• ಯಾವುದೇ ಕನ್ನಡ ಪುಸ್ತಕಕ್ಕಾಗಿ ಸಂಪರ್ಕಿಸಿ    
  • Call Us : +91 7022122121 / +91 8861212172
  • Free shipping above ₹499    
  • ಯಾವುದೇ ಕನ್ನಡ ಪುಸ್ತಕಕ್ಕಾಗಿ ಸಂಪರ್ಕಿಸಿ    
  • Call Us : +91 7022122121 / +91 8861212172
  • Free shipping above ₹499    
back

Publishers

Categories

Authors

Languages

Book Type

Clear All
Filter
ಕಾಡುಪ್ರಾಣಿಗಳ ಜಾಡಿನಲ್ಲಿ | Kadupranigala Jadinalli

ಈ ಭೂಮಿಯೆಂಬ ಗ್ರಹದಲ್ಲಿ ನಮ್ಮ ಸಹ ಪ್ರಯಾಣಿಕರಾಗಿ ಸಂಚರಿಸುವ ಸಮಸ್ತ ಜೀವಕೋಟಿಯೂ ಒಂದೇ ಜೀವಜಾಲದ ಭಾಗಗಳು. ಈ ಜೀವ ಜಾಲವನ್ನು ರಕ್ಷಿಸುವುದು ಅನಿವಾರ್ಯವೂ ಅಗತ್ಯವೂ ಆಗಿದೆ. ಇದರ ಜೊತೆಗೆ ಆರಣ್ಯ ಸಂರಕ್ಷಣೆಯೂ ಅಷ್ಟೇ ಮುಖ್ಯ. ಕಾಡುಪ್ರಾಣಿಗಳ ಜಾಡಿನಲ್ಲಿ ಪುಸ್ತಕದಲ್ಲಿ ಕಾರಂತರು ಈ ವಿಚಾರಗಳನ್ನು ಸವಿಸ್ತಾರವಾಗಿ ಚರ್ಚಿಸಿದ್ದಾರೆ.

₹175   ₹156

ಜೈ ಭೀಮ್ : ಡಾ ಬಿ ಆರ್ ಅಂಬೇಡ್ಕರ್ ಜೀವನ ಚರಿತ್ರೆ | Jai Bhim Dr. B R Ambedkar Jeevana Charitre

ಅಂಬೇಡ್ಕರ್ ಹೆಸರಿನ ಬದಲು ದೈವದ ಸ್ಮರಣೆ ಮಾಡಿದರೆ ಸೌಭಾಗ್ಯ ಕೂಡಿಬರಲಾರದು. ಕಾಣದ ದೈವಕ್ಕಿಂತ ಕೈಹಿಡಿದು ನಡೆಸುವ ಧೀಮಂತ ನಾಯಕ ಮತ್ತು ಆದರ್ಶ ಮೌಲ್ಯಗಳ ಸಾಕಾರಮೂರ್ತಿ ಬಾಬಾ ಸಾಹೇಬರು. ಅವರನ್ನು ಪರಿಚಯಿಸುವ ಗ್ರಂಥಗಳ ಮಹಾಪೂರಕ್ಕೆ ಈಗಾಗಲೇ ಸಾರವತ್ತಾಗಿ ನೆಲ್ಸನ್ ಮಂಡೇಲಾ ಜೀವನ ಚರಿತ್ರೆಯನ್ನು ನೀಡಿರುವ ಡಾ. ಎಂ. ವೆಂಕಟಸ್ವಾಮಿಯವರ ನೂತನ ಮೌಲಿಕ ಕೃತಿಯ ಸೇರ್ಪಡೆಯಾಗುತ್ತಿದೆ. ನಮ್ಮ ಸಾಂಸ್ಕೃತಿಕ - ಆರ್ಥಿಕ - ಸಾಮಾಜಿಕ ಸವಾಲುಗಳನ್ನೆದುರಿಸಲು ಡಾ. ಅಂಬೇಡ್ಕರ್ ಅವರ ಚಿಂತನೆ ಮತ್ತು ಹೋರಾಟಗಳನ್ನು ವಿಹಂಗಮ ಶೈಲಿಯಲ್ಲಿ ಪ್ರಸ್ತುತ ಕೃತಿಯು ಕಟ್ಟಿಕೊಡುತ್ತದೆ. ಬಾಬಾ ಸಾಹೇಬರ ಜೀವನ, ಹೋರಾಟ, ವಿದ್ವತ್ತು, ಕಳಕಳಿ ಮುಂತಾದವು ನಮಗಿಂದು ದಾರಿದೀಪ. ಸನಾತನವೆಂಬ ಹೊರೆಗೆ ಪರ್ಯಾಯಗಳಲ್ಲಿ ಅಂಬೇಡ್ಕರ್ ಅವರ ಚಿಂತನೆ ಮತ್ತು ಹೋರಾಟ ಅನನ್ಯವಾದುವು. ಡಾ. ಜಿ. ರಾಮಕೃಷ್ಣ

