‘ಕ್ಷಯ’ ಕಾದಂಬರಿಯು ಗಾತ್ರದಲ್ಲಿ ಚಿಕ್ಕದಿದ್ದರೂ (…ಪುಟಗಳು) ಅಚ್ಚರಿಪಡುವಷ್ಟು ಸಾಂದ್ರವಾದ ಹಾಗೂ ಅಷ್ಟೇ ವಿಸ್ಮತವಾದ ಜಗತ್ತೊಂದು ಅದರೊಳಗಿದೆ. ಹೊನ್ನಾವರ ಹತ್ತಿರದ, ಕರಾವಳಿಯ ಒಂದು ಚಿಕ್ಕ ಹಳ್ಳಿಯ ಪರಿಸರದಲ್ಲಿ ಬಿಚ್ಚಿಕೊಳ್ಳುತ್ತಾ ಹೋಗುವ ಕಾದಂಬರಿಯ ಕಥಾಜಗತ್ತಿನಲ್ಲಿ ಸುಮಾರು 25ಕ್ಕೂ ಹೆಚ್ಚು ಪಾತ್ರಗಳು ಕಾಣಿಸಿಕೊಳ್ಳುತ್ತವೆ.
‘ಕ್ಷಯ’ ಕಾದಂಬರಿಯು ಗಾತ್ರದಲ್ಲಿ ಚಿಕ್ಕದಿದ್ದರೂ (…ಪುಟಗಳು) ಅಚ್ಚರಿಪಡುವಷ್ಟು ಸಾಂದ್ರವಾದ ಹಾಗೂ ಅಷ್ಟೇ ವಿಸ್ಮತವಾದ ಜಗತ್ತೊಂದು ಅದರೊಳಗಿದೆ. ಹೊನ್ನಾವರ ಹತ್ತಿರದ, ಕರಾವಳಿಯ ಒಂದು ಚಿಕ್ಕ ಹಳ್ಳಿಯ ಪರಿಸರದಲ್ಲಿ ಬಿಚ್ಚಿಕೊಳ್ಳುತ್ತಾ ಹೋಗುವ ಕಾದಂಬರಿಯ ಕಥಾಜಗತ್ತಿನಲ್ಲಿ ಸುಮಾರು 25ಕ್ಕೂ ಹೆಚ್ಚು ಪಾತ್ರಗಳು ಕಾಣಿಸಿಕೊಳ್ಳುತ್ತವೆ. ಆದರೆ ಪಾತ್ರ ಚಿಕ್ಕದಿರಲಿ – ದೊಡ್ಡದಿರಲಿ ಮೂಲ ಕಥಾವಸ್ತುವಿನೊಂದಿಗೆ ನ್ಯಾಯಯುತ ಸಾವಯವ ಸಂಬಂಧವನ್ನು ಹೊಂದಿರುವುದು ಕಾದಂಬರಿಯ ಬಂಧದ ಒಂದು ವಿಶೇಷ.
#
ಹಿಂದಿನದು ಬೇರೆ. ಇಂದು ಮಾತ್ರ ಮನುಷ್ಯನ ಜೀವನದ ಹಲವು ವ್ಯವಹಾರಗಳಲ್ಲಿ ಸಾಹಿತ್ಯವು ಒಂದು ಎನ್ನುವುದರತ್ತ ಅದರ ಬೆಳವಣಿಗೆ ಇದೆ. ಆದರೆ ಸಾಂಸ್ಕೃತಿಕ ಹಾಗೂ ಸಾಮಾಜಿಕ ಹೊಣೆಗಾರಿಕೆಯಿಂದ ಹೊರತಾದ ಮರುಕ್ಷಣವೇ ಸಾಹಿತ್ಯವೂ ಸಗಟು ಅಷ್ಟೇ.
nil
ಡಾ ಮಿರ್ಜಾ ಬಷೀರ್
ಕಿತ್ತೂರು ಇತಿಹಾಸವನ್ನು ಕುರಿತು ಈವರೆಗೆ ಬಂದಿರುವ ಕಾದಂಬರಿಗಳನ್ನು ಗಮನಿಸಿದಾಗ, ಕಣ್ಣು ಹಾಯಿಸಿದಾಗ ಈ ಮಂಚೆ ಬಂದಿರುವುಗಳಿಗಿಂತ ಉತ್ಕೃಷ್ಟ ಮಟ್ಟದ ,ವಾಸ್ತವಿಕ ಐತಿಹಾಸಿಕ ತಳಹದಿ ಯ ಮೂಲಕ ರಾಣಿ ಚೆನ್ನಮ್ಮಾಜಿ ಮತ್ತು ಸಮಕಾಲಿನ ಪಾತ್ರಗಳನ್ನು ಜೀವಂತವಾಗಿರಿಸುವ ಎಲ್ಲಾ ಯತ್ನಗಳು ಮಂಜುನಾಥ ಅವರಿಂದ ನಡೆದಿದೆ. ಸುಮಾರು ಏಳು ವರ್ಷಗಳ ನಿರಂತರ ಅಧ್ಯಯನ ಪ್ರವಾಸ ಕಲಿಕೆಯ ಮೂಲಕ ಗಂಡು ಮೆಟ್ಟಿನ ರಾಣಿ ದಿಟ್ಟ ಚೆನ್ನಮ್ಮನ ಗಟ್ಟಿ ಕಥೆ ಹೊರಹೊಮ್ಮಿದೆ. ಇಲ್ಲಿಯವರೆಗಿನ ಕಿತ್ತೂರು ಇತಿಹಾಸ ಸಂಶೋಧನೆಯ ಲೋಪವೆಂದರೆ ಕಿತ್ತೂರು ಎಂದರೆ ಕೇವಲ ಚೆನ್ನಮ್ಮ ಮತ್ತು ಬ್ರಿಟಿಷರ ಮಧ್ಯೆ ನಡೆದ ಕಾಳಗ ಎಂಬಂತಾಗಿರುವುದು. ಇದು ಸತ್ಯವೂ ಹೌದು ಇದಷ್ಟೇ ಎನ್ನುವುದು ಅಸತ್ಯವೂ ಹೌದು. ಇಲ್ಲಿಯವರೆಗಿನ ಸಂಶೋಧನೆಯಲ್ಲಿ ಅರಮನೆ ಮತ್ತು ಗುರುಮನೆ ಸಂಬಂಧ, ಕಿತ್ತೂರು ಸಂಸ್ಥಾನ ಮತ್ತು ಪುಣಾ ಪೇಶ್ವೆಗಳ ಕುರಿತು ಸಂಶೋಧನೆ, ಕಿತ್ತೂರು ಇತಿಹಾಸದಲ್ಲಿ ಧಾರವಾಡ ಜಿಲ್ಲಾದಿಕಾರಿ ಕಛೇರಿ ಹೆಡ್ ಕ್ಲರ್ಕ್ ಹಾವೇರಿ ವೆಂಕಟರಾವ್ ನ ಪಾತ್ರ ಕುರಿತು ವಾಸ್ತವವಾಗಿ ಬರದೇ ಇರುವುದು, ಕಿತ್ತೂರು ಸಂಸ್ಥಾನ ಜೊತೆಗೆ ಸಮಕಾಲಿನ ಸಂಸ್ಥಾನಗಳ ಸಂಬಂಧ,ಕಿತ್ತೂರು ಸಂಸ್ಥಾನದ ದಿಗ್ವಿಜಯದಲ್ಲಿ ನಿರ್ಲಕ್ಷಗೊಳಗಾದ ಸೈನಿಕರು, ಕಿತ್ತೂರು ಮತ್ತು ಪೋರ್ಚುಗೀಸರ ಸಂಬಂಧ, ಕಿತ್ತೂರು ಇತಿಹಾಸದಲ್ಲಿ ನೀಗ್ರೋ ಸೈನಿಕರು ರಾಣಿ ಚೆನ್ನಮ್ಮನ ಸೊಸೆಯಂದಿರಾದ ವೀರಮ್ಮ ಮತ್ತು ಜಾನಕೀಬಾಯಿಯ ಪಾತ್ರಗಳು ಇನ್ನು ಮುಂತಾದ ಆಯಾಮಗಳಲ್ಲಿ ಕಿತ್ತೂರಿನ ಇತಿಹಾಸದ ಕುರಿತು ಸಂಶೋಧನೆ ಆಗದೇ ಇರುವುದು ಖೇದದ ವಿಷಯ. ಅನ್ನೋದಕ್ಕಿಂತ ಐತಿಹಾಸಕ ಕಾದಂಬರಿಕಾರರು ಸಮಗ್ರ ದೃಷ್ಟಿಕೋನದ ಕೊರತೆ ಎಂದು ಹೆಳಬಹುದು. ಇವೆಲ್ಲವುಗಳಿಗೆ ಪ್ರಾಮಾಣಿಕವಾಗಿ ನ್ಯಾಯ ಒದಗಿಸುವ ಕೆಲಸವನ್ನು ಮಂಜುನಾಥ್ ಕಳಸನ್ನವರ ಅವರು ಮಾಡಿದ್ದಾರೆ.
ಕವಿಚಕ್ರವರ್ತಿ ಬಿರುದಾಂಕಿತ ಮಹಾಮೇರು ಕವಿ ರನ್ನ ವಿರಚಿತ ಗದಾಯುದ್ದಂ (ಸಾಹಸ ಭೀಮ ವಿಜಯಂ) ಕೃತಿ , ಗಮಕ ವಿದ್ವಾನ್ ಡಾ. ಎಂ ಎ ಜಯರಾಮ್ ರಾವ್ ಅವರ ವ್ಯಾಖ್ಯಾನದೊಂದಿಗೆ. 'ಗದಾಯುದ್ಧ'ವನ್ನು ರನ್ನನು ತನ್ನ ಆಶ್ರಯದಾತ ಅರಸನಾದ ಸತ್ಯಾಶ್ರಯನನ್ನು ಮಹಾಭಾರತದ ಭೀಮನಿಗೆ ಹೋಲಿಸಿ, ಭೀಮನನ್ನೇ ಕಥಾನಾಯಕನನ್ನಾಗಿ ಕಲ್ಪಿಸಿ(ಕೊನೆಯಲ್ಲಿ ಪಟ್ಟಾಭಿಷೇಕವಾಗುವುದು ಭೀಮನಿಗೇ) ಬರೆದಿದ್ದಾನೆ. ಹತ್ತು ಆಶ್ವಾಸಗಳುಳ್ಳ ಈ ಚಂಪೂ ಕೃತಿಯು ಕೇವಲ ಗದಾಯುದ್ಧದ ಪ್ರಸಂಗವನ್ನಷ್ಟೇ ಕಥಾವಸ್ತುವನ್ನಾಗಿ ಹೊಂದಿದ್ದರೂ, ಸಮಗ್ರ ಮಹಾಭಾರತದ ಸಿಂಹಾವಲೋಕನವನ್ನಿಲ್ಲಿ ಕಾಣಬಹುದು.
ಕವಿಚಕ್ರವರ್ತಿ ಬಿರುದಾಂಕಿತ ಮಹಾಮೇರು ಕವಿ ರನ್ನ ವಿರಚಿತ ಗದಾಯುದ್ದಂ (ಸಾಹಸ ಭೀಮ ವಿಜಯಂ) ಕೃತಿ , ಗಮಕ ವಿದ್ವಾನ್ ಡಾ. ಎಂ ಎ ಜಯರಾಮ್ ರಾವ್ ಅವರ ವ್ಯಾಖ್ಯಾನದೊಂದಿಗೆ.
Showing 1021 to 1050 of 3736 results