ ತಮ್ಮ ಕತೆಯನ್ನೂ ಇಲ್ಲಿ ಓದುಗರಿಗೆ ಕೊಟ್ಟಿದ್ದಾರೆ. ರುಚಿಯ ನಿರ್ಧಾರದಲ್ಲಿ ನಾಲಿಗೆಗಿಂತಲೂ ಮನಸ್ಸು ದೊಡ್ಡ ಪಾತ್ರವಹಿಸುತ್ತದೆ. ಎಲ್ಲರೂ ಒಗ್ಗಟ್ಟಾಗಿ ಸಂಭ್ರಮದಿಂದ ತಯಾರಿಸಿದ ಸುಗ್ಗಿಯೂಟ ರುಚಿಯಾಗಿರಲು ಮನಸ್ಸೇ ಮುಖ್ಯ ಕಾರಣ. ಆದರೆ ಪಕ್ಕದೂರಿನವರೂ ನಮ್ಮೂರಿನ ಸುಗ್ಗಿ ಊಟ ರುಚಿ ಎಂದರೆ ಆಗ ಆ ಪಾಕ ಮಹತ್ವ ಪಡೆದುಕೊಳ್ಳುತ್ತದೆ. ಅಂತಹ ದಾರಿಯಲ್ಲಿ ಇಲ್ಲಿನ ಹಲವು ಕತೆಗಳಿವೆ ಎನ್ನುವುದು ನನಗೆ ಭರವಸೆಯನ್ನು ಕೊಟ್ಟಿದೆ.

₹290   ₹218

ಕನಸು ಸೊಗಸು | Kanasu Sogasu

ಕನಸುಗಳನ್ನು ಶೃಂಗರಿಸುವ ಜರೂರನ್ನು ಕಾಪಾಡಿಕೊಳ್ಳುವುದು. ಸ್ತ್ರೀ ಸ್ವಾತಂತ್ರ್ಯ, ವೈಚಾರಿಕತೆಯನ್ನು ಮುಟ್ಟಲು ಕಾದಂಬರಿ ಮೇರೆ ಮೀರಿ ಪ್ರಯತ್ನಿಸಿದೆ ಮತ್ತು ಆ ಮೂಲಕ ಸರ್ವಾಂಗೀಣ ಬೆಳವಣಿಗೆ ಸಾಧ್ಯತೆಯನ್ನು ಸಾರಲು ಪರಿಕ್ರಮಿಸಿದೆ. ಎಲ್ಲಾ ತಾರತಮ್ಯವನ್ನು ತಿರಸ್ಕರಿಸಿ ಸಾಮಾಜಿಕ ಕಳಕಳಿಯ ಅಂಶವನ್ನು ಎತ್ತಿಹಿಡಿಯುವ ಮಾರ್ಗದಲ್ಲಿ ಸಾಗಿದೆ. ಲೇಖಕರೊಬ್ಬರ ಲೇಖನಿಯಲ್ಲಿ ಎಲ್ಲವೂ ಶುಭಂ ಆಗುವ ಸಂಭವವಿರುವುದರಿಂದ, ಕಾದಂಬರಿಯೂ ಸಹ ಆತಂಕ, ತಲ್ಲಣಗಳನ್ನು ಹೊತ್ತು ಕೊಂಡೇ, ಆದಷ್ಟೂ ಬದುಕಿನ ಸಹಜತೆಯನ್ನು ಕಾಯ್ದುಕೊಳ್ಳಲು ಯತ್ನಿಸಿದೆ. ಕಥೆಯಲ್ಲಿ ಹೆಚ್ಚು ಕಡಿಮೆ ಎಲ್ಲಾ ಪಾತ್ರಗಳಿಗೂ ಅವಕಾಶವಿದೆ. ಅಧ್ಯಾಯದ ಉಪಕತೆಗಳಲ್ಲಿ ಕನೆಕ್ಟಿವಿಟಿ ಇದೆ. ಒಟ್ಟು ಮುನ್ನೂರಕ್ಕೂ ಹೆಚ್ಚು ಪುಟಗಳ ಕಾದಂಬರಿ ಮೂವತ್ತು ಅಧ್ಯಾಯಗಳನ್ನು ಒಳಗೊಂಡಿದೆ. ಸಾದಾಸೀದವಾಗಿ ಯಾವುದೇ ಭಾರವಿಲ್ಲದೇ ಸರಳವಾಗಿ ಓದಿಸಿಕೊಳ್ಳುತ್ತದೆ. ಉದ್ವಿಗ್ನತೆ, ಒತ್ತಡದ ಸನ್ನಿವೇಶಗಳನ್ನು ಬರೆಯುವಾಗ ತೀರಾ ಒದ್ದಾಡದೆ, ನಿರುದ್ವಿಗ್ನವಾಗಿ ನಿರೂಪಿಸುತ್ತಾ ನೇರ ಮಾರ್ಗಕ್ಕೆ ತಂದು ಬಿಡುತ್ತಾರೆ. ಶೃಂಗಾರದ ಸಮಯ ತೀರಾ ಕಡಿಮೆಯಿವೆ. ಧಾರಾವಾಹಿಗಳಂತೆ ಅಸಹಜತೆಗಳಿಲ್ಲದೆ, ಕೃತಕ ಅಲಂಕಾರಗಳಿಲ್ಲದೆ, ನಿರಾಡಂಬರವಾಗಿ ವಿನ್ಯಾಸಿಸಿದ್ದಾರೆ. ಒಂದು ಸಿನೆಮಾವನ್ನು ಕುಟುಂಬ ಸಮೇತವಾಗಿ ನೋಡಬಹುದು ಅನ್ನುತ್ತಾರಲ್ಲ ಹಾಗೆ ಕನಸು ಸೊಗಸು ಎಲ್ಲಾ ವರ್ಗದ, ವಯೋಮಾನದ ಮಂದಿಯೂ ಓದಬಹುದಾದ ವಸ್ತು ವಿಷಯ ಹೊಂದಿದೆ. ಶ್ರೀನಾಥರಿಗೆ ಒಳಿತಾಗಲಿ, ಅವರು ಹಲವಾರು ಪ್ರಕಾರಗಳಲ್ಲಿ ಬರೆಯುವಂತಾಗಲಿ. ಈ ಕಾದಂಬರಿಯ ಸೊಗಡು ಸಾಹಿತ್ಯಕವಾಗಿ ಸಾಕಷ್ಟು ಹರಡಲಿ ಎಂಬ ಸದಾಶಯದೊಡನೆ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

₹450   ₹338

ಶತ್ರುಘ್ನ | Shatrughna

ವಾಲ್ಮೀಕಿ ರಾಮಾಯಣದಲ್ಲಿ ಶತ್ರುಘ್ನನ ಪಾತ್ರ ಅಷ್ಟೊಂದು ಮಹತ್ವವನ್ನು ಪಡೆದಿಲ್ಲ. ರಾಮನ ಕಡೆಯ ತಮ್ಮನಾಗಿ, ರಾಮಲಕ್ಷ್ಮಣರು ಕಾಡಿಗೆ ಹೋದ ಮೇಲೆ, ಭರತ ನಂದಿಗ್ರಾಮದಲ್ಲಿ ನಿಂತಮೇಲೆ ಅನಿವಾರ್ಯವಾಗಿ ಆಯೋಧ್ಯೆಯ ಆಡಳಿತವನ್ನು ನಿರ್ವಹಿಸಿದನೆಂಬಷ್ಟು ಮಾತ್ರ ವಿವರ ಅಲ್ಲಿ ದೊರೆಯುತ್ತದೆ. ಆದರೆ ಸಹೋದರ ಶ್ರೀ ಪ್ರದೀಪ್ ಬೇಲೂರು ಅವರು ಮಹಾಕಾವ್ಯದಲ್ಲಿ ಮರೆಯಾದ ಶತ್ರುಘ್ನನ ವ್ಯಕ್ತಿತ್ವದ ಚಿತ್ರಣವನ್ನು ತಮ್ಮ ಈ 'ಶತ್ರುಘ್ನ' ಕಾದಂಬರಿಯಲ್ಲಿ ಆದಷ್ಟು ಸಮರ್ಥವಾಗಿಯೂ, ಪ್ರಾಮಾಣಿಕವಾಗಿಯೂ ಕಟ್ಟಿಕೊಡುವ ಪ್ರಯತ್ನವನ್ನು ಮಾಡಿದ್ದಾರೆ. ಶತ್ರುಘ್ನನ ಅಂತರಂಗದ ಒಳಹೊಕ್ಕು ನೋಡಲು ಯತ್ನಿಸಿದ್ದಾರೆ. ಶತ್ರುಘ್ನನ ಮನೋಗತದ ಮೂಲಕವೇ, ಅವನ ಹಾಗೂ ಸರಯೂ ನದಿಯ ಒಡನಾಟ, ಅಣ್ಣಂದಿರಲ್ಲಿ ಭರತನಿಗೆ ಹೆಚ್ಚು ಅಂಟಿಕೊಂಡ ಪರಿ, ಶೃತಕೀರ್ತಯೊಂದಿಗಿನ ಸರಸ ಸಲ್ಲಾಪಗಳು, ಬಲಿದ ಹಾಗೂ ಲವಣಾಸುರರೊಂದಿಗಿನ ಕದನ, ರಾಮಲಕ್ಷ್ಮಣರು ಹಾಗೂ ಭರತ ಮೂವರೂ ಆಯೋಧ್ಯೆಯನ್ನು ಅನಿವಾರ್ಯ ಕಾರಣಗಳಿಂದ ಬಿಟ್ಟು ಹೋದಾಗ, ತಾನೊಬ್ಬನೇ ಅರಮನೆಗೆ ಗಂಡು ದಿಕ್ಕಾಗಿ, ಇತ್ತ ತಾಯಂದಿರು, ಅತ್ತಿಗೆಯರು, ಮಡದಿ ಎಲ್ಲರನ್ನೂ ಸಂತೈಸುತ್ತಾ, ಅತ್ತ ಶತ್ರುಗಳಿಂದಲೂ ಆಯೋಧ್ಯೆಯನ್ನು ರಕ್ಷಿಸಿಕೊಂಡು, ಪ್ರಜೆಗಳನ್ನೂ ಸೌಖ್ಯದಿಂದ ಪಾಲಿಸಿದ ಬಗೆ, ರಾಮನಾಗಮನ ನಂತರದಲ್ಲಿ ಮಧುಪುರಕ್ಕೆ ಅರಸನಾಗಿ ಆಳಿದ ಪರಿ, ಅಶ್ವಮೇಧಯಾಗದ ಸಂದರ್ಭದಲ್ಲಿ ಯಾಗಾಶ್ವದ ಹಿಂದೆ ಅಲೆದು ಆನೇಕ ರಾಜರುಗಳೊಂದಿಗೆ ಸೆಣಸಿದ ಸಾಹಸದ ಕಥೆಗಳು ಎಲ್ಲವೂ ನಿರೂಪಿತವಾಗಿವೆ. ಪೌರಾಣಿಕ ಕಥೆಯನ್ನು ಆಧರಿಸಿ ಬರೆದರೂ, ಅದನ್ನು ಬೆಳೆಸಲು, ನಿರೂಪಿಸಲು ಕಲ್ಪನಾಶಕ್ತಿಯೂ ಅಗತ್ಯವಾಗಿ ಬೇಕಾಗುತ್ತದೆ. ಅದು ಲೇಖಕರಿಗೆ ಇದೆ. ಭಾಷೆ ಶೈಲಿಗಳು ಚೆನ್ನಾಗಿವೆ. ಸಾಕಷ್ಟು ಅಧ್ಯಯನದ ಹಿನ್ನೆಲೆಯಲ್ಲಿ ಈ ಕೃತಿಯನ್ನು ರಚಿಸಿದ್ದಾರೆ. ಕೇಕೆಯ ರಾಜ್ಯದಿಂದ ಕೋಸಲಕ್ಕೆ ಭರತ ಶತ್ರುಘ್ನರು ಪಯಣಿಸುವ ಸಂದರ್ಭದಲ್ಲಿ ಕಾದಂಬರಿಕಾರರು ಕೊಡುವ ಮಾರ್ಗದ ನಕ್ಷೆಯ ವಿವರಗಳೇ ಇದಕ್ಕೆ ಸಾಕ್ಷಿ! ಇಂತಹ ಕಾದಂಬರಿಯನ್ನು ಕನ್ನಡದ ಓದುಗರಿಗೆ ಕೊಟ್ಟಿರುವ ಪ್ರದೀಪ್‌ ಬೇಲೂರು ಅವರು ಅಭಿನಂದನಾರ್ಹರು, ಅವರಿಂದ ಇನ್ನಷ್ಟು ಉತ್ತಮ ಕೃತಿಗಳು ಬರಲಿ ಎಂದು ತುಂಬು ಹೃದಯದಿಂದ ಹಾರೈಸುತ್ತೇನೆ. -ಆಶಾ ರಘು ಕಾದಂಬಗಾರ್ತಿ

₹120   ₹90