₹350   ₹312

ನಮ್ಮ ದೇಹದ ವಿಜ್ಞಾನ | Namma Dehada Vijnana

`ನಮ್ಮ ದೇಹದ ವಿಜ್ಞಾನ` ಎಂಬುದೇ ವಿಸ್ಮಯಕಾರಿ ಪರಿಕಲ್ಪನೆ, ಮಾನವನ ದೇಹವನ್ನು ಬಿಡಿ ಬಿಡಿಯಾಗಿ ಈ ಕೃಷಿಯಲ್ಲಿ ಪರಿಚಯ ಮಾಡಿಕೊಡಲಾಗಿದೆ. ನಮ್ಮ ದೇಹದ ಬಗ್ಗೆ ಹಾಗೂ ಅದರಲ್ಲಿ ಹೊಂದಾಣಿಕೆಯಿಂದಿರುವ ವಿವಿಧ ಅಂಗಾಂಗಗಳ ರಚನೆ ಮತ್ತು ಕಾರ್ಯ ವಿಧಾನಗಳ ಬಗ್ಗೆ ಅನೇಕ ಪುಸ್ತಕಗಳು ಲಭ್ಯವಿದೆ. ಆದರೆ ನಮ್ಮ ದೇಹದಲ್ಲಿ ಅಡಕವಾಗಿರುವ ಭೌತವಿಜ್ಞಾನ, ರಸಾಯನವಿಜ್ಞಾನ, ಗಣಿತ ಹಾಗೂ ಎಂಜಿನಿಯರಿಂಗ್ ಅಂಶಗಳನ್ನು ಇಲ್ಲಿ ಹಕ್ಕಿ ಹೆಕ್ಕಿ ತೆಗೆದು ಪರಿಚಯಿಸಿರುವ ಪರಿ ಅನನ್ಯ; ಕನ್ನಡದಲ್ಲಿ ಇದು ಒಂದು ಹೊಸ ಪ್ರಯೋಗ, ಇಲ್ಲಿ ನಿರೂಪಿಸಿರುವ ದಾಟಿ ವಿದ್ಯಾರ್ಥಿ ಮತ್ತು ಅಧ್ಯಾಪಕರನ್ನಷ್ಟೇ ಅಲ್ಲ, ಜನ ಸಾಮಾನ್ಯರನ್ನೂ ಓದಲು ಪ್ರೇರೇಪಿಸುತ್ತದೆ. ಇದೊಂದು `ದೇಹದ ಜ್ಞಾನಕೋಶ`. ಇಲ್ಲಿನ ಭಾಷೆ ಸರಳ, ಓದು ಸರಾಗ ಬಹುವರ್ಣದಲ್ಲಿ ಪ್ರಕಟವಾಗಿರುವುದು ಸಂಪುಟದ ಆಕರ್ಷಣೆಯನ್ನು ಹೆಚ್ಚಿಸಿದೆ. ನಮ್ಮ ದೇಹವು ಹೋಲಿಕೆಯಲ್ಲಿ ಮಾನವನಿರ್ಮಿತ ಯಾವುದೇ ಯಂತ್ರಕ್ಕೆ ಸೆಡ್ಡು ಹೊಡೆಯಬಲ್ಲದು ಎಂಬ ವಾಸ್ತವಾಂಶವನ್ನು ಸಂಪುಟದುದ್ದಕ್ಕೂ ನಿದರ್ಶನಗಳೊಡನೆ ವಿವರಿಸಲಾಗಿದೆ. ಪ್ರಥಮಾರ್ಧದಲ್ಲಿ ನಮ್ಮ ದೇಹದ ವಿವಿಧ ಅಂಗಗಳ ಸಮಗ್ರ ಪರಿಚಯವನ್ನು ಎಳೆಎಳೆಯಾಗಿ ದಾಖಲಿಸಲಾಗಿದೆ. ಅಂಗಾಂಗಗಳ ರಚನೆ, ಅವುಗಳ ಕ್ರಿಯಾಶೀಲತೆ ಹಾಗೂ ದೇಹದಲ್ಲಿ ಅವುಗಳ ಪಾತ್ರವನ್ನು ಅಚ್ಚುಕಟ್ಟಾಗಿ ಚಿತ್ರಿಸಲಾಗಿದೆ. ಈ ವಿಭಾಗ ಸಂಪೂರ್ಣವಾಗಿ ವೈದ್ಯರ ಲೇಖನಿಯಿಂದಲೇ ಮೂಡಿಬಂದಿರುವುದು ವಿಶೇಷ. ದ್ವಿತೀಯಾರ್ಧದಲ್ಲಿ ವಿವಿಧ ಅಂಗಾಂಗಗಳ ಕಾರ್ಯಾಚರಣೆಯಲ್ಲಿ ಅಡಗಿರುವ ವಿಜ್ಞಾನದ ಬೇರೆ ಬೇರೆ ತತ್ತ್ವಗಳನ್ನು ಮನಮುಟ್ಟುವ ಹಾಗೆ ಮತ್ತು ಸುಲಭವಾಗಿ ಗ್ರಹಿಸಲು ಅನುವಾಗುವಂತೆ ಬಿಂಬಿಸಲಾಗಿದೆ. ದೇಹದ ಸಮತೋಲವನ್ನು ಕಾಪಾಡುವ ಗುರುತ್ವ, ಚಲನೆ ಹಾಗೂ ನಡೆದಾಡುವುದನ್ನು ಭೌತವಿಜ್ಞಾನದ ಹಿನ್ನೆಲೆಯಲ್ಲೂ, ರಕ್ತಪರಿಚಲನೆಯನ್ನು ನಗರ ನೀರು ಸರಬರಾಜು ಮತ್ತು ಒಳಚರಂಡಿ ವ್ಯವಸ್ಥೆಗೂ ಹೋಲಿಸಿರುವುದು ನಿರೂಪಣೆಗೊಂದು ಉದಾಹರಣೆ. ಕೃತಿಯ ಸರಳ ಕಿವಿಯಲ್ಲಿ ಶಬ್ದವಿಜ್ಞಾನವೂ ಇದೆ. ಮೆಕ್ಯಾನಿಕ್ಸ್ ಕೂಡ ಇದೆ. ಕಣ್ಣನ್ನು ಕ್ಯಾಮೆರಾಕ್ಕೆ ಹೋಲಿಸಿರುವುದರಲ್ಲಿ ಅರ್ಥವಿದೆ, ಇಡೀ ದೇಹವೇ ಒಂದು ರಾಸಾಯನಿಕ ಕಾರ್ಖಾನೆ. ಕ್ಷಣಕ್ಷಣಕ್ಕೂ ಸಹಸ್ರಾರು ರಾಸಾಯನಿಕ ಕ್ರಿಯೆಗಳು ಜರಗುತ್ತಿದ್ದರೂ ಅವು ನಮ್ಮ ಅರಿವಿಗೆ ಬರುವುದಿಲ್ಲ. ಜೀನ್ಸ್ಗಳಲ್ಲಿ ಅಡಕವಾಗಿರುವ ಗುಪ್ತ ಕೋಡುಗಳು ಮತ್ತು ಡಿಕೋಡಿಂಗ್ ಕಗ್ಗಂಟು ಬಿಡಿಸುವ ಇಲ್ಲಿನ ವಿವರಣೆ ಓದುಗರಿಗೆ ಅದ್ಭುತ ಲೋಕವನ್ನೇ ಅನಾವರಣ ಮಾಡುತ್ತದೆ. ಮಿದುಳನ್ನು ಯಾವ ಗಣಕಯಂತ್ರಕ್ಕೂ ಹೋಲಿಸಲಾಗದು. ಅದೇ ಒಂದು ಸೂಪರ್ ಕಂಪ್ಯೂಟರ್, ಮುಖದಲ್ಲಿ ಸ್ವರ್ಣಾನುಪಾತದ ಸೂತ್ರವಿದೆ. ಎಲ್ಲವೂ ಗಣಿತದ ಲೆಕ್ಕಾಚಾರದಂತೆಯೇ ಇದೆ.

₹1800   ₹1602

ನುಡಿತೇರನೆಳೆದವರು : ಬಾನುಲಿ ಕಲಿಗಳು | Nuditeraneledavaru : Banuli Kaligalu

1) ಕರ್ನಾಟಕದ ಆಕಾಶವಾಣಿ ಕೇಂದ್ರಗಳು ಯಾವಾಗ ಆರಂಭ ಗೊಂಡವು , ಗೊತ್ತೇ ? 2) ದೇಶದ ಮೊದಲ ಖಾಸಗಿ ವಾಹಿನಿ ನಮ್ಮ ಮೈಸೂರಿನ ಕಥೆ ಗೊತ್ತೇ ? 3) ಮೈಸೂರು ಬೆಂಗಳೂರಾಗಿದ್ದು, 19 ವರ್ಷ ಸ್ಥಗಿತಗೊಂಡಿದ್ದು, ಪುನರಾರಂಭ ಗೊಂಡದ್ದು ತಿಳಿದಿದೆಯೇ ? 4) ದೊರೆಸ್ವಾಮಿ ಆಯ್ಯಂಗಾರ್, ಆರ್.ಕೆ ಶ್ರೀಕಂಠನ್ , ಮೈಸೂರು ವಾಸುದೇವಾಚಾರ್ಯರ ಮೊಮ್ಮಗ ಎಸ್ ಕೃಷ್ಣಮೂರ್ತಿ, ಎಚ್ ಕೆ ನಾರಾಯಣ, ಪದ್ಮಚರಣ ಮೊದಲಾದ ಸಂಗೀತ ಮಾಂತ್ರಿಕರು ಆಕಾಶ ವಾಣಿಯಲ್ಲಿ 30 ವರ್ಷಗಳಿಗೂ ಮೀರಿ ಕಲಾವಿದರಾಗಿ ಸೇವೆ ಸಲ್ಲಿಸಿದ್ದಾರೆ ಎಂದು ಬಲ್ಲಿರಾ ? 5) ಆಕಾಶವಾಣಿ 1954 ರಲ್ಲೇ ಆಹ್ವಾನಿತ ಶ್ರೋತೃಗಳ ಸಮ್ಮುಖದಲ್ಲಿ ಸಂಗೀತ ಕಛೇರಿ ಏರ್ಪಡಿಸುತ್ತಿತ್ತು ಅಂದರೆ ಆಶ್ಚರ್ಯ ಆಗುತ್ತದೆಯೇ? 6) ಧ್ವನಿಪರೀಕ್ಷೆ ಹೇಗೆ ನಡೆಯುತ್ತಿತ್ತು, ಅದಕ್ಕೆ ನಿಯಮಾವಳಿಗಳು ರೂಪುಗೊಂಡ ಬಗೆ ಎಂಥ ಚೆಂದ ಗೊತ್ತೇ ? 7) ಆಕಾಶವಾಣಿ ರೂಪಕ , ಆಕಾಶವಾಣಿ ನಾಟಕ ಲೋಕದಲ್ಲಿ ಸಂಚರಿಸಿದ್ದೀರಾ.. 8) ವಿಜ್ಞಾನ ಸರಣಿಗಳನ್ನು , ಸರಳ ವಾಗಿ ರೂಪಿಸಿ, ದೇಶದಲ್ಲೇ ಖ್ಯಾತಿ ಪಡೆದ ಬೆಂಗಳೂರು ಆಕಾಶವಾಣಿ ಪ್ರಯೋಗಗಳು.. ಅಬ್ಬಾ....! 9) ಕೃಷಿ ಪಾಠ ಶಾಲೆಯಲ್ಲಿ ಹಸು ಕರು ಎತ್ತು ಎಮ್ಮೆ ಕೋಳಿ ಬಹುಮಾನ ಕೊಟ್ಟರು. ರೈತರಿಗೆ ಬೋರೆವೆಲ್ ತೋಡಿಸಿಕೊಟ್ಟರು. ಕೇಳಿದ್ದೀರಾ? 10) ಆಕಾಶವಾಣಿ ಚಿತ್ರಗೀತೆ ಆಧಾರಿತ ಕಾರ್ಯಕ್ರಮ ಗಳನ್ನು ಉದ್ಘೋಷಕರು ಪಾಳಿಗಳಲ್ಲಿ ಪ್ರಸ್ತುತಪಡಿಸುತ್ತಾರೆ. ಅವರ ಅನಿಸಿಕೆಗಳು ಮನದ ಮಾತು ಕೇಳಿದ್ದೀರಾ.... ............ ಇಂಥಹ ಹತ್ತು ಹಲವು ವಿಚಾರಗಳನ್ನು ಹೊತ್ತು ತರುತ್ತಿದೆ, "ನುಡಿ ತೇರನೆಳೆದವರು, ಬಾನುಲಿ ಕಲಿಗಳು" ಪುಸ್ತಕ. 1940 ರಿಂದ 1990 ರ ಅವಧಿಯಲ್ಲಿ ಆಕಾಶವಾಣಿಯಲ್ಲಿ ಸೇವೆ ಸಲ್ಲಿಸಿದ ದಿಗ್ಗಜ ಪ್ರಸಾರಕರ ವ್ಯಕ್ತಿಚಿತ್ರಗಳನ್ನು ಪರಿಚಯಿಸುತ್ತಿದೆ "ನುಡಿ ತೇರ ನೆಳೆದವರು" ಪುಸ್ತಕ. ಕರ್ನಾಟಕದ ಆಕಾಶವಾಣಿ ಕೇಂದ್ರಗಳಲ್ಲಿ ನಡೆದ ಕೆಲಸಗಳ ಸ್ಥೂಲ ದಾಖಲೀಕರಣ! ಕರುನಾಡ ಕೊರಳಿನ ಕಥೆಗಳು ! ! ಪ್ರಯೋಗಗಳು, ಪರಿಕಲ್ಪನೆಗಳು !! ಇಂಥ ಒಂದು ಪ್ರಯತ್ನ , ದೇಶದಲ್ಲಿ ಮೊದಲು ಎಂದಿದ್ದಾರೆ ಹಲವಾರು ಪರಿಣತರು. ಬನ್ನಿ, ನುಡಿ ತೇರ ಎಳೆದ ದಿಗ್ಗಜರಿಗೆ ನಮಸ್ಕಾರ ಮಾಡೋಣ. ಕನ್ನಡ ಭಾಷೆಗೆ , ಸಂಗೀತ , ಸಾಂಸ್ಕೃತಿಕ ಲೋಕಕ್ಕೆ ಆಕಾಶವಾಣಿ ನೀಡಿದ ಕೊಡುಗೆಗಳನ್ನು ಸ್ಮರಿಸೋಣ

₹390   ₹